Breaking News

ಹೆತ್ತ ತಂದೆ- ತಾಯಿಗಳನ್ನು ಗೌರವಿಸಬೇಕು. ತಂದೆ ತಾಯಿಗಳು ಮೊದಲ ಗುರು

Spread the love

ಹಂದಿಗುಂದ: ‘ಪ್ರತಿಯೊಬ್ಬರೂ ಹೆತ್ತ ತಂದೆ- ತಾಯಿಗಳನ್ನು ಗೌರವಿಸಬೇಕು. ತಂದೆ ತಾಯಿಗಳು ಮೊದಲ ಗುರುಗಳಾದರೆ ವಿದ್ಯೆ ಕಲಿಸುವ ಗುರುಗಳು ಪೂಜ್ಯನೀಯರು’ ಎಂದು ಮುಗಳಖೋಡ ಈಶ್ವರಲಿಂಗೇಶ್ವರ ದೇವಸ್ಥಾನ ಹಿರೇಮಠದ ಪ್ರಧಾನ ಅರ್ಚಕ ಸಚಿನ ಶಾಸ್ತ್ರಿ ಹೇಳಿದರು.

 

ಇಲ್ಲಿನ ಅರುಣೋದಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಐದನೇ ತರಗತಿಯ ವಿದ್ಯಾರ್ಥಿಗಳಿಂದ ಪಾಲಕರ ಪಾದಪೂಜೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ‘ಮಕ್ಕಳು ಪರೀಕ್ಷೆಗಳನ್ನು ಧೈರ್ಯದಿಂದ ಬರೆಯಬೇಕು. ಮೊಬೈಲ್ ದೂರವಿಟ್ಟು ಅಕ್ಷರಭ್ಯಾಸದ ಜೊತೆಗೆ ಸಂಸ್ಕಾರವಂತ ಜೀವನ ಕಲಿಯಬೇಕು’ ಎಂದರು.

ಸಂಸ್ಥೆಯ ಕಾರ್ಯದರ್ಶಿ ವಿಶ್ವನಾಥ ಖಾನಗೌಡ, ಮಹಾಲಕ್ಷ್ಮಿ ಬ್ಯಾಂಕಿನ ನಿರ್ದೇಶಕ ಮುರಗೆಪ್ಪ ಅಂದಾನಿ, ಪರಮಾನಂದ ಉಳ್ಳಾಗಡ್ಡಿ, ಪರಪ್ಪ ಸುಳ್ಳನವರ, ಮುಖ್ಯ ಶಿಕ್ಷಕ ನಾರಾಯಣ ಜಾಧವ, ರಾಮಕೃಷ್ಣ ಬನಾಜ, ಸಿ.ಎಸ್. ಹಿರೇಮಠ, ಶಾಂತಕುಮಾರ ಬೆಳ್ಳಿಕಟ್ಟಿ ಹಲವರು ಇದ್ದರು. ಶಿಕ್ಷಕ ಯಲ್ಲಪ್ಪ ಜಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು


Spread the love

About Laxminews 24x7

Check Also

ತುಮಕೂರು ವಿವಿಗೆ ಆಗಮಿಸಿದ ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​

Spread the loveತುಮಕೂರು: ಜಿಲ್ಲೆಯ ಬೀದರಕಟ್ಟೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಹಾಗೂ ವಿವಿಧ ಕಟ್ಟಡಗಳನ್ನು ಶುಕ್ರವಾರ ರಾಜ್ಯಪಾಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ