ಬೆಳಗಾವಿ: ಲಾಕ್ ಡೌನ್ ನಿಂದಾಗಿ ಸಾರಾಯಿ ಸಿಗದಕ್ಕೆ ಕಂಗಾಲಾಗಿರುವ ಕುಡುಕರು ಮದ್ಯದಂಗಡಿ ಕಳ್ಳತನ ಯತ್ನಿಸಿ ವಿಫಲರಾಗಿದ್ದರೆ.
ಇಲ್ಲಿನ ಕಾಂಗ್ರೆಸ್ ರಸ್ತೆಯಲ್ಲಿನ ರವಿ ಹಂಜಿ ಮಾಲೀಕತ್ವದ ವೈನ್ಸ್ ಮಳಿಗೆ ಕನ್ನ ಹಾಕಿದ ಖದೀಮರು ವೈನ್ಸ್ ಶಾಪ್ ನ ಹೆಂಚು ತಗೆದಾಗ ತಗಡಿನ ಶೀಟ್ ಗಳು ಎದುರಾಗಿವೆ. ತಗಡಿನ ಶೀಟ್ ಕೊರೆದು ಕೆಳಗೆ ಇಳಿಯಲಾಗದೆ ಲಕ್ಷಾಂತರ ಮೌಲ್ಯದ ಮದ್ಯ ಬಚಾವ್ ಆಗಿದೆ.