Breaking News

Laxminews 24x7

ಸಂಚಾರಿ ವಿಜಯ್‌ ಸತ್ತಿಲ್ಲ, ಆಸ್ಪತ್ರೆ ವೈದ್ಯರಿಂದ ಸ್ಪಷ್ಟೀಕರಣ

ಬೆಂಗಳೂರು: ಸಂಚಾರಿ ವಿಜಯ್‌ ಸತ್ತಿಲ್ಲ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಅಂತ ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ.ಅರುಣ್‌ ನಾಯ್ಕ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ ಸಂಚಾರಿ ವಿಜಯ್‌ ಸಹೋದರ) ಸಿದ್ದೇಶ್ವರ್‌ ಅವರು ನಮ್ಮ ಅಣ್ಣ (ಸಂಚಾರಿ ವಿಜಯ್‌) ಅವರನ್ನು ಜೀವಂತವಾಗಿ ಇಡುವ ನಿಟ್ಟಿನಲ್ಲಿ ಅವರ ಅಂಗಾಗಳ ದಾನಕ್ಕೆ ಮುಂದಾಗಿದ್ದೇವೆ, ಅವರು ನಮ್ಮೊಂದಿಗೆ ಇಲ್ಲ ಅಂತ ಹೇಳುವುದಕ್ಕೆ ಬೇಸರವಾಗುತ್ತಿದೆ ಅಂತ ಹೇಳಿದ್ದರು.   ಈ ನಡುವೆ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಆಪೋಲೋ …

Read More »

ಸರ್ಕಾರದ ಧನಸಹಾಯ ಪಡೆಯಲು ಬ್ರ್ಯಾಡ್ಜ್ ಲೈಸೆನ್ಸ್​​ಗಾಗಿ ಸಾವಿರಾರು ಆಟೋ ಚಾಲಕರ ಪರದಾಟ

ಗದಗ: ಆಟೋ ಚಾಲಕರಿಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಧನಸಹಾಯ ಪಡೆಯಲು ಗದಗನಲ್ಲಿ ಸಾವಿರಾರು ಆಟೋ ಚಾಲಕರು ಪರದಾಟ ನಡೆಸಿದ್ದಾರೆ. ಧನಸಹಾಯ ಪಡೆಯಲು ಸೇವಾ ಸಿಂಧು ಪೋರ್ಟಲ್​ನಲ್ಲಿ ಕೆಲವು ಟೆಕ್ನಿಕಲ್ ಸಮಸ್ಯೆ ಉಂಟಾಗಿದೆ. ಧನಸಹಾಯ ಪಡೆಯಲು ಅರ್ಜಿ ಹಾಕಿದರೆ ಅದು ಬ್ರ್ಯಾಡ್ಜ್ ಲೈಸೆನ್ಸ್ ಕೇಳ್ತಿದೆ. ಇದರಿಂದ ಜಿಲ್ಲಾಧಿಕಾರಿಗಳು ಬ್ರ್ಯಾಡ್ಜ್ ಲೈಸೆನ್ಸ್ ಪಡೆಯಲು ಎರಡು ದಿನಗಳ ಕಾಲ ಮಾತ್ರ ಅವಕಾಶ ಕೊಟ್ಟಿದ್ದರು. ಆದ್ರೆ ಎರಡು ದಿನದಲ್ಲಿ ಕೆಲವೇ ಕೆಲವು ಜನರಿಗೆ ಲೈಸೆನ್ಸ್ …

Read More »

: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ : ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್

ನವದೆಹಲಿ, ಜೂ. 14: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಯಕತ್ವ ಬದಲಾವಣೆ ಸುತ್ತ ಸೃಷ್ಟಿಯಾಗಿರುವ ಬಿಕ್ಕಟ್ಟು ಬಗೆಹರಿಸಲು ಮೂರು ದಿನಗಳ ಕಾಲ ರಾಜ್ಯ ಪ್ರವಾಸ ಹಮ್ಮಿಕೊಂಡಿರುವ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಹೊಸ ರೀತಿಯ ಸಮಸ್ಯೆ ಶುರುವಾಗಿದೆ.‌ ಶಾಸಕಾಂಗ ಪಕ್ಷದ ಸಭೆ ಕರೆಯುವ ವಿಷಯಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಪರ ಮತ್ತು ವಿರೋಧಿ ಗುಂಪುಗಳು ಹೇರುತ್ತಿರುವ ಒತ್ತಡದಿಂದ ಹೈಕಮಾಂಡ್ ಪ್ರತಿನಿಧಿ ಅರುಣ್ ಸಿಂಗ್ ಇಕ್ಕಟ್ಟಿಗೆ ಸಿಲುಕಿದ್ದಾರೆ. ಎರಡೂ ಪಾಳೆಯದಿಂದ ದೂರುಗಳ ಸುರಿಮೆಳೆ …

Read More »

ಅಯೋಧ್ಯೆ ರಾಮ ಮಂದಿರ ಟ್ರಸ್ಟ್ ವಿರುದ್ಧ 16.5 ಕೋಟಿ ಭೂ ಅವ್ಯವಹಾರದ ಆರೋಪ

, ಜೂನ್ 14: ಕಳೆದ ವರ್ಷ ಕೇಂದ್ರ ಸರ್ಕಾರ ಸ್ಥಾಪಿಸಿದ ರಾಮಮಂದಿರ ಟ್ರಸ್ಟ್ ವಿರುದ್ಧ ಈಗ ಗಂಭೀರ ಭೂಹಗರಣದ ಆರೋಪ ಕೇಳಿ ಬಂದಿದೆ. ಉತ್ತರಪ್ರದೇಶದ ವಿರೋಧ ಪಕ್ಷಗಳಾದ ಸಮಾಜವಾದಿ ಹಾಗೂ ಆಮ್‌ ಆದ್ಮಿ ಪಕ್ಷ ಈ ಆರೋಪವನ್ನು ಮಾಡಿದ್ದು ಕಳೆದ ಮಾರ್ಚ್ ತಿಂಗಳನಲ್ಲಿ ಟ್ರಸ್ಟ್ ಈ ಅವ್ಯವಹಾರವನ್ನು ಮಾಡಿದೆ ಎಂದಿದೆ. ಆಸ್ತಿ ಖರೀದಿಯ ಸಂದರ್ಭದಲ್ಲಿ ಟ್ರಸ್ಟ್ ಇಬ್ಬರು ಡೀಲರ್‌ಗಳಿಂದ 18.5 ಕೋಟಿ ರೂಪಾಯಿಗೆ ಖರೀದಿಸಲಾಗಿದೆ. ಗಮನಿಸಬೇಕಾದ ಸಂಗತಿಯೆಂದರೆ ಈ ಕೆಲವೇ …

Read More »

ಗುಜರಾತ್ ಬದಲಾಗಲಿದೆ.2022ರ ವಿಧಾನಸಭಾ ಚುನಾವಣೆ-ಎಲ್ಲಾ ಕ್ಷೇತ್ರದಲ್ಲೂ AAP ಸ್ಪರ್ಧೆ

ನವದೆಹಲಿ:ಮುಂಬರುವ 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ ಎಂದು ದೆಹಲಿ ಮುಖ್ಯಮಂತ್ರಿ, ಆಪ್ ಸಂಸ್ಥಾಪಕ ಅರವಿಂದ್ ಕೇಜ್ರಿವಾಲ್ ಸೋಮವಾರ(ಜೂನ್ 14) ಘೋಷಿಸಿದ್ದಾರೆ. 2022ರ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ಅಹಮದಾಬಾದ್ ನಗರಕ್ಕೆ ಕೇಜ್ರಿವಾಲ್ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ವರದಿ ತಿಳಿಸಿದೆ. ಗುಜರಾತ್ ನ ಜನರು ಒಂದು ವೇಳೆ ದೆಹಲಿಯಲ್ಲಿ ಉಚಿತ ವಿದ್ಯುತ್ ನೀಡುತ್ತಾರೆ ಎಂದಾದರೆ ಗುಜರಾತ್ ನಲ್ಲಿ …

Read More »

ಹುಲಿಯ ಹಾಲಿನ ಮೇವು, ಬಬ್ರುವಾಹನ ಖ್ಯಾತಿಯ ನಿರ್ಮಾಪಕ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕ ಕೆ.ಸಿ.ಎನ್.ಚಂದ್ರಶೇಖರ್‌ (69) ನಿಧನರಾದರು. ಬಹು ಅಂಗಾಂಗ ವೈಫಲ್ಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. ಚಂದ್ರಶೇಖರ್‌ ಅವರು ಹುಲಿಯ ಹಾಲಿನ ಮೇವು, ಬಬ್ರುವಾಹನ ಸೇರಿದಂತೆ ಹಲವು ಸಿನಿಮಾಗಳ ನಿರ್ಮಾಣ ಮಾಡಿದ್ದರು. ಕರ್ನಾಟಕ ಫಿಲಂ ಚೇಂಬರ್‌ ಹಾಗೂ ಎಸ್‌ಐಎಫ್‌ಸಿಸಿಆರ್‌ಐಪಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

Read More »

ಸಹೋದರನ ಪುತ್ರನ ಹುಟ್ಟುಹಬ್ಬದ ಪ್ರಯುಕ್ತ ಹುಲಿ ದತ್ತು ಪಡೆದ ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ: ತಮ್ಮ ಸಹೋದರ ಚನ್ನರಾಜ ಹಟ್ಟಿಹೊಳಿ ಅವರ ಪುತ್ರ ಹರ್ಷಿತ್ ಜನ್ಮದಿನದ ಅಂಗವಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸೋಮವಾರ ಬೆಳಗಾವಿಯ ಭೂತರಾಮನಹಟ್ಟಿಯ ಕಿತ್ತೂರ ರಾಣಿ ಚನ್ನಮ್ಮ ಪ್ರಾಣಿ ಸಂಗ್ರಹಾಲಯಕ್ಕೆ ತೆರಳಿ ಶೌರ್ಯ ಎನ್ನುವ ಹುಲಿಯನ್ನು ದತ್ತು ಪಡೆದಿದ್ದಾರೆ. ಆರಂಭಿಕವಾಗಿ 1 ಲಕ್ಷ ರೂ.ಗಳ ಚೆಕ್ ನ್ನು ಅರಣ್ಯಾಧಿಕಾರಿಗಳಿಗೆ ಹಸ್ತಾಂತರಿಸಿದ ಅವರು ಹುಲಿಯ ಸಂಪೂರ್ಣ ಜೀವಿತಾವಧಿ ಆರೈಕೆ ವಹಿಸಿಕೊಂಡಿರುವುದಾಗಿ ತಿಳಿಸಿದರು. ಲಾಕ್ ಡೌನ್ ಕಾರಣದಿಂದಾಗಿ ಪ್ರಾಣಿ ಸಂಗ್ರಹಾಲಯಗಳಿಗೆ ಜನರ ಬರುವಿಕೆ ಕಡಿಮೆಯಾಗಿದ್ದು, …

Read More »

ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ – ಮುರುಗೇಶ್ ನಿರಾಣಿ

ಹುಬ್ಬಳ್ಳಿ: ಕಲಘಟಗಿ ತಾಲೂಕಿನ ರೈತರು ಸಹಕಾರ ಕೊಟ್ಟು ಒಪ್ಪುವುದಾದರೆ ಒಂದೂವರೆ ವರ್ಷದಲ್ಲಿ ಕಲಘಟಗಿಯಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭ ಮಾಡುತ್ತೇನೆ. ಸಕ್ಕರೆ ಕಾರ್ಖಾನೆ ಸ್ಥಾಪನೆ ಮಾಡುವಲ್ಲಿ ನನ್ನದು ಯಾವುದೇ ಸ್ವಾರ್ಥವಿಲ್ಲ ಉದ್ಯೋಗ ಬೇರೆ ರಾಜಕಾರಣ ಬೇರೆ, ನನಗೆ ಯಾವುದೇ ಜಾತಿಯಿಲ್ಲ ನನ್ನದು ರೈತರ ಜಾತಿ ಎಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಹೇಳಿದ್ದಾರೆ. ನಗರದ ಹನ್ನೆರಡು ಮಠದಲ್ಲಿ ತಾಲೂಕಿನ ರೈತರ ಸಭೆಯಲ್ಲಿ ಮಾತನಾಡಿದ ನಿರಾಣಿ, ತಾಲೂಕಿನ ರೈತರು …

Read More »

ಹಾಸ್ಟೇಲಗಳಲ್ಲಿದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನವನ್ನು ಪಾವತಿಸಲು ಮತ್ತು ಕೋವಿಡ ರಜೆ ವೇತನವನ್ನು ಪಾವತಿಸಲು ಒತ್ತಾಯಿಸಿ ಮನವಿ 

  ವಿಜಯಪೂರ ಜಿಲ್ಲೆಯ ಬಸವನಬಾಗೆವಾಡಿ ತಾಲೂಕಿನಲ್ಲಿ ಇಂದು ಹಾಸ್ಟಲ್ ಗಳಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರಿಗೆ ಬಾಕಿ ವೇತನವನ್ನು ಪಾವತಿಸಲು ಹಾಗೂ ಕೊವಿಡ್ ರಜೆ ವೇತನವನ್ನು ಪಾವತಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳು ತಹಶಿಲ್ದಾರರವರಿಗೆ ಮನವಿ ಸಲ್ಲಿಸಿದರು. ನಂತರ ಮಾತನಾಡಿದ ಜಿಲ್ಲಾ ಅಧ್ಯಕ್ಷ ಹುಲುಗಪ್ಪ ಚಲವಾದಿ 2020 ಮಾರ್ಚ ತಿಂಗಳಿಂದ ಇಲ್ಲಿಯವರೆಗೆ ವೇತನವನ್ನು ಪಾವತಿಸಬೇಕು ಸರ್ಕಾರವು ಈ ನೌಕರರಿಗೆ ಲಾಕಡೌನ …

Read More »

ನಾಳೆಯಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭ; ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ನೀಡಿದ ಶಿಕ್ಷಣ ಇಲಾಖೆ

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಸಾರ್ವಜನಿಕ ಶಿಕ್ಷಣ ಇಲಾಖೆ, ಶಿಕ್ಷಕರು ಹಾಗೂ ಮಕ್ಕಳಿಗೆ ಬಿಗ್ ಶಾಕ್ ನೀಡಿದ್ದು, ನಾಳೆ ಜೂನ್ 15ರಿಂದಲೇ ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಲಿದೆ ಎಂದು ತಿಳಿಸಿದೆ.   ಈ ಕುರಿತು ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್ ಮಾಹಿತಿ ನೀಡಿದ್ದು, ಜೂನ್ 15ರಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಮಕ್ಕಳ ದಾಖಲಾತಿ ಆರಂಭಿಸಬೇಕು. ಜುಲೈ 30ರೊಳಗೆ ಮಕ್ಕಳ ದಾಖಲಾತಿ ಮುಗಿಸಬೇಕು ಹಾಗೂ ಜುಲೈ 1ರಿಂದ ಶಾಲೆಗಳನ್ನು …

Read More »