Breaking News

Laxminews 24x7

ಜುಲೈ 26 ರಂದು ಸಂಜೆ 4 ಗಂಟೆಗೆ ಝೂಮ್ ವೆಬಿನಾರ್ ,ಶೇ 10 EWS ಮೀಸಲಾತಿ ಚಿಂತನ ಮಂಥನ: ವೆಬಿನಾರ್ ಮೂಲಕ ಗಣ್ಯರಿಂದ ಚರ್ಚೆ

ಬೆಳಗಾವಿ: ರಾಜ್ಯ ಸರ್ಕಾರ ಇತ್ತೀಚೆಗೆ ಬ್ರಾಹ್ಮಣರಿಗೆ ಶೇ 10 ರಷ್ಟು ಮೀಸಲಾತಿ ಜಾರಿ ಮಾಡಿ ಆದೇಶಿಸಿದ್ದು, ಎಸ್ ಸಿ/ ಎಸ್ ಟಿ ಹಾಗೂ ಹಿಂದುಳಿದ ವರ್ಗಗಳಿಗೆ ಇದರಿಂದಾಗುವ ಪರೆಣಾಮಗಳ ಕುರಿತಾಗಿ ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿ ಬಂಧುತ್ವ ವೇದಿಕೆ ಕರ್ನಾಟಕ ಹಾಗೂ ಮಾನವ ಬಂಧುತ್ವ ವೇದಿಕೆ ಕರ್ನಾಟಕ ಸಹಯೋಗದಲ್ಲಿ ಇದೇ ಜುಲೈ 26 ರಂದು ಸಂಜೆ 4 ಗಂಟೆಗೆ ಝೂಮ್ ವೆಬಿನಾರ್ ಮೂಲಕ ಈ ಕಾರ್ಯಕ್ರಮ ನಡೆಯಲಿದೆ. ಕಲಬುರಗಿ ಕನಕಗುರಪೀಠ …

Read More »

ಬೆಳಗಾವಿ | 30ರಿಂದ ಸಿಇಟಿ ಪರೀಕ್ಷೆ: ಸಿದ್ಧತೆಗೆ ಸೂಚನೆ

ಬೆಳಗಾವಿ: ‘ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಜುಲೈ 30ರಿಂದ ಮೂರು ದಿನಗಳವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು. ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಕೋವಿಡ್-19 ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಒಳಗಡೆ ಹಾಗೂ ಸುತ್ತಲೂ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ವಿದ್ಯಾರ್ಥಿಗಳು ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು. …

Read More »

ಬೆಳಗಾವಿ| ಬ್ರಾಹ್ಮಣರಿಗೆ ಮೀಸಲಾತಿ: ವೆಬಿನಾರ್‌ ನಾಳೆ.

ಬೆಳಗಾವಿ: ‘ರಾಜ್ಯ ಸರ್ಕಾರ ಇತ್ತೀಚೆಗೆ ಬ್ರಾಹ್ಮಣರಿಗೆ ಶೇ 10ರಷ್ಟು ಮೀಸಲಾತಿ ಜಾರಿ ಮಾಡಿ ಆದೇಶಿಸಿದೆ. ಇದರಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಆಗುವ ಪರಿಣಾಮಗಳ ಕುರಿತು ಜುಲೈ 26ರಂದು ಸಂಜೆ 4ಕ್ಕೆ ವೆಬಿನಾರ್‌ ಮೂಲಕ ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿದ್ಯಾರ್ಥಿ ಬಂಧುತ್ವ ವೇದಿಕೆ ಮತ್ತು ಮಾನವ ಬಂಧುತ್ವ ವೇದಿಕೆ ತಿಳಿಸಿವೆ. ‘ಕಲಬುರ್ಗಿಯ ಕನಕ ಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಚಾಲನೆ ನೀಡುವರು. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ …

Read More »

ಬೆಳಗಾವಿ | 116 ಮಂದಿಗೆ ಕೋವಿಡ್ ದೃಢ…

ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 116 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಒಬ್ಬರು ಮೃತರಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಚಿಕಿತ್ಸೆಗಾಗಿ ಅವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಿ ಸಂಖ್ಯೆ 48,135 ಆದ 47 ವರ್ಷದ ವ್ಯಕ್ತಿ ಜುಲೈ 14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರು 20ರಂದು ಸಾವಿಗೀಡಾಗಿದ್ದಾರೆ. ಅವರಿಗೆ ತೀವ್ರ ಉಸಿರಾಟದ ತೊಂದರೆ ಇತ್ತು. ಅವರು ಬೆಳಗಾವಿ ತಾಲ್ಲೂಕಿನವರು ಎಂದು ಮಾಹಿತಿ ನೀಡಿದೆ.   ಸವದತ್ತಿ ವರದಿ: ತಾಲ್ಲೂಕಿನಲ್ಲಿ 19 ಮಂದಿಗೆ ಕೋವಿಡ್ …

Read More »

ರಾಜ್ಯದಲ್ಲಿ ಇಂದು ಕೊರೋನಾಗೆ 72 ಬಲಿ, ಬೆಂಗಳೂರಿನಲ್ಲಿ 2036 ಸೇರಿ 5072 ಮಂದಿಗೆ ಪಾಸಿಟಿವ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ‌ ಪ್ರಕರಣಗಳು ಏರಿಮುಖವಾಗಿಯೇ ಸಾಗಿದ್ದು, ಸತತ ಮೂರನೇ ದಿನವೂ 5 ಸಾವಿರದ ಗಡಿ ದಾಟಿದೆ. ರಾಜ್ಯದಲ್ಲಿ ಶನಿವಾರ 72 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 90 ಸಾವಿರ ತಲುಪಿದೆ. ಇಂದು ರಾಜ್ಯದಲ್ಲಿ 5072 ಪ್ರಕರಣಗಳು ವರದಿಯಾಗಿದ್ದು, 72 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 90942ಕ್ಕೇರಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಚೇತರಿಕೆ ಪ್ರಮಾಣವೂ ಉತ್ತಮವಾಗಿದ್ದು, ದಿನವೊಂದರಲ್ಲಿ 2403 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ …

Read More »

ಲವ್​ ಜಿಹಾದ್ : ಮಹಿಳೆ – ಮಗಳನ್ನು ಬಲಿ, ಕೊಂದು ಮನೆಯಲ್ಲಿ ಮುಚ್ಚಿರುವ ಭೂಪ್

ಮೀರತ್​: ಐದು ವರ್ಷಗಳ ಕಾಲ ತಾನು ಹಿಂದು ಎಂದು ಹೇಳಿಕೊಂಡೇ ಆಕೆಯನ್ನು ವಂಚಿಸಿದ. ಆತನ ನಿಜವಾದ ಬಣ್ಣ ಬಯಲಾಗುತ್ತಿದ್ದಂತೆ ತಾಯಿ ಹಾಗೂ ಮಗುವನ್ನು ಕೊಲೆಗೈದು ಆಕೆಯ ಮನೆಯಲ್ಲಿಯೇ ಹೂತು ಹಾಕಿ ಪರಾರಿಯಾಗಿದ್ದಾನೆ. ದುರಂತವೆಂದರೆ, ಕೈಗೆ ಸಿಕ್ಕ ಆರೋಪಿಯನ್ನು ವಿಚಾರಣೆ ನಡೆಸಿ ಕೈಬಿಟ್ಟ ಪೊಲೀಸರು ಆತನೇ ಕೊಲೆಗಾರ ಎಂಬುದು ತಿಳಿಯುತ್ತಿದ್ದಂತೆ ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಿಸಿದ್ದಾರೆ.ಲವ್​ ಜಿಹಾದ್​ನ ಈ ಪ್ರಕರಣ ನಡೆದದ್ದು ಉತ್ತರ ಪ್ರದೇಶದ ಮೀರತ್​ನಲ್ಲಿ. ಬಯಲಿಗೆ ಬಂದದ್ದು ಮಹಿಳೆಯ ಗೆಳತಿ ಚಂಚಲ್​ನಿಂದ. …

Read More »

ಜು.27ರಿಂದ ರಾಜ್ಯಾದ್ಯಂತ ಎಪಿಎಂಸಿ ಬಂದ್‍ಗೆ ನಿರ್ಧಾರ: ಶಂಕರಣ್ಣ ಮುನವಳ್ಳಿ

ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿ ಮಾಡಿರುವ ಒಂದು ದೇಶ ಒಂದು ದರವನ್ನು ರಾಜ್ಯ ಸರ್ಕಾರ ಜಾರಿ ಮಾಡಬೇಕು. ಅಲ್ಲದೆ ಎಪಿಎಂಸಿ ಸೆಸ್ ಗೊಂದಲವನ್ನು ರಾಜ್ಯ ಸರ್ಕಾರ ನಿವಾರಣೆ ಮಾಡಬೇಕೆಂದು ಒತ್ತಾಯಿಸಿ ಜು.27ರಿಂದ ರಾಜ್ಯಾದ್ಯಂತ ಅನಿರ್ಧಿಷ್ಟ ಅವಧಿಯವರೆಗೆ 162 ಎಪಿಎಂಸಿ ಬಂದ್ ಮಾಡಲಾಗುತ್ತದೆ ಎಂದು ಚೆಂಬರ್ ಆಫ್ ಕಾಮರ್ಸ್ ಮುಖ್ಯಸ್ಥ ಶಂಕರಣ್ಣ ಮುನವಳ್ಳಿ ಎಚ್ಚರಿಸಿದ್ದಾರೆ. ನಗರದಲ್ಲಿ ಇಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಪದಾಧಿಕಾರಿಗಳ ಹಾಗೂ ವರ್ತಕರ ಸಭೆ ಬಳಿಕ ಪತ್ರಿಕಾಗೋಷ್ಠಿ ನಡೆಸಿ …

Read More »

ಕೊರಾನಾ ವಿರುದ್ದ ಹೋರಾಡಲು ಗೋಕಾಕದಲ್ಲಿಟಾಸ್ಕ್ ಪೋರ್ಸ್ ಸಭೆ ನಡೆಯಿತು.

ಗೋಕಾಕ: ಕೊರಾನಾ ವಿರುದ್ದ ಹೋರಾಡಲು ಗೋಕಾಕದಲ್ಲಿ ನಗರಸಭೆ ಸದಸ್ಯೆ ಲಕ್ಷ್ಮಿ ಬಸವರಾಜ ದೇಶನೂರ ಇವರ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆಯಿತು. ನಗರಸಭೆಯ ಟಾಸ್ಕ ಪೋರ್ಸ ಅಧಿಕಾರಿಯಾದ ಎಂ,ಎಚ್,ಗಜಾಕೋಶ ಇವರು ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಹಲವು ಇಲಾಖೆ ಮತ್ತು ಸ್ಥಳಿಯ ಸದಸ್ಯರನ್ನು ಒಳಗೊಂಡು ಟಾಸ್ಕ್ ಪೊರ್ಸ ರಚನೆಯಾಗಿರುತ್ತದೆ. ಇದರ ಉದ್ದೇಶ ಕೊರಾನಾ ರೋಗ ಹರಡದಂತೆ ರೋಗದ ವಿರುದ್ದ ಹೊರಾಟ ಮಾಡುವುದು ಹೊರತು ರೋಗಿಯ ವಿರುದ್ದ ಅಲ್ಲ. ಅದಕ್ಕಾಗಿ ಯಾರು ಕೊರಾನಾಗೆ …

Read More »

ಮಾನವ ಬಂಧುತ್ವ ವೇದಿಕೆ ಮೂಲಕ ಯಶಸ್ವಿಯಾಗಿ ಬಸವ ಪಂಚಮಿ ಆಚರಣೆ.

ಗೋಕಾಕ: ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯಾದ್ಯಂತ ನಮ್ಮ ಬೆಂಬಲಿಗರು ಯಶಸ್ವಿಯಾಗಿ ಬಸವ ಪಂಚಮಿ ಆಚರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಗರ ಪಂಚಮಿಯಂದು ಪ್ರತಿ ಬಸವ ಪಂಚಮಿಯಾಗಿ ಆಚರಿಸಲಾಗುತ್ತಿದೆ. ಹಾವುಗಳು ಎಂದು ಹಾಲು ಕುಡಿಯುವುದಿಲ್ಲ. ಮೂಢನಂಬಿಕೆ ಆಚರಿಸುವ ಬದಲು ಅದೇ ಹಾಲನ್ನು ಬಡ ಮಕ್ಕಳಿಗೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುಲು ಅಭಿಯಾನ ಆರಂಭಿಸಿದ್ದೇವೆ. ರಾಜ್ಯಾದ್ಯಂತ ಯಶಸ್ವಿಯಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದ್ರು.

Read More »

ನಾಳೆ ಬೆಳಗಾವಿ ಜಿಲ್ಲಾದ್ಯಂತ ಲಾಕ್ ಡೌನ್ ಜಾರಿ……..

ಬೆಳಗಾವಿ: ನಾಳೆ (ಭಾನುವಾರ) ಜಿಲ್ಲಾದ್ಯಂತ ಲಾಕ್ ಡೌನ್ ಜಾರಿ ಇರಲಿದೆ. ಅಗತ್ಯ ಸೇವೆಗಳಾದ ಮೆಡಿಕಲ್ ಶಾಪ್, ಹಾಲು, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಹೋಟೆಲ್, ಬಸ್, ಆಟೋ ಸೇರಿದಂತೆ ಎಲ್ಲ ಅಂಗಡಿ ಮುಗ್ಗಟ್ಟು, ಎಲ್ಲವೂ ಬಂದ್ ಆಗಲಿವೆ. ಅನಗತ್ಯವಾಗಿ ಬೀದಿಗಿಳಿಯುವವರ ವಿರುದ್ದ ಪೊಲೀಸರು ಕ್ರಮಕೈಗೊಳ್ಳಲಿದ್ದಾರೆ. ಕಳೆದ ಎರಡು ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಹೇರಲಾಗಿದ್ದ ಲಾಕ್ ಡೌನ್ ತೆರವುಗೊಳಿಸಿದ್ದಾರೆ. ಆದ್ರೆ ಭಾನುವಾರದ ಲಾಕ್ ಡೌನ್ ಮುಂದುವರೆಯಲಿದೆ.

Read More »