ಬೆಳಗಾವಿ: ಕೆಎಸ್ಆರ್ಟಿಸಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಹಾಗೂ ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್ಗಳಿಗೆ ಮಸಿ ಬಳಿದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಳಗಾವಿಯಲ್ಲಿ ಇಂದು ಪ್ರತಿಭಟನೆ ನಡೆಸಿದರು. ಬೆಳಗ್ಗೆ ಬೆಳಗಾವಿಗೆ ಆಗಮಿಸಿದ ಕ.ರ.ವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂಡಕ್ಟರ್ ಮಹಾದೇವ ಹುಕ್ಕೇರಿ ಅವರನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು. ಬಳಿಕ ಬಾಳೇಕುಂದ್ರಿ ಚಲೋ ಹಮ್ಮಿಕೊಳ್ಳಲಾಗಿತ್ತು. ರಾಣಿ ಚನ್ನಮ್ಮ ವೃತ್ತದಲ್ಲಿ ಕ.ರ.ವೇ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ …
Read More »20 ದೈಹಿಕ ವಿಕಲಚೇತನರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಲಾಯಿತು.
ಗೋಕಾಕ ನಗರದ ಗೃಹಕಚೇರಿಯಲ್ಲಿ ಇಂದು ಸಚಿವರಾದ ಶ್ರೀ ಸತೀಶ ಜಾರಕಿಹೊಳಿಯವರ ಅವರ ಜೊತೆಗೆ ಸಾರ್ವಜನಿಕರ ಹಾಗೂ ಕಾರ್ಯಕರ್ತರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದೆ. ಈ ಸಂದರ್ಭದಲ್ಲಿ ಶಾಸಕರ ಅನುದಾನದಡಿ ಯಮಕನಮರಡಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 20 ದೈಹಿಕ ವಿಕಲಚೇತನರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಲಾಯಿತು. ಈ ವೇಳೆ ಕೆಪಿವೈಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ನನ್ನನ್ನು ಹಲವರು ಸನ್ಮಾನಿಸಿ, ಅಭಿನಂದಿಸಿದರು. #rahuljarkiholi #satishjarkiholi #ಜನತಾದರ್ಶನ
Read More »ಉಭಯ ರಾಜ್ಯಗಳ ಬಸ್ ಸಂಚಾರ ಪುನರಾರಂಭ ಕುರಿತು ಚರ್ಚೆ
ಉಭಯ ರಾಜ್ಯಗಳ ಬಸ್ ಸಂಚಾರ ಪುನರಾರಂಭ ಕುರಿತು ಚರ್ಚೆ ಬೆಳಗಾವಿ-ಕೋಲ್ಹಾಪುರ ಜಿಲ್ಲಾಧಿಕಾರಿಗಳ ಸಮನ್ವಯ ಸಭೆ ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಬಸ್ ಸಂಚಾರ ಪುನರಾರಂಭ ಕುರಿತು ಬೆಳಗಾವಿ-ಕೋಲ್ಹಾಪುರ ಜಿಲ್ಲಾಧಿಕಾರಿಗಳ ಹಾಗೂ ಪೋಲಿಸ್ ವರಿಷ್ಠಾಧಿಕಾರಿಗಳ ವೀಡಿಯೋ ಸಂವಾದ ಸಭೆ ಜರುಗಿತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಸೋಮವಾರ (ಫೆ.25) ಜರುಗಿದ ವೀಡಿಯೊ ಸಂವಾದ ಸಮನ್ವಯ ಸಭೆಯಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಅವರು, ಸಾರಿಗೆ …
Read More »ಏಕಕಾಲಕ್ಕೆ 2 ಸಾವಿರ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ
ಏಕಕಾಲಕ್ಕೆ 2 ಸಾವಿರ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ಚಿಕ್ಕೋಡಿ:ಚಿಕ್ಕೋಡಿ ನಗರದ ಹಾಲಟ್ಟಿಯ ಶ್ರೀಲಕ್ಷ್ಮೀ ದೇವಿ ಜಾತ್ರಾ ಮಹೋತ್ಸ ಅಂಗವಾಗಿ ಏಕಕಾಲಕ್ಕೆ 2 ಸಾವಿರ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ದಿವ್ಯಸಾನಿಧ್ಯವನ್ನು ವಹಿಸಿದ ಚಿಕ್ಕೋಡಿಯ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮೀಜಿಯವರು ಮಾತನಾಡಿ ಕುಂಕುಮ ಸೌಭಾಗ್ಯದ ಸಂಕೇತ , ಅರಿಶಿಣ ಆರೋಗ್ಯದ ಸಂಕೇತ. ಹೆಣ್ಣು ಸಾಕ್ಷಾತ ದೇವಿಯ ಸ್ವರೂಪ. ಬಣ್ಣಕ್ಕಿಂತ ಗುಣ ಮುಖ್ಯವಾಗಿದೆ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಂಸ್ಕಾರ ನೀಡಿ …
Read More »ಹಿಡಕಲ್ ಜಲಾಶಯದ ನಮ್ಮ ನೀರು ನಮ್ಮ ಹಕ್ಕು ಹೋರಾಟಕ್ಕೆ ಚಾಲನೆ
ಹುಕ್ಕೇರಿ : ಹಿಡಕಲ್ ಜಲಾಶಯದ ನಮ್ಮ ನೀರು ನಮ್ಮ ಹಕ್ಕು ಹೋರಾಟಕ್ಕೆ ಚಾಲನೆ ಹುಕ್ಕೇರಿ ತಾಲೂಕಿನ ಜೀವನಾಡಿ ರಾಜಾ ಲಖಮಗೌಡ ಜಲಾಶಯದ ನೀರನ್ನು ಹುಬ್ಬಳ್ಳಿ ಧಾರವಾಡಕ್ಕೆ ಕೈಗಾರಿಕಾ ಉದ್ದೇಶಕ್ಕೆ ಸರಬರಾಜು ಮಾಡುವ ಪ್ರಕ್ರೀಯೆ ಯನ್ನು ಬಂದ ಮಾಡುವಂತೆ ಆಗ್ರಹಿಸಿ ಇಂದು ಹುಕ್ಕೇರಿ ನಗರದಲ್ಲಿ ವಿವಿಧ ಮಠಾಧೀಶರು, ನೀರು ಬಳಕೆ ಸಂಘದ ಸದಸ್ಯರು ಮತ್ತು ರೈತ ಸಂಘಟನೆಯ ಮುಖಂಡರು ನಮ್ಮ ನೀರು ನಮ್ಮ ಹಕ್ಕು ಎಂದು ಘೋಷನೆ ಕೂಗಿ ಪ್ರತಿಭಟನೆ ಜರುಗಿಸಿ …
Read More »ಶಿವನ ದರ್ಶನ ಸಿಗದಿದ್ದಕ್ಕೆ ಮಗಳಿಗೆ ಬೇಸರ: ಮಗಳ ಆಸೆ ಈಡೇರಿಸಲು ತಂದೆ ನಿರ್ಮಿಸಿದ ಮೂರ್ತಿ ಇಂದು 7 ನೇ ಅತಿದೊಡ್ಡ ಶಿವನ ಮೂರ್ತಿ
ಶಿವನ ದರ್ಶನ ಸಿಗದಿದ್ದಕ್ಕೆ ಮಗಳಿಗೆ ಬೇಸರ: ಮಗಳ ಆಸೆ ಈಡೇರಿಸಲು ತಂದೆ ನಿರ್ಮಿಸಿದ ಮೂರ್ತಿ ಇಂದು 7 ನೇ ಅತಿದೊಡ್ಡ ಶಿವನ ಮೂರ್ತಿ ಆ ಮೂರ್ತಿ ದೇಶದಲ್ಲೇ 7 ನೇ ಸ್ಥಾನ ಪಡೆದ ಬೃಹತ್ ಮೂರ್ತಿ. ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿ ಗುರುತಿಸಲ್ಪಡುವ ಮೂರ್ತಿ. ಆ ಮೂರ್ತಿಯನ್ನು ಆರಾಧಿಸಲು ಲಕ್ಷಾಂತರ ಭಕ್ತರ ಸಮಾಗಮವಾಗುತ್ತದೆ. ಸಾವಿರಾರು ಭಕ್ತರು ಪ್ರತಿನಿತ್ಯ ಇಲ್ಲಿಗೆ ಭೇಟಿ ಕೊಡುತ್ತಾರೆ. ಇನ್ನೂ ಆ ಮೂರ್ತಿ ಜೊತೆಯಲ್ಲಿ ಇಲ್ಲಿ ಹಲವು ದೇವರುಗಳಿವೆ. …
Read More »ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಳಗಾವಿ ತಂಡಕ್ಕೆ ಗೆಲುವು
ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಳಗಾವಿ ತಂಡಕ್ಕೆ ಗೆಲುವು ಬೆಳಗಾವಿ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಳಗಾವಿ ತಂಡವು ವಿಜಯದ ಭೇರಿಯನ್ನು ಭಾರಿಸಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನಲ್ಲಿ ಫೆಬ್ರವರಿ 21, 22 ಮತ್ತು 23 ರಂದು ಆಯೋಜಿಸಿದ್ದ ಸರ್ಕಾರಿ ನೌಕರರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಳಗಾವಿ ತಂಡವು ವಿಜಯದ ಭೇರಿಯನ್ನು ಭಾರಿಸಿದೆ.
Read More »ವೀಲಿಂಗ್ ಮಾಡಿದ್ದರ ವಿರುದ್ಧ ರೌಡಿಶೀಟ್ ಓಪನ್
ಬೆಂಗಳೂರು, ಫೆಬ್ರವರಿ 25: ಕಳೆದ ವಾರ ಡಿ.ಜೆ.ಹಳ್ಳಿಯಲ್ಲಿ ರಾತ್ರಿ ವೇಳೆ ಮಾರಕಾಸ್ತ್ರ ಹಿಡಿದು ವೀಲಿಂಗ್ ಮಾಡಿದ್ದ 14 ಜನರ ವಿರುದ್ಧ ಪೊಲೀಸರು ರೌಡಿಶೀಟರ್ ಓಪನ್ ಮಾಡಿದ್ದಾರೆ. ಆರೋಪಿಗಳು ಪೂರ್ವ ವಿಭಾಗದಲ್ಲಿ ದಾಂದಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ 14 ಜನರ ವಿರುದ್ಧ ಡಿ.ಜೆ.ಹಳ್ಳಿ ಪೊಲೀಸರು ರೌಡಿಶೀಟರ್ ಓಪನ್ ಮಾಡಿದ್ದಾರೆ. ವೀಲಿಂಗ್ ಮಾಡೋರಿಗೆ ಇದು ಎಚ್ಚರಿಕೆ ಗಂಟೆಯಾಗಿದೆ.
Read More »38° ಸೆಲ್ಸಿಯಸ್ ತಾಪಮಾನಕ್ಕೆ ತತ್ತರಿಸಿದ ಗಣಿನಾಡಿನ ಮಂದಿ
ಬಳ್ಳಾರಿ, ಫೆಬ್ರವರಿ 24: ಗಣಿನಾಡು ಬಳ್ಳಾರಿ ಜಿಲ್ಲೆಯ ಬಿಸಿಲಿಗೆ (heatstroke) ತವರ ಮನೆ ಇದ್ದಂತೆ. ಕರ್ನಾಟಕದಲ್ಲಿ ಎಲ್ಲಾದರೂ ಒಂದು ಕಡೆ ಬಿಸಿಲು ಕಡಿಮೆ ಇರಬಹುದು ಆದರೆ ಇಲ್ಲಿ ಮಾತ್ರ ನೋ ಚಾನ್ಸ್. ವರ್ಷದ 12 ತಿಂಗಳು ಇಲ್ಲಿ ಬಿರು ಬೇಸಿಗೆ ಬಿಸಿಲು ಕಂಡು ಬರುತ್ತೆ. ಅದರಲ್ಲೂ ಈ ವರ್ಷವಂತು ಅದೆಷ್ಟು ಸೆಕೆ, ತಾಪಮಾನ, ಬಿಸಿಲ ಧಗೆ ತಾಳಲಾರದ ಜನರು ತಂಪುಪಾನೀಯಗಳ ಮೊರೆ ಹೋಗುತ್ತಿದ್ದಾರೆ. 38° ಸೆಲ್ಸಿಯಸ್ ತಾಪಮಾನಕ್ಕೆ ತತ್ತರಿಸಿದ ಗಣಿನಾಡಿನ ಮಂದಿ ಬಳ್ಳಾರಿಯಲ್ಲಿ ಕಳೆದ …
Read More »ಬೆಳಗಾವಿಯಲ್ಲಿ ಮತ್ತೆ ಮರಾಠಿ ಯುವಕರ ಗೂಂಡಾಗಿರಿ: ಕರವೇ ತಾಲೂಕು ಉಪಾಧ್ಯಕ್ಷನಿಗೆ ಥಳಿತ
ಬೆಳಗಾವಿ, (ಫೆಬ್ರವರಿ 24): ಕನ್ನಡದಲ್ಲಿ ಮಾತನಾಡಿ ಎಂದಿದ್ದಕ್ಕೆ ಬೆಳಗಾವಿಯಲ್ಲಿ ಮರಾಠಿ ಪುಂಡರು ಕರ್ನಾಟಕ ಬಸ್ ಕಂಡಕ್ಟರ್ ಮೇಲೆ ಹಲ್ಲೆ ಮಾಡಿರುವ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕ ಗಡಿಯಲ್ಲಿ ಬೂದಿ ಮುಚ್ಚಿದ ಕೆಂಡಂತಿದೆ. ಇದರ ಬೆನ್ನಲ್ಲೇ ಇದೀಗ ಬೆಳಗಾವಿಯಲ್ಲಿ ಮತ್ತೆ ಮರಾಠಿ ಯುವಕರ ಗೂಂಡಾಗಿರಿ ಮುಂದುವರೆದಿದ್ದು, ಕನ್ನಡ ಮಾತಾಡಿದ್ದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣದ ತಾಲೂಕು ಉಪಾಧ್ಯಕ್ಷನಿಗೆ ಥಳಿಸಿರುವ ಘಟನೆ ನಡೆದಿದೆ. ಖಾನಾಪುರ ತಾಲೂಕು ಕರವೇ …
Read More »