ಬೆಂಗಳೂರು: ಌಂಕರ್ ಅನುಶ್ರೀ ವಿಚಾರವಾಗಿ ಸತ್ಯಾಸತ್ಯತೆ ಹೊರಗೆ ಬರಬೇಕೆಂಬುದು ನಾನು ಕೇಳುತ್ತೇನೆ ಎಂದು ಟಿವಿ9ಗೆ ಮಾಜಿ ಸಿಎಂ HD ಕುಮಾರಸ್ವಾಮಿ ಹೇಳಿದ್ದಾರೆ.
ಹಾಗೆ ಕರೆ ಮಾಡಿದ್ದರೆ.. ಅವರೊಬ್ಬ ದೇಶದ್ರೋಹಿ ಆಷ್ಟೇ

ರಾಜ್ಯದ ಜನರಿಗೆ ಸತ್ಯಾಸತ್ಯತೆ ತಿಳಿಯಬೇಕು.
ಯಾವ ಮಾಜಿ ಸಿಎಂ ಒತ್ತಡ ಹಾಕಿದ್ದಾರೆಂದು ತಿಳಿಯಲಿ. ಹೀಗೆ, ಒತ್ತಡ ಹಾಕಿದ್ದರೆ ಅವರೊಬ್ಬ ಸಮಾಜದ್ರೋಹಿ, ದೇಶದ್ರೋಹಿ ಆಷ್ಟೇ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಾನು ಇಂತಹ ಪ್ರಕರಣಗಳಲ್ಲಿ ಯಾರಿಗೂ ರಕ್ಷಣೆ ಕೊಡಲ್ಲ. ನಮ್ಮ ಪಕ್ಷದವರೇ ಆದರೂ ನಾನು ರಕ್ಷಣೆ ಕೊಡುವುದಿಲ್ಲ. ಬೇರೆ ಪಕ್ಷಗಳ ನಾಯಕರ ಬಗ್ಗೆ ನನಗೆ ಮಾಹಿತಿ ಇಲ್ಲ ಅಂತಾ HD ಕುಮಾರಸ್ವಾಮಿ ಹೇಳಿದ್ದಾರೆ.
ಅನುಶ್ರೀಯನ್ನು ನಾನು ಯಾವತ್ತೂ ನೋಡಿಲ್ಲ
ಅನುಶ್ರೀಯನ್ನು ನನ್ನ ಜೀವನದಲ್ಲಿ ಯಾವತ್ತೂ ನೋಡಿಲ್ಲ. 2-3 ತಿಂಗಳ ಹಿಂದೆ ಒಂದು ಸಂದರ್ಶನ ಮಾಡಿದ್ದಾರೆ. ನನ್ನ ಪುತ್ರನ ಜೊತೆ ಒಂದು ಸಂದರ್ಶನ ಮಾಡಿದ್ದಾರೆ. ಅದನ್ನು ಹೊರತುಪಡಿಸಿದರೆ ನನ್ನ ಮಗನಿಗೂ ಆಕೆಯ ಸಂಪರ್ಕ ಇಲ್ಲ. ಸುಮ್ಮನೆ ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಬೇಡ. ಯಾರು ಆರೋಪ ಮಾಡಿದ್ದಾರೋ ಅವರೇ ಸ್ಪಷ್ಟನೆ ನೀಡಲಿ ಎಂದು ಹೇಳಿದ್ದಾರೆ.
ಅನುಶ್ರೀ ಏನು ತಪ್ಪು ಮಾಡಿದ್ದಾರೆಂದು ನನಗೆ ಗೊತ್ತಿಲ್ಲ. ಅನುಶ್ರೀ ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮಕೈಗೊಳ್ಳಲಿ. ಇದಕ್ಕೆ ಒತ್ತಡ ಹಾಕಿದವರ ಹೆಸರನ್ನು ಬಹಿರಂಗಪಡಿಸಲಿ. ರಾಜ್ಯ ಸರ್ಕಾರ ಕೂಡಲೇ ಇದನ್ನು ಬಹಿರಂಗಪಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಿಎಂ HD ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
Laxmi News 24×7