Breaking News

ಬಿಜೆಪಿ ಶಾಸಕರಿಂದ ‘ರಾಷ್ಟ್ರಧ್ವಜ’ಕ್ಕೆ ಅಪಮಾನ: ‘ತಿರಂಗ’ದ ಹೊದ್ದ ಆನೆ ಮೇಲೆ ಮಗನನ್ನು ಕೂರಿಸಿ ಸವಾರಿ

Spread the love

ವಿಜಯಪುರ: ಆಜಾದಿಕ ಅಮೃತ ಮಹೋತ್ಸವದ ಸಲುವಾಗಿ ದೇಶಾದ್ಯಂತ ಹರ್ ಘರ್ ತಿರಂಗ ಯಾತ್ರೆಯನ್ನು ನಡೆಸಲಾಗುತ್ತಿದೆ. ಈ ಸಲುವಾಗಿಯೇ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ತಾಳಿಕೋಟೆಯಲ್ಲಿ ಹಮ್ಮಿಕೊಂಡಿದ್ದಂತ ಕಾರ್ಯಕ್ರಮದಲ್ಲಿ, ಆನೆಯೊಂದಕ್ಕೆ ತಿರಂಗ ಹೊದಿಸಿ, ಸಿಂಗರಿಸಲಾಗಿತ್ತು.

ಹೀಗೆ ಸಿಂಗಾರಗೊಂಡಿದ್ದಂತ ತಿರಂಗ ಹೊದ್ದಿದ್ದಂತ ಆನೆಯ ಮೇಲೆಯೇ ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿ ( MLA A S Patil Nadahalli ) ತಮ್ಮ ಮಗನನ್ನು ಕೂರಿಸಿ, ಮೆರವಣಿಗೆ ಮಾಡಿ, ರಾಷ್ಟ್ರಧ್ವಜಕ್ಕೆ ( National Flag ) ಅಪಮಾನ ಮಾಡಿರುವಂತ ಘಟನೆ ಇಂದು ನಡೆದಿದೆ.

ಇಂದು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ತಾಳಿಕೋಟೆಯಲ್ಲಿ 75 ಕಿಲೋ ಮೀಟರ್ ಯುವಜನ ಸಂಕಲ್ಪ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆಯ ವೇಳೆಯಲ್ಲಿ ಆನೆಯೊಂದಕ್ಕೆ ತಿರಂಗ ಹೊದಿಸಿ, ಸಿಂಗಾರಗೊಳಿಸಲಾಗಿತ್ತು.

ಈ ಯುವಜನ ಸಂಕಲ್ಪ ನಡಿಗೆಯಲ್ಲಿ ಭಾಗವಹಿಸಿದ್ದಂತ ಮುದ್ದೇಬಿಹಾಳ ಕ್ಷೇತ್ರದ ಬಿಜೆಪಿ ಶಾಸಕ ಎ ಎಸ್ ಪಾಟೀಲ್ ನಡಹಳ್ಳಿಯವರು, ತಮ್ಮ ಮಗನನ್ನು ರಾಷ್ಟ್ರಧ್ವಜ ಹೊದ್ದಿದ್ದಂತ ಆನೆಯ ಮೇಲೆ ಕೂರಿಸಿ, ತಿರಂಗಕ್ಕೆ ಅವಮಾನ ಮಾಡಿರೋ ವೀಡಿಯೋ, ಪೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ