Breaking News

ಕ್ಷೇತ್ರದ ಚರ್ಚಗಳ ಜೀರ್ಣೋದ್ಧಾರಕ್ಕೆ 1.50 ಕೋಟಿ ರೂ. ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ

Spread the love

 

ಗೋಕಾಕ : ಪ್ರಸಕ್ತ ಸಾಲಿನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಕ್ರಿಶ್ಚಿಯನ್ ಅಭಿವೃದ್ಧಿ ಯೋಜನೆಯಡಿ ಚರ್ಚಗಳ ಜೀರ್ಣೋದ್ಧಾರಕ್ಕಾಗಿ ಅರಭಾವಿ ಕ್ಷೇತ್ರದ 13 ಚರ್ಚಗಳಿಗೆ 1.50 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದ್ದಾರೆ.

ನಾಗನೂರ, ಗುಜನಟ್ಟಿ, ಧರ್ಮಟ್ಟಿ, ಕಮಲದಿನ್ನಿ, ಹೊನಕುಪ್ಪಿ, ಬಿಲಕುಂದಿ, ಉದಗಟ್ಟಿ, ಬೀರನಗಡ್ಡಿ, ಅರಭಾವಿ, ದಂಡಾಪೂರ, ರಾಜಾಪೂರ ಹಾಗೂ ತುಕ್ಕಾನಟ್ಟಿ ಗ್ರಾಮಗಳಲ್ಲಿರುವ ಚರ್ಚಗಳ ಜೀರ್ಣೋದ್ಧಾರಕ್ಕೆ ಈ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದ್ದಾರೆ.

ಜೀರ್ಣೋದ್ಧಾರ ಕಾಮಗಾರಿಯಲ್ಲಿ ಚರ್ಚಗಳ ದುರಸ್ತಿ ಕಾರ್ಯ, ಸ್ಮಶಾನ ಆವರಣ ಗೋಡೆ ನಿರ್ಮಾಣ, ಸಮುದಾಯ ಭವನ ಹಾಗೂ ಇತರೇ ದುರಸ್ತಿ ಕಾರ್ಯಗಳಿಗಾಗಿ ಈ ಅನುದಾನ ಮಂಜೂರಾಗಿದೆ ಎಂದು ಅವರು ಹೇಳಿದ್ದಾರೆ.

ಚರ್ಚಗಳ ಜೀರ್ಣೋದ್ಧಾರಕ್ಕೆ ಅನುದಾನ ಬಿಡುಗಡೆಗೊಂಡ ಪ್ರಯುಕ್ತ ಕ್ರಿಶ್ಚಿಯನ್ ಸಮುದಾಯದ ಮುಖಂಡರು ಇತ್ತೀಚೆಗೆ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿ ಕೃತಜ್ಞತೆ ಅರ್ಪಿಸಿದರು.

ಈ ಸಂದರ್ಭದಲ್ಲಿ ಎಬಿನೇಜರ್ ಕರಬನ್ನವರ, ಮರೆಪ್ಪ ಮರೆಪ್ಪಗೋಳ, ಲಕ್ಷ್ಮಣ ತೆಳಗಡೆ, ರಮೇಶ ಮಾದರ, ಸತ್ತೆಪ್ಪ ಕರವಾಡಿ, ಡ್ಯಾನಿಯಲ್ ಬಾಬು, ಪೌಲ್ ತಳವಾರ, ಪ್ರವೀಣ ದಾವಣೆ, ಜಗದೀಶ ಮಂಡಿ, ಆನಂದ ಬೆಟಗೇರಿ, ಬಾಬು ಶಿಂಗಳಾಪೂರ, ಸುರೇಂದ್ರ ಮೇಥೋ ಮುಂತಾದವರು ಉಪಸ್ಥಿತರಿದ್ದರು.

 

 


Spread the love

About Laxminews 24x7

Check Also

ಜನವರಿ 22ರಿಂದ ಜನವರಿ 31ರವರೆಗೆ ಜಂಟಿ ಅಧಿವೇಶನ, ನರೇಗಾ ಬಗ್ಗೆ ವಿಶೇಷ ಚರ್ಚೆ: ಸಿಎಂ

Spread the loveಬೆಂಗಳೂರು: ಜನವರಿ 22 ರಿಂದ ಜನವರಿ 31ರ ವರೆಗೆ ಜಂಟಿ ಅಧಿವೇಶನ ನಡೆಯಲಿದ್ದು, ಅಧಿವೇಶನದ ವೇಳೆ ನರೇಗಾ(MGNREGA) ಯೋಜನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ