Breaking News

ರಾಜ್ಯಾದ್ಯಂತ ಇಂದು ಮತ್ತು ನಾಳೆ ವ್ಯಾಪಕವಾಗಿ ಭಾರೀ ಮಳೆ ಸಾಧ್ಯತೆ ?

Spread the love

ಬೆಂಗಳೂರು, ಸೆ.4 (www.bengaluruwire.com) : ರಾಜಧಾನಿ ಬೆಂಗಳೂರು ಸೇರಿದಂತೆ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ( KSNDMC) ವು ತಿಳಿಸಿದೆ.

 

ಬಿಬಿಎಂಪಿ ಪ್ರದೇಶದಲ್ಲಿ ಗುಡುಗು ಸಹಿತ ಭಾರೀ ಮಳೆಯೊಂದಿಗೆ ವ್ಯಾಪಕವಾದ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 20 ಡಿಗ್ರಿ ಉಷ್ಣಾಂಶ ಇರಲಿದೆ ಎಂದು ಕೇಂದ್ರವು ತಿಳಿಸಿದೆ. ಹೀಗಾಗಿ ಭಾನುವಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದ ಪ್ರವಾಹ ಸಂಭವಿಸಬಹುದಾದ ಅಥವಾ ಮನೆಗಳಿಗೆ ನೀರು ನುಗ್ಗುವ ಸಾಧ್ಯತೆಯಿರುವ ಪ್ರದೇಶದ ಜನರು ಎಚ್ಚರಿಕೆವಹಿಸಬೇಕಾಗಿದೆ.

ಬಿಬಿಎಂಪಿಯ ಎಂಟು ವಲಯಗಳಲ್ಲಿ ತೇವಾಂಶದ ಪ್ರಮಾಣ ಪೂರ್ವ ವಲಯ (ಶೇ.94.60), ದಕ್ಷಿಣ ವಲಯ (ಶೇ.93.90), ಯಲಹಂಕ (ಶೇ.81.80), ದಾಸರಹಳ್ಳಿ ವಲಯ (ಶೇ.81.80), ಬೊಮ್ಮನಹಳ್ಳಿ ವಲಯ (ಶೇ.78.20), ಬಿಬಿಎಂಪಿ ಪಶ್ಚಿವ ವಲಯ (ಶೇ.72.90), ಮಹದೇವಪುರ (ಶೇ.74) ಹಾಗೂ ರಾಜರಾಜೇಶ್ವರಿ ನಗರ ವಲಯ (ಶೇ.71.80)ಗಳಲ್ಲಿ ಹೆಚ್ಚಾಗಿದ್ದು, ಮಳೆಯ ಸಾಧ್ಯತೆಯು ಅಧಿಕವಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಭಾನುವಾರದ ಉಪಗ್ರಹ ಚಿತ್ರ

ಭಾನುವಾರ ಆಗಿರುವ ಕಾರಣ ಹೆಚ್ಚಿನವರು ದೈನಂದಿನ ಕೆಲಸ ಕಾರ್ಯಗಳಿಗೆಂದು ಹೊರ ಹೋಗುವವರ ಪ್ರಮಾಣ ಕಡಿಮೆಯಿದೆ. ಆದರೂ ಮಳೆಯ ಸಂದರ್ಭದಲ್ಲಿ ಗುಡುಗು- ಸಿಡಿಲು ಬರುವಾಗ ಮರ, ಲೈಟ್ ಕಂಬ ಮತ್ತಿತರ ಕಡೆಗಳಲ್ಲಿ ನಿಲ್ಲದೆ ಸುರಕ್ಷಿತ ಸ್ಥಳದಲ್ಲಿ ನೆಲೆಸಿದರೆ ಉತ್ತಮ.

ಮಳೆಯ ಮುನ್ಸೂಚನೆಯು ಭಾನುವಾರದಿಂದ ಸೋಮವಾರ ಬೆಳಗ್ಗೆ 08:30 ಕ್ಕೆ ಕೊನೆಗೊಳ್ಳುವವರೆಗೆ ನೀಡಿರುವ ಮಾಹಿತಿಯಾಗಿದ್ದು, ರಾಜ್ಯದ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳ್ಲಿ ಭಾರೀ ಮಳೆಯಿಂದ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿ ಕರ್ನಾಟಕ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ ರಾಜ್ಯದ ಪ್ರತ್ಯೇಕ ಸ್ಥಳಗಳಲ್ಲಿ ಮಿಂಚು ಸಹಿತ ಗುಡುಗು ಸಹಿತ ಮಳೆಯಾಗಲಿದೆ.


Spread the love

About Laxminews 24x7

Check Also

ಪಂಚ ಗ್ಯಾರಂಟಿಗಳಿಗಾಗಿ ₹63 ಸಾವಿರ ಕೋಟಿ ಸಾಲ ಮಾಡಿದ ರಾಜ್ಯ ಸರ್ಕಾರ: ಸಿಎಜಿ ವರದಿ

Spread the love ಬೆಂಗಳೂರು: ಪಂಚ ಗ್ಯಾರಂಟಿಗಳಿಗಾಗಿ 2023-24 ಸಾಲಿನಲ್ಲಿ ಸಂಪನ್ಮೂಲ ಒದಗಿಸಲು ರಾಜ್ಯ ಸರ್ಕಾರ 63 ಸಾವಿರ ಕೋಟಿ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ