ಬೆಂಗಳೂರು: ಕೇಂದ್ರದ ಬಜೆಟ್ ರಾಜ್ಯದ ಹಿತಕ್ಕೆ ಮಾರಕವಾದ ನಿರಾಶದಾಯಕ ಬಜೆಟ್ ಆಗಿದೆ. ಬಿಜೆಪಿ – ಜೆ.ಡಿ.ಎಸ್ ದೋಸ್ತಿ ಇದ್ದರೂ ರಾಜ್ಯಕ್ಕೆ ಚೊಂಬು ನೀಡಲಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಇಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಜೆಟ್ ಪೂರ್ವ ಸಭೆಯಲ್ಲಿ ನಾವಿಟ್ಟ ಬೇಡಿಕೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ. ರಾಜ್ಯದ ಜನರಿಗೆ ಚೊಂಬು ಕೊಡುವ ಅಭಿಯಾನವನ್ನು ಕೇಂದ್ರ ಮುಂದುವರೆಸಿದೆ. ದೆಹಲಿಯಲ್ಲೇ ರೈತರ ಪ್ರತಿಭಟನೆ ನಡೆಯುತ್ತಿದ್ದರೂ ಕೇಂದ್ರದ ಬಜೆಟ್ MSP ಬಗ್ಗೆ ಉಸಿರೇ ಬಿಟ್ಟಿಲ್ಲ. …
Read More »ಕೇಂದ್ರ ಬಿಜೆಪಿ ಸರ್ಕಾರದಿಂದ ಹೊಸ ಯೋಜನೆಗಳ ಮಳೆ ಬಿಹಾರಕ್ಕೆ ;ಕರ್ನಾಟಕಕ್ಕೆ ಬರಡು ನೆಲ.
ಚುನಾವಣಾ ಹೊಸ್ತಿನಲ್ಲಿರುವ ಬಿಹಾರಕ್ಕೆ ಕೇಂದ್ರ ಬಿಜೆಪಿ ಸರ್ಕಾರದಿಂದ ಬಂಪರ್ ಕೊಡುಗೆ, ಆದರೆ ಕರ್ನಾಟಕಕ್ಕೆ ಮತ್ತೆ ಚೊಂಬು! ಹೊಸ ಯೋಜನೆಗಳ ಮಳೆ ಅಲ್ಲಿ, ಇಲ್ಲಿ ಬರಡು ನೆಲ. ಜಿಡಿಪಿ ಹಂಚಿಕೆ ಸಮಾನವಿಲ್ಲ, ಅಭಿವೃದ್ಧಿಯೂ ಏಕಪಕ್ಷೀಯ! 2025ರ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕವನ್ನು ಮತ್ತೆ ನಿರ್ಲಕ್ಷಿಸಲಾಗಿದ್ದು, ಯಾವುದೇ ದೊಡ್ಡ ಅಭಿವೃದ್ಧಿ ಯೋಜನೆ ಘೋಷಣೆ ಆಗಿಲ್ಲ. ಪೂರಕ ಅನುದಾನವಿಲ್ಲ, ಮಹತ್ತರ ಯೋಜನೆಗಳೆಂದರೆ ಖಾಲಿ ಭರವಸೆ! ನಮ್ಮ ತೆರಿಗೆ ಹಣದಿಂದ ಇತರ ರಾಜ್ಯಗಳಿಗೆ ಕೋಟಿ ಕೋಟಿ ಅನುದಾನ, …
Read More »ಮೈಕ್ರೋ ಫೈನಾನ್ಸ್ ಸಂಸ್ಥೆಯ ಕಡೆಯಿಂದ ಕಿರುಕುಳ ಆಗದಂತೆ ಕ್ರಮ: ಸತಿಶ್ ಜಾರಕಿಹೊಳಿ
ಬೆಳಗಾವಿ : ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿನ ವಿವಿಧ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಎಮ್ ಎಫ್ ಐ ಅವರಿಂದ ಸಾಲಗಾರರಿಗೆ ಕಿರುಕುಳ ಉಂಟಾಗುತ್ತಿರುವ ಬಗ್ಗೆ ಸ್ವೀಕೃತವಾಗುತ್ತಿರುವ ದೂರುಗಳ ಕುರಿತು ಸಭೆ ಜರುಗಿಸಲಾಯಿತು. ಸಭೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ರವರು, ಬೆಳಗಾವಿ ನಗರದ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು, ಜಿಲ್ಲೆಯ ಎಲ್ಲಾ ಉಪವಿಭಾಗಾಧಿಕಾರಿಗಳು ತಹಶೀಲ್ದಾರರು ಹಾಗೂ ಪೊಲೀಸ್ ವೃತ್ತ ನಿರೀಕ್ಷಕರು ಹಾಜರಿದ್ದರು. ಮೈಕ್ರೋ ಫೈನಾನ್ಸ್ …
Read More »ವಿವಿಧ ಕ್ಷೇತ್ರಗಳ 9 ಸಾಧಕರಿಗೆ ‘ವೇದಾಂತ ಎಕ್ಸ್‌ಲೆನ್ಸ್ ಅವಾರ್ಡ್’ ಪ್ರದಾನ ‘ಪುರಸ್ಕಾರದಿಂದ ಕ್ರಿಯಾಶೀಲತೆ ಹೆಚ್ಚಳ’
ವಿವಿಧ ಕ್ಷೇತ್ರಗಳ 9 ಸಾಧಕರಿಗೆ ‘ವೇದಾಂತ ಎಕ್ಸ್‌ಲೆನ್ಸ್ ಅವಾರ್ಡ್’ ಪ್ರದಾನ ‘ಪುರಸ್ಕಾರದಿಂದ ಕ್ರಿಯಾಶೀಲತೆ ಹೆಚ್ಚಳ’ ಬೆಳಗಾವಿ: ‘ವಿವಿಧ ರಂಗಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದವರಿಗೆ ಪುರಸ್ಕಾರ ನೀಡಿರುವ ಕಾರ್ಯ ಶ್ಲಾಘನೀಯ. ಇದರಿಂದ ತಮ್ಮ ಜವಾಬ್ದಾರಿ ಹೆಚ್ಚಿದ್ದು, ಇನ್ನಷ್ಟು ಕ್ರಿಯಾಶೀಲ, ಪ್ರಾಮಾಣಿಕವಾಗಿ ತಾವು ಸೇವೆ ಸಲ್ಲಿಸಲು ಉತ್ಸಾಹ ಬರುತ್ತದೆ’ ಎಂದು ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಜೆ.ಭಜಂತ್ರಿ ಹೇಳಿದರು. ಇಲ್ಲಿನ ಮಹಿಳಾ ವಿದ್ಯಾಲಯದಲ್ಲಿ ವೇದಾಂತ ಫೌಂಡೇಷನ್ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗಳ ಸಾಧಕರಿಗೆ …
Read More »ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿ ಬಂಧನ
ಬೆಂಗಳೂರು: ಪೊಲೀಸ್ ಸಿಬ್ಬಂದಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ತಪ್ಪಿಸಿಕೊಂಡಿದ್ದ ಆರೋಪಿಯನ್ನು ಹೆಚ್ಎಎಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಿರಣ್ ಅಲಿಯಾಸ್ ಸೈಕೋ ಕಿರಣ್ (21) ಬಂಧಿತ ಆರೋಪಿ. ಪ್ರೊಕ್ಲಮೇಷನ್ ಹಾಗೂ ವಾರೆಂಟ್‌ಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲು ಶುಕ್ರವಾರ ಹೆಚ್ಎಎಲ್ ಠಾಣೆ ಪೊಲೀಸರ ತಂಡ ತೆರಳಿತ್ತು. ಪೊಲೀಸರ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿ ಆರೋಪಿ ಪರಾರಿಯಾಗಿದ್ದ. ಘಟನೆಯಲ್ಲಿ ಎಚ್ಎಎಲ್ ಠಾಣೆಯ ನಾಲ್ವರು ಸಿಬ್ಬಂದಿಗೆ ಗಾಯಗಳಾಗಿದ್ದವು ವರದಿಯಾಗಿದೆ. ಬಳಿಕ ಜೀವನ್ ಭೀಮಾನಗರ ಠಾಣೆ ವ್ಯಾಪ್ತಿಯ …
Read More »ಜನಸ್ನೇಹಿ ಬಜೆಟ್ – ಶಾಸಕ ಬಾಲಚಂದ್ರ ಜಾರಕಿಹೊಳಿ
ಜನಸ್ನೇಹಿ ಬಜೆಟ್ – ಶಾಸಕ ಬಾಲಚಂದ್ರ ಜಾರಕಿಹೊಳಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಮಂಡಿಸಿರುವ ಬಜೆಟ್ ಬಡವರು, ಮಧ್ಯಮ ವರ್ಗಕ್ಕೆ ಅನುಕೂಲವಾಗಿದೆ. ರೈತರಿಗೂ ಕೂಡ ಭಾರಿ ಪ್ರಯೋಜನವಾಗಿದೆ. ಗ್ರಾಮೀಣ ಭಾಗದ ರೈತರಿಗೆ ಆರ್ಥಿಕ ಅಭಿವೃದ್ದಿಗೆ ಪೂರಕವಾಗಿದೆ. ಮಹಿಳೆಯರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಪ್ರಕಟಿಸಿರುವುದು ಸಂತೋಷದಾಯವಾಗಿದೆ. ಯುವ ಜನಾಂಗಕ್ಕೆ ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಿದೆ.ವಿಕಸಿತ ಭಾರತ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಹೊಸ ಆತ್ಮ ವಿಶ್ವಾಸ ಶಕ್ತಿಯನ್ನು ಈ ಬಜೆಟ್ ತುಂಬಿದೆ. ಒಟ್ಟಿನಲ್ಲಿ ಈ …
Read More »ವಸತಿ ಸೌಲಭ್ಯ ನೀಡಿ : ಲಿಂಗತ್ವ ಅಲ್ಪಸಂಖ್ಯಾತರಿಂದ ಸರ್ಕಾರಕ್ಕೆ ಮನವಿ
ಬೆಳಗಾವಿ – ವಸತಿ ಸೌಲಭ್ಯ ನೀಡಿ : ಲಿಂಗತ್ವ ಅಲ್ಪಸಂಖ್ಯಾತರಿಂದ ಸರ್ಕಾರಕ್ಕೆ ಮನವಿ ಬೆಳಗಾವಿ: ಲಿಂಗತ್ವ ಅಲ್ಪ ಸಂಖ್ಯಾತರಿಗೆ ಸರಕಾರ ವಸತಿ ಸೌಲಭ್ಯ ನೀಡಬೇಕು. ವಸತಿಗಾಗಿ ಪ್ರತ್ಯೇಕವಾದ ಯೋಜನೆ ರೂಪಿಸಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿಯ ಮುಖಂಡೆ ಕಿರಣ ಬೇಡಿ ಹೇಳಿದರು. ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಲಿಂಗತ್ವ ಅಲ್ಪಸಂಖ್ಯಾತರು ಉದ್ಯಮ ಶೀಲತೆಯಲ್ಲಿ ತೋಡಗಿಸಿಕೊಳ್ಳಲು ಯೋಜನೆ ರೂಪಿಸಬೇಕು. ಇದಕ್ಕಾಗಿ ಪ್ರತಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗೆ 2 ಲಕ್ಷ …
Read More »ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಹಾಗೂ ಉದ್ಯಮಿ ರಾದ ಸಂತೋಷ್ ಜಾರಕಿಹೊಳಿ ಅವರ ಪುತ್ರ ಸೂರ್ಯಶ್ರೇಷ್ಠ ಜಾರಕಿಹೊಳಿ ಅವರ ಹುಟ್ಟು ಹಬ್ಬ ಆಚರಣೆ.
ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಹಾಗೂ ಉದ್ಯಮಿ ರಾದ ಸಂತೋಷ್ ಜಾರಕಿಹೊಳಿ ಅವರ ಪುತ್ರ ಸೂರ್ಯಶ್ರೇಷ್ಠ ಜಾರಕಿಹೊಳಿ ಅವರ ಹುಟ್ಟು ಹಬ್ಬ ಆಚರಣೆ. ಗೋಕಾಕ : ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಹಾಗೂ ಉದ್ಯಮಿ ರಾದ ಸಂತೋಷ್ ಜಾರಕಿಹೊಳಿ ಅವರ ಪುತ್ರರಾದ ಸೂರ್ಯಶ್ರೇಷ್ಠ ಜಾರಕಿಹೊಳಿ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಸಮಾಜಮುಖಿಯಾಗಿ ಸರಳವಾಗಿ ಆಚರಿಸಿದರು. ಶ್ರೇಷ್ಠ ಫೌಂಡೇಶನ್ ವತಿಯಿಂದ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಶಿವಾ ಫೌಂಡೇಶನ್ ಮಕ್ಕಳಿಗೆ ಹಣ್ಣು …
Read More »ಮೀಥೇನ್ ಸಾಗಿಸುತ್ತಿದ್ದ ಲಾರಿ ಪಲ್ಟಿ
ರಾಯಚೂರು : ಮೀಥೇನ್ ಆಯಿಲ್ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ರಸ್ತೆಯಲ್ಲಿ ಸೋರಿಕೆಯಾಗಿರುವ ಘಟನೆ ತಾಲೂಕಿನ ರಾಯಚೂರು – ಮಂತ್ರಾಲಯ ಹೈವೇ ರಸ್ತೆಯಲ್ಲಿ ಬರುವ ಗುಜಳ್ಳಿ ಗ್ರಾಮದ ಬಳಿ ಜರುಗಿದೆ. ಮುಂಬೈನಿಂದ ಕರ್ನೂಲ್ ಕಡೆ ಮೀಥೇನ್ ತುಂಬಿಕೊಂಡು ಲಾರಿ ತೆರಳುತ್ತಿತ್ತು. ಮಾರ್ಗ ಮದ್ಯ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿ ಮೀಥೇನ್ ಆಯಿಲ್ ಸೋರಿಕೆಯಾಗಿದ್ದರಿಂದ ಸುತ್ತಮುತ್ತಲಿನ ಜನರಿಗೆ ಆತಂಕವನ್ನುಂಟು ಮಾಡಿತ್ತು. ಘಟನೆಯಿಂದ ಲಾರಿ ಚಾಲಕ ಗಾಯಗೊಂಡಿದ್ದು, ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆ ದಾಖಲಿಸಲಾಗಿದೆ. ವಿಷಯ …
Read More »ಉತ್ತರ ಕನ್ನಡದಲ್ಲೂ ಜೋರಾದ ಮೈಕ್ರೋ ಫೈನಾನ್ಸ್ ಹಾವಳಿ
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿಯೂ ಮೈಕ್ರೋ ಫೈನಾನ್ಸ್ ದಂಧೆಕೋರರ ವ್ಯವಹಾರ ಜೋರಾಗಿದೆ. ಜಿಲ್ಲೆಯ ಹಳಿಯಾಳ, ಮುಂಡಗೋಡ ಹಾಗೂ ಯಲ್ಲಾಪುರದ ಕೆಲವೆಡೆ ಈ ಮೀಟರ್ ಬಡ್ಡಿ ದಂಧೆಗೆ ಸಿಲುಕಿರುವವರು ಶೇ.30ರಷ್ಟು ಬಡ್ಡಿಕಟ್ಟಿದರೂ ಅಸಲು ಚುಕ್ತಾ ಮಾಡಲು ಸಾಧ್ಯವಾಗದೇ ಕೆಲವರು ಊರನ್ನೇ ತೊರೆಯುವ ಹಂತಕ್ಕೆ ತಲುಪಿರುವುದು ಬೆಳಕಿಗೆ ಬಂದಿದೆ. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ಪ್ರಕರಣ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸುಗ್ರಿವಾಜ್ಞೆ ಜಾರಿಗೆ ಮುಂದಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 20, 30 ಸಾವಿರ ಸಾಲ …
Read More »