ಬೆಂಗಳೂರು: ಸಿಲಿಕಾನ್ ಸಿಟಿ ಜನತೆಗೆ ನೆಹರೂ ತಾರಾಯದಿಂದ ಬ್ಯಾಡ್ ನ್ಯೂಸ್ ಹೊರ ಬಿದ್ದಿದ್ದು, ಈ ವರ್ಷದ ಚೂಡಾಮಣಿ ಸೂರ್ಯಗ್ರಹಣ ವೀಕ್ಷಣೆಗೆ ಅವಕಾಶ ನೀಡಿಲ್ಲ.
ಭಾರತದಲ್ಲಿ ಗೋಚರಿಸುವ ಈ ವರ್ಷದ ಕಡೆಯ ಕಂಕಣ ಸೂರ್ಯಗ್ರಹಣ, ಜೂನ್ 21ರಂದು ಸಂಭವಿಸಲಿದೆ. ಆದರೆ ಕೊರೊನಾ ಆಘಾತದ ಹಿನ್ನೆಲೆ ನೆಹರೂ ತಾರಾಲಯ ಸಾರ್ವಜನಿಕ ವೀಕ್ಷಣೆಗೆ ಅವಕಾಶ ನೀಡುತ್ತಿಲ್ಲ. ನಗರದಲ್ಲಿ ಹೆಚ್ಚುತ್ತಿರುವ ಹಿನ್ನೆಲೆ ಸಾರ್ವಜನಿಕ ವೀಕ್ಷಣೆಗೆ ತಡೆ ನೀಡಿದೆ. ಸೂರ್ಯ ಗ್ರಹಣ ವೀಕ್ಷಣೆಗೆ ನೆಹರೂ ತಾರಾಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುವ ಹಿನ್ನೆಲೆ ಸಾರ್ವಜನಿಕ ವೀಕ್ಷಣೆ ಬೇಡ ಎಂದು ತಿರ್ಮಾನಿಸಲಾಗಿದೆ.
ನೇರ ವೀಕ್ಷಣೆಗೆ ಅವಕಾಶ ನೀಡದಿದ್ದರೂ, ವೆಬ್ ಕ್ಯಾಸ್ಟಿಂಗ್ ಮಾಡಿ ತಾರಾಲಯದ ವೆಬ್ ಸೈಟ್ ಹಾಗೂ ಫೇಸ್ ಬುಕ್ ಮೂಲಕ ಲೈವ್ ಮಾಡಲು ನಿರ್ಧರಿಸಲಾಗಿದೆ. ದಕ್ಷಿಣ ಭಾರತದಲ್ಲಿ ಪಾಶ್ರ್ವ ಸೂರ್ಯಗ್ರಹಣ ಗೋಚರವಾಗುತ್ತದೆ. ಬೆಂಗಳೂರಿನಲ್ಲಿ ಶೇ.37 ರಷ್ಟು ಗ್ರಹಣ ಗೋಚರವಾಗುತ್ತದೆ. ಯಾವುದೇ ಕಾರಣಕ್ಕೂ ಬರಿಗಣ್ಣಿನಿಂದ ಸೂರ್ಯಗ್ರಹಣ ವೀಕ್ಷಣೆ ಮಾಡಬಾರದು ಎಂದು ನೆಹರೂ ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿತಿಳಿಸಿದ್ದಾರೆ.