Breaking News

ಬೆಳಗಾವಿ: ಪ್ರೋತ್ಸಾಹಕ್ಕಾಗಿ ಕತೆ, ಚಿತ್ರಕಲೆ ಸ್ಪರ್ಧೆ

Spread the love

ಬೆಳಗಾವಿ: ಇಲ್ಲಿನ ಸಪ್ನಾ ಬುಕ್‌ಹೌಸ್‌ ಹಾಗೂ ರೋಷ್ಟ್ರಮ್‌ ಡಯರೀಸ್‌ ಸಂಘಟನೆ ಆಶ್ರಯದಲ್ಲಿ, ಈ ಭಾಗದ ಕಲಾವಿದರು- ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕತೆ ಹಾಗೂ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಅಭಿಷೇಕ ಬೆಂಡಿಗೇರಿ ಹೇಳಿದರು.

ಚಿತ್ರಕಲೆ ಸ್ಪರ್ಧೆ 16 ವರ್ಷ ಕೆಳಗಿನ ಹಾಗೂ ಮೇಲ್ಪಟ್ಟವರಿಗೆ ಪ್ರತ್ಯೇಕವಾಗಿ ನಡೆಯಲಿದೆ. ಎಲ್ಲಿಯ ಕಲಾವಿದರೂ ಪಾಲ್ಗೊಳ್ಳಬಹುದು. ‘ಬೆಳಗಾವಿ’ ವಿಷಯದ ಬಗ್ಗೆ ಮಾತ್ರ ಪೇಂಟಿಂಗ್‌ ಬಿಡಿಸಬೇಕು. ನ. 30ರೊಳಗೆ ಸಪ್ನಾ ಬುಕ್‌ಹೌಸ್‌ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಡಿ. 10ರೊಳಗೆ ಪೇಂಟಿಂಗ್‌ ಮರಳಿ ನೀಡಬೇಕು. ಮೊದಲ ಮೂರು ಸ್ಥಾನ ಪಡೆದವರಿಗೆ ನಗದು ಬಹುಮಾನವಿದೆ ಎಂದರು.

 

ಕತೆ ಸ್ಪರ್ಧೆ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ನಡೆಯಲಿದೆ. 1200 ಪದಗಳಲ್ಲಿರಬೇಕು. ಕತೆಯ ವಸ್ತುವನ್ನು ಲೇಖಕರೇ ಆಯ್ಕೆ ಮಾಡಿಕೊಳ್ಳಬಹುದು. ಸ್ವಂತ ಹಾಗೂ ಪ್ರಕಟಗೊಳ್ಳದ ಕತೆಗಳನ್ನು ಮಾತ್ರ ಪರಿಗಣಿಸಲಾಗುವುದು. ಆಸಕ್ತರು www.storybook.in ಇದರಲ್ಲಿ ಅಪ್ಲೋಡ್‌ ಮಾಡಬೇಕು. ವಿಜೇತ ಮೂರು ಕತೆಗಾರರಿಗೆ ಬಹುಮಾನ ನೀಡಲಾಗುವುದು. ಡಿಸೆಂಬರ್‌ 15 ಕತೆ ಪೋಸ್ಟ್‌ ಮಾಡಲು ಕೊನೆಯ ದಿನ ಎಂದು ಸಂಘಟನೆಯ ಸದಸ್ಯೆ ನಿಶಿಗಂಧಾ ಕಾನೂರಕರ್‌ ತಿಳಿಸಿದರು.

ಸಪ್ನಾ ಬುಕ್‌ಹೌಸ್‌ನ ಮ್ಯಾನೇಜರ್‌ ಎಂ.ವಿ.ರಘು ಮಾತನಾಡಿ, ಸ್ಪರ್ಧೆಗಳಲ್ಲಿ ವಿಜೇತರಿಗೆ ₹ 1.70 ಲಕ್ಷ ಮೊತ್ತದ ಬಹುಮಾನಗಳಿವೆ. ಅಲ್ಲದೇ ವೆಬ್‌ಸೈಟ್‌ ನಲ್ಲಿ ಹೆಚ್ಚು ಜನ ನೋಡಿದ ಕತೆ ಹಾಗೂ ಪೇಂಟಿಂಗಿಗೆ ವಿಶೇಷ ಬಹುಮಾನ ಕೂಡ ನೀಡಲಾಗವುದು ಎಂದರು.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ