ಬೆಳಗಾವಿ..
ಬನದ ಹುಣ್ಣಿಮೆಗೆ ಸವದತ್ತಿ ಯಲ್ಲಮ್ಮನ ದರ್ಶನಕ್ಕೆ ತೆರಳಿದ್ದ ಭಕ್ತರಿಬ್ಬರು ಅಪಘಾತಕ್ಕೆ ಬಲಿಯಾಗಿದ್ದಾರೆ.

ಯಲ್ಲಮ್ಮ ದೇವಿ ಭಕ್ತಾಧಿಗಳ ಮೇಲೆ ರಾಜ್ಯ ಸಾರಿಗೆ ಬಸ್ ಹರಿದು ಇಬ್ಬರು ಮೃತಪಟ್ಟಿದ್ದಾರೆ.
ನಾಲ್ವರು ಗಾಯಗೊಂಡ ಘಟನೆ ನಡೆದಿದೆ.
ಬಸ್ಸಿನ ಬ್ರೇಕ್ ಫೇಲ್ ಆಗಿದ್ದರಿಂದ ನಡೆದುಕೊಂಡು ಹೋಗುತ್ತಿದ್ದ ಇವರ ಮೇಲೆ ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡ ಜೋಗುಳಭಾವಿ ಬಳಿ ಶುಕ್ರವಾರ ಈ ಘಟನೆ ನಡೆದಿದೆ.

ಬೆಳಗಾವಿ ಶಹಾಪುರ ನಿವಾಸಿ ನಿಕಿತಾ ರಮೇಶ್ ಹದಗಲ್(25), ಚಿಂಚಕಂಡಿ ನಿವಾಸಿ ಬಸಪ್ಪ ವೆಂಕಪ್ಪ ಹಳೇಮನಿ(34) ಮೃತ ಪಟ್ಟವರು.

ಸವದತ್ತಿ ಯಲ್ಲಮ್ಮ ದೇವಿಯ ಜಾತ್ರೆ ಮುಗಿಸಿ ನಡೆದುಕೊಂಡು ಊರಿಗೆ ತೆರಳುತ್ತಿದ್ದ ವೇಳೆ ಯಲ್ಲಮ್ಮ ಗುಡ್ಡದಿಂದ ಧಾರವಾಡ ಕಡೆಗೆ ಹೋಗುತ್ತಿದ ಬಸ್ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಭಕ್ತಾಧಿಗಳ ಮೇಲೆ ಹರಿದಿದೆ. ಗಾಯಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7