Breaking News

Laxminews 24x7

ಸಣ್ಣ ಮಾತು ಬೆಳೆದು ಜಗಳವಾಯ್ತು ಕೊನೆಗೆ ಬಡಪಾಯಿ ಜೀವ ಬಲಿಯಾತ್ತು

ಸಣ್ಣ ಮಾತು ಬೆಳೆದು ಜಗಳವಾಯ್ತು ಕೊನೆಗೆ ಬಡಪಾಯಿ ಜೀವ ಬಲಿಯಾತ್ತು ಇದು ಮಾನ್ವಿ ತಾಲೂಕಿನ ಮಲ್ಲಿನಮಡುಗು ಗ್ರಾಮದಲ್ಲಿ ನಡೆದ ಘಟನೆ ಇದು ಗ್ರಾಮದ ಒಂದೇ ಸಮುದಾಯ ಜನರ ನಡುವೇ ಈ ಘಟನೆ ನಡೆದಿದೆ ದಾರಿಯ ವಿಚಾರವಾಗಿ ಜಗಳ ಇಡೀ ಊರೇ ಆಯ್ತು ರಣರಂಗ 15 ಕ್ಕು ಹೆಚ್ಚು ಜನರಿಗೆ ಗಾಯ, ಮಾನ್ವಿ ಆಸ್ಪತ್ರೆಯಲ್ಲಿ ದಾಖಲು ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಊರಿನ ಹಿರಿಯರ ಸಮ್ಮುಖದಲ್ಲಿ ಬಗೆಹರಿಯ ಬೇಕಾದ ಸಣ್ಣ …

Read More »

ಬಳ್ಳಾರಿಯಲ್ಲಿ ಹಕ್ಕಿಜ್ವರ ಭೀತಿ

ಬಳ್ಳಾರಿ : ಜಿಲ್ಲೆಯಲ್ಲಿ ಹಕ್ಕಿಜ್ವರ ಪತ್ತೆ ಹಿನ್ನೆಲೆ ಜಿಲ್ಲಾಡಳಿತವು ಆಂಧ್ರ ಪ್ರದೇಶದಿಂದ ಬರುವ ಕೋಳಿ ಸಾಗಾಟ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿದೆ. ಅಲರ್ಟ್ ಆಗಿರುವ ಜಿಲ್ಲಾಡಳಿತ, ಜಿಲ್ಲೆಯಾದ್ಯಂತ 5 ಚೆಕ್‌ಪೋಸ್ಟ್‌ಗಳನ್ನು ನಿರ್ಮಾಣ ಮಾಡಿದೆ. ಪ್ರಮುಖವಾಗಿ ಆಂಧ್ರಪ್ರದೇಶದ ಅನಂತಪುರ ಹಾಗೂ ಗುಂತಕಲ್ ಭಾಗದಿಂದ ಬರುವ ಕೋಳಿ ಸಾಗಾಟ ವಾಹನಗಳ ಮೇಲೆ ಜಿಲ್ಲಾಡಳಿತ ಕಣ್ಣಿಟ್ಟಿದೆ. ಆಂಧ್ರ ಗಡಿಗೆ ಹೊಂದಿಕೊಂಡಿರುವ ಪಿಡಿಹಳ್ಳಿ ಗ್ರಾಮದಲ್ಲೂ ಚೆಕ್​ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಪಿಡಿಹಳ್ಳಿ ಚೆಕ್‌ಪೋಸ್ಟ್‌ನಲ್ಲಿ ಸಿಬ್ಬಂದಿ, ಕೋಳಿಗಳ ಆರೋಗ್ಯ ಪರಿಶೀಲನೆ …

Read More »

ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಚಿಕ್ಕೋಡಿ : ತಾಯಿಯೊಬ್ಬಳು ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಂಚಲಿ ಪಟ್ಟಣದಲ್ಲಿನ ಕೃಷ್ಣಾ ನದಿ ಬಳಿ ಇಂದು ಮುಂಜಾನೆ ನಡೆದಿದೆ. ಮೃತರನ್ನು ಶಾರದಾ ಢಾಲೆ (38) ಹಾಗೂ 8, 10 ಮತ್ತು, 14 ವರ್ಷ ವಯಸ್ಸಿನ ಮಕ್ಕಳು ಎಂದು ಗುರುತಿಸಲಾಗಿದೆ. ದಿನನಿತ್ಯ ಗಂಡ ಗಲಾಟೆ ಮಾಡುತ್ತಿದ್ದ ಕಾರಣಕ್ಕೆ ಮಹಿಳೆ ತನ್ನ ಮೂವರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ತಿಳಿದು ಬಂದಿದೆ. ಗಂಡ ಅಶೋಕ್ ಢಾಲೆಯನ್ನು ಪೊಲೀಸರು ವಶಕ್ಕೆ ಪಡೆದು …

Read More »

ವಿಧಾನಸಭೆಯ ಆವರಣದಲ್ಲಿನ ಚಿತ್ರಪಟಗಳ ಉದ್ಘಾಟನೆ ನೆರವೇರಿಸಿದ ಡಿಸಿಎಂ ಡಿ ಕೆ ಶಿವಕುಮಾರ್.

ಬೆಂಗಳೂರು: ವಿಧಾನಸಭೆ ನಡೆದು ಬಂದ ದಾರಿ ಕುರಿತು ವಿಧಾನಸಭೆಯ ಹೊರ ಆವರಣದಲ್ಲಿ ಅಳವಡಿಸಲಾಗಿರುವ ಚಿತ್ರಪಟಗಳ ಉದ್ಘಾಟನೆಯನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಂಗಳವಾರ ನೆರವೇರಿಸಿದರು. ವಿಧಾನಸಭಾಧ್ಯಕ್ಷ ಯು ಟಿ ಖಾದರ್, ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಕೆ ಎಚ್ ಮುನಿಯಪ್ಪ, ಕೃಷ್ಣ ಬೈರೇಗೌಡ ಮತ್ತಿತರರು ಉಪಸ್ಥಿತರಿದ್ದರು. 

Read More »

ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಆ ಭಾಗದ ಶಾಸಕರ ಜತೆ ಪ್ರತ್ಯೇಕ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್.

ಬೆಂಗಳೂರು : “ರಾಜ್ಯದ ಕರಾವಳಿ ಭಾಗದಲ್ಲಿ ಆರೋಗ್ಯ, ಶೈಕ್ಷಣಿಕ, ಧಾರ್ಮಿಕ ಹಾಗೂ ವಾಣಿಜ್ಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಹೀಗಾಗಿ ಈ ಭಾಗದ ಎಲ್ಲಾ ಶಾಸಕರ ಜತೆಗೆ ನಾನು ಹಾಗೂ ಪ್ರವಾಸೋದ್ಯಮ ಸಚಿವರು ಪ್ರತ್ಯೇಕವಾಗಿ ಸಭೆ ಮಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಅವರು ಮಂಗಳವಾರ ಮಾತನಾಡಿದರು. ಬಿಜೆಪಿ ಶಾಸಕ ಗುರುರಾಜಶೆಟ್ಟಿ ಗಂಟಿಹೊಳೆ ಅವರು ರಾಜ್ಯ ಪ್ರವಾಸೋದ್ಯಮ ನೀತಿ ವಿಚಾರವಾಗಿ ಕರಾವಳಿ …

Read More »

ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಮೀಟರ್ ಗೆ ₹1 ನಿಗದಿ; ಸಚಿವ ಎಂ ಬಿ ಪಾಟೀಲ.

ಬೆಂಗಳೂರು: ರಾಜ್ಯದಲ್ಲಿ ಬೇರೆ ಬೇರೆ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ಒಂದೊಂದು ದರ ಇದ್ದಿದ್ದರಿಂದ ಮನೆಮನೆಗೆ ಗ್ಯಾಸ್ ಸಂಪರ್ಕ ಒದಗಿಸಲು ವಿಳಂಬವಾಗಿದೆ. ಈಗ ಈ ಸಮಸ್ಯೆ ಬಗೆಹರಿದಿದ್ದು, 2030ರೊಳಗೆ ಮಿಕ್ಕಿರುವ 60 ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಪೈಪ್-ಲೈನ್ ಮೂಲಕ ಅಡುಗೆ ಅನಿಲ ಪೂರೈಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಡಿ ಎಸ್ ಅರುಣ್ ಕೇಳಿದ ಪ್ರಶ್ನೆಗೆ ಅವರು …

Read More »

ಕಸ ಎಸೆದರೇ ದಂಡವಿಧಿಸಿ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ ಬೆಳಗಾವಿ ಮಹಾನಗರ ಪಾಲಿಕೆ.

ಬೆಳಗಾವಿ:  ಗೋವಾವೇಸ್ ಪ್ರದೇಶದಲ್ಲಿನ ಬ್ಲಾಕ್’ಸ್ಪಾಟ್’ಗಳನ್ನು ನಗರಸೇವಕ ನೀತಿನ್ ಜಾಧವ್ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ತೆರುವುಗೊಳಿಸಲಾಗಿದ್ದು, ಸಿಸಿಟ್ಹಿವಿಯನ್ನು ಅಳವಡಿಸಲಾಗಿದೆ. ಇಲ್ಲಿ ಯಾರಾದರೂ ಕಸವನ್ನು ಎಸೆದರೇ, ಸಾವಿರಾರು ರೂಪಾಯಿ ದಂಡ ವಿಧಿಸಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ನೀಡಲಾಗಿದೆ. ಗೋವಾವೇಸ್ ಕಾರ್ಪೋರೇಷನ್ ಕಾಂಪ್ಲೇಕ್ಸಿನಲ್ಲಿದ್ದ ಡಸ್ಟ್’ಬೀನ್’ನನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿತ್ತು. ಅದನ್ನು ತೆರುವುಗೊಳಿಸಿ ಈ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದೆ. ಆದ್ದರಿಂದ ಇಲ್ಲಿನ ಜನರು ಡಸ್ಟ್’ಬೀನ್’ನಲ್ಲಿ ಕಸ ಎಸೆಯದೇ, ತ್ಯಾಜ್ಯ ವಿಲೇವಾರಿ ವಾಹನಗಳು ಬಂದಾಗ ಒಣ ಮತ್ತು ಹಸಿ …

Read More »

45 ದಿನಗಳಲ್ಲಿ ನಾವಿಕರ ಕುಟುಂಬ ಗಳಿಸಿದ್ದು ಬರೋಬ್ಬರಿ 30 ಕೋಟಿ ರೂ.

ಪ್ರಯಾಗ್​ರಾಜ್, ಮಾರ್ಚ್​ 05: ಮಹಾಕುಂಭ ಮೇಳವು ನಿಜವಾಗಿಯೂ ಕೋಟ್ಯಂತರ ಜನರ ಮನಸ್ಸಿನಲ್ಲಿ ಅಳಿಸಲಾಗದ ನೆನಪಾಗಿ ಉಳಿದಿದೆ. ಈ ಮಹಾ ಕುಂಭದಲ್ಲಿ ಒಂದೆಡೆ ಧರ್ಮ ಮತ್ತು ಆಧ್ಯಾತ್ಮಿಕತೆಯ ಬಗ್ಗೆ ಚರ್ಚೆ ನಡೆಯಿತು. ಮತ್ತೊಂದೆಡೆ, ಮಹಾ ಕುಂಭವು ಜನರಿಗೆ ಆದಾಯದ ಮೂಲವೂ ಆಗಿತ್ತು. ನಾವಿಕ ಕುಟುಂಬವೊಂದು 45 ದಿನಗಳಲ್ಲಿ ಬರೋಬ್ಬರಿ 30 ಕೋಟಿ ರೂ.ಗಳನ್ನು ಗಳಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಈ ಕುರಿತು ಮಾತನಾಡಿದ್ದಾರೆ. ನಾವಿಕ ಕುಟುಂಬವು ಪ್ರಯಾಗ್‌ರಾಜ್‌ನ ನೈನಿಯ ಅರೈಲ್‌ನವರು. ಈ …

Read More »

ಸ್ನೇಹಮಯಿ ಕೃಷ್ಣ ಮತ್ತೆ ಕೋರ್ಟ್​ ಮೊರೆ

ಮೈಸೂರು/ಬೆಂಗಳೂರು, : ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ನಿವೇಶನ ಹಂಚಿಕೆ ಹಗರಣ ಪ್ರಕರಣವನ್ನು ದೂರುದಾರ ಸ್ನೇಹಮಯಿಕೃಷ್ಣ ಸುಮ್ಮನೇ ಬಿಡುವಂತೆ ಕಾಣುತ್ತಿಲ್ಲ. ಪ್ರಕರಣವನ್ನು ಕೊನೆವರೆಗೂ ತೆಗೆದುಕೊಂಡು ಹೋಗುವ ತೀರ್ಮಾನ ಮಾಡಿದ್ದು, ಇದೀಗ ಮುಡಾ ನಿವೇಶನ ಹಂಚಿಕೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದಾರೆ. ಸಿಬಿಐ ತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್​ ವಜಾಗೊಳಿಸಿದ ಬಳಿಕ ಕೊಂಚ ರಿಲ್ಯಾಕ್ಸ್​ನಲ್ಲಿದ್ದ ಸಿಎಂ ಸಿದ್ದರಾಮಯ್ಯಗೆ ಮತ್ತೆ ಟೆನ್ಷನ್ ಶುರುವಾದಂತಾಗಿದೆ. ಮುಡಾ ಹಗರಣ …

Read More »

ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತ ಮೂವರು ಮೃತಪಟ್ಟಿದ್ದಾರೆ.

ಚಿತ್ರದುರ್ಗ, ಮಾರ್ಚ್​ 5: ಚಿತ್ರದುರ್ಗ ತಾಲೂಕಿನ ಸಿಬಾರ ಗ್ರಾಮದ ಬಳಿ ಬುಧವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ಹೆದ್ದಾರಿ ಬದಿ ನಿಂತಿದ್ದ ಲಾರಿಗೆ ಮತ್ತೊಂದು ಲಾರಿ, ಟ್ರಕ್​ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಲಾರಿ ಚಾಲಕ ಹಾಗೂ ಕಲ್ಲಂಗಡಿ ಸಾಗಿಸುತ್ತಿದ್ದ ಟ್ರಕ್‌ನಲ್ಲಿದ್ದ ಇಬ್ಬರು ಸಾವಿಗೀಡಾಗಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ಸಂಭವಿಸಿದ್ದು, ಸ್ಥಳಕ್ಕೆ ಚಿತ್ರದುರ್ಗ ಡಿವೈಎಸ್​​ಪಿ ದಿನಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ …

Read More »