ಬೆಂಗಳೂರು: ಬಳ್ಳಾರಿ ನಗರದ ಬೀದಿ ಬೀದಿಯಲ್ಲೂ ಯಂಗ್‌ಸ್ಟರ್ಸ್ ಗ್ಯಾಂಗ್‌ಸ್ಟರ್ಸ್ ಆಗಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಕಳವಳ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆಯಲ್ಲಿಂದು ಬಳ್ಳಾರಿ ಫೈರಿಂಗ್ ಪ್ರಕರಣದ ಬಗ್ಗೆ ಮಾತನಾಡಿದ ಅವರು, ನಾನು ಈ ಪ್ರಕರಣ ಇಲ್ಲಿಗೇ ಬಿಡಲ್ಲ, ಹೋರಾಟ ಮಾಡ್ತೀನಿ. ಬಳ್ಳಾರಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಗರದ ವಾರ್ಡ್ ವಾರ್ಡ್ಗಳಲ್ಲಿ ಯಂಗ್‌ಸ್ಟರ್ಸ್ ಗ್ಯಾಂಗ್‌ಸ್ಟರ್ಸ್ ಆಗಿ ಹೋಗಿದ್ದಾರೆ. ಎಲ್ಲದ್ದಕ್ಕೂ ಅಕ್ರಮವಾಗಿ ಸುಲಭವಾಗಿ ಹಣಗಳಿಸ್ತಿರೋದೇ ಕಾರಣ. ಜನಾರ್ದನ ರೆಡ್ಡಿ ಕುಟುಂಬ ಅಂತ್ಯ ಮಾಡಲು ಹೊರಟಿದ್ದಾರೆ. ಸಿಎಂ ಅವರಿಗೆ ನಾನು ಕೈಜೋಡಿಸಿ ಕೇಳಿಕೊಳ್ತೇನೆ. ರಾಜಕೀಯವಾಗಿ ನಮ್ಮ ನಿಮ್ಮ ಹೋರಾಟ, ಪಾದಯಾತ್ರೆ ಬೇರೆ, ದೇವರಿಚ್ಛೆ ಇತ್ತೇನೋ ನಾನು ಜೈಲಿಗೆ ಹೋಗಿ ಬಂದೆ. ನೀವು ಇನ್ನೂ ಎರಡೂವರೆ ವರ್ಷ ಇರಬೇಕು. ಬಳ್ಳಾರಿಯಲ್ಲಿ ಕಾನೂನು ಕಾಪಾಡಿ, ನಗರಕ್ಕೆ ಒಳ್ಳೆಯ ಅಧಿಕಾರಿಗಳನ್ನು ಹಾಕಿ. ಕ್ರಿಮಿನಲ್ ಹಿನ್ನೆಲೆಯವರನ್ನು ಒಟ್ಟುಗೂಡಿಸಿ ನನ್ನ ಮೇಲೆ ದಾಳಿ ಮಾಡಿದ್ರು. ಅಧಿಕಾರ ಇರಲಿ ಬಿಡಲಿ ಬಳ್ಳಾರಿಯಲ್ಲಿ ಶಾಂತಿ ನೆಲೆಸಬೇಕು ಎಂದು ಹೇಳಿದ್ದಾರೆ. ಇ
ಬಳ್ಳಾರಿಯಲ್ಲಿ ಶಾಸಕರು ಅಭಿವೃದ್ಧಿ ಮಾಡಲಿ, ತಮಗೆ ಸಿಕ್ಕ ಅವಕಾಶ ಬಳಸಿಕೊಳ್ಳಲಿ. ಗ್ಯಾಂಗ್ ಇಟ್ಕೊಂಡು ಗನ್, ರೈಫಲ್ ಇಟ್ಕೊಂಡು ಓಡಾಡೋದು ಸರಿಯಲ್ಲ. ಬಳ್ಳಾರಿ ಫೈರಿಂಗ್ ಪ್ರಕರಣದ ತನಿಖೆ ಸಿಬಿಐಗೆ ಕೊಡಿ. ಇಲ್ಲವೇ ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ. ಒಂದು ತಿಂಗಳಾದ್ರೂ ಕೇವಲ ಮೂರು ಗನ್‌ಮ್ಯಾನ್‌ಗಳ ಬಂಧನ ಆಗಿದೆ. ಖಾಸಗಿ ಗನ್‌ಮ್ಯಾನ್‌ಗಳ ಮಾಲೀಕರು ಯಾರಿದ್ದಾರೋ ಅವರ ಬಂಧನ ಮಾಡಿ. ಸಿಎಂ ಅವರು ಕ್ರಮ ವಹಿಸದಿದ್ರೆ ಕಾನೂನು ಹೋರಾಟ ಇದ್ದೇ ಇದೆ, ಮಾಡ್ತೇನೆ. ಸಿಎಂ ಅವರು ಮನಸ್ಸಾಕ್ಷಿಯಿಂದ ಯೋಚಿಸಿ ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಮನವಿ ಮಾಡಿಕೊಂಡಿದ್ದಾರೆ.
ನನ್ನ ಕಚೇರಿಯ ಹತ್ತು ಅಡಿ ದೂರದಲ್ಲೇ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಗುಂಡು ಹಾರಿಸಲಾಯ್ತು. ಶಾಸಕನ ಖಾಸಗಿ ಗನ್‌ಮ್ಯಾನ್‌ಗಳಿಂದಲೇ ಫೈರಿಂಗ್ ಆಗಿದ್ದು ಎಂದು ಎಸ್‌ಪಿ ಹೇಳಿದ್ದಾರೆ. ಇನ್ನೂ ಈ ಸಂಬಂಧ ಸಿಎಂ ಅವರು ಗಂಭೀರವಾಗಿ ಅವರ ಮನೆ ಬಳಿ ಬ್ಯಾನರ್ ಯಾಕೆ ಕಟ್ಟಿದ್ರು ಅಂತ ಕೇಳಿದ್ದರು. ಆದರೆ ಡಿಸಿಎಂ ಅವರು ತಮ್ಮ ಪಕ್ಷದ ಶಾಸಕನ ತಪ್ಪಿದ್ರೂ ಅವರ ಪರ ನಿಂತುಕೊಂಡಿದ್ದಾರೆ. ನಾನು ಆಧಾರ ಇಟ್ಕೊಂಡೇ ಮಾತಾಡ್ತಿದೀನಿ. ನಾನು ಭದ್ರತೆ ಕೇಳಿದ್ರೆ ಇರಾನ್ ನಿಂದ ತರಿಸಿಕೊಳ್ಳಲಿ, ಬಿಜೆಪಿ ಕಚೇರಿಯಿಂದ ಭದ್ರತೆ ಹಾಕಿಸಿಕೊಳ್ಳಲಿ ಎಂದು ಹೇಳಿದರು. ಡಿಕೆಶಿ ಅವರು ಡಿಸಿಎಂ ಹುದ್ದೆಯ ಘನತೆ ಕಳೆದಿದ್ದಾರೆ. ಡಿಕೆಶಿ ಅವರು ಡಿಸಿಎಂ ಹುದ್ದೆಯಲ್ಲಿರಲು ಯೋಗ್ಯರೋ ಇಲ್ವೋ ಗೊತ್ತಿಲ್ಲ ಎಂದು ಆರೋಪಿಸಿದ್ದಾರೆ.
Laxmi News 24×7