Breaking News

ಅಥಣಿ ಪಟ್ಟಣದಲ್ಲಿ ರಾಯಣ್ಣನ ಭವ್ಯ ಮೂರ್ತಿಯ ಪ್ರತಿಷ್ಠಾಪನೆ

Spread the love

ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಭವ್ಯ ಮೂರ್ತಿಯ ಪ್ರತಿಷ್ಠಾಪನೆಯ ಕಾರ್ಯಕ್ರಮವು ಅಥಣಿ ಪಟ್ಟಣದಲ್ಲಿ ವಿಜೃಂಭಣೆಯಿಂದ ಜರುಗಿತು ಅಥಣಿ ಪಟ್ಟಣಕ್ಕೆ ಬೆಳಗಿನ ಜಾವ ಆಗಮಿಸಿದ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ನೂರಾರು ಕುಂಭಹೊತ್ತ ಮಹಿಳೆಯರು ಮತ್ತು ಡೊಳ್ಳು ಕುಣಿತದೊಂದಿಗೆ ಉತ್ಸಾಹಿ ಯುವಕರು ಹಾಲುಮತದ ಮುಖಂಡರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಸ್ವಾಗತಿಸಿದರು.ಪಟ್ಟಣದ ಶಿವಾಜಿ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಿದ್ದೇಶ್ವರ ದೇವಸ್ಥಾನ ಹತ್ತಿರ ರಾಮಣ್ಣ ವೃತ್ತದಲ್ಲಿ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.

ಈ ವೇಳೆ ಚಿಕ್ಕೋಡಿ ಕಾಂಗ್ರೆಸ್ ಜಿಲ್ಲಾ ಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮಾತನಾಡಿ.ಇಂದು ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾನ ಐತಿಹಾಸಿಕವಾಗಿದೆ.ಬಹಳಷ್ಟು ಕಡೆ ಸಂಗೊಳ್ಳಿ ರಾಯಣ್ಣನನ್ನು ಹಾಲುಮತದವರು ಸ್ಥಾಪಿಸಿದ್ದಾರೆ.

ಅಥಣಿ ತಾಲ್ಲೂಕಿನ ಸಮಸ್ತ ಹಾಲುಮತ ಸಮಾಜದ ಜೊತೆಗೆ ಎಲ್ಲ ಜಾತಿ ಧರ್ಮದ ಜನರು ಒಂದಾಗಿ ಬಂದಿರುವದು ಐತಿಹಾಸಿಕ ವಿಷಯವಾಗಿದೆ.

ದೇಶದ ನೆಲ ಜಲಕ್ಕಾಗಿ ಸರ್ವಸ್ವವನ್ನೂ ತ್ಯಾಗಮಾಡಿದ ಸಂಗೊಳ್ಳಿ ರಾಯಣ್ಣ ನಂತವರ ಮೂರ್ತಿ ಪ್ರತಿಷ್ಠಾಪನೆ 850 ಕೆಜಿ ರಾಯಣ್ಣನ ಮೂರ್ತಿ ಸ್ಥಾಪನೆ ಮಾಡಲು ಎಸ್ ಕೆ ಬುಟಾಳಿ ಅವರು ಮುಂದಾದಾಗ ಮಾಜಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದಾಗ ಒಂಭತ್ತು ಅಡಿಗಿಂತ ಕಡಿಮೆ ಅಲ್ಲದ ಪಂಚಲೋಹದ ಮೂರ್ತಿ ಸ್ಥಾಪನೆ ಮಾಡುವಂತೆ ತಿಳಿಸಿದರು.

ರಾಜಯೋಗದ ಸಮಯದಲ್ಲಿ ಮೂರ್ತಿ ಪ್ರತಿಷ್ಠಾನ ಮಾಡಿದ್ದು ಸೆಪ್ಟೆಂಬರ್ ಅಥವಾ ಅಕ್ಟೋಬರ್ ತಿಂಗಳಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಂದ ಉದ್ಘಾಟನೆ ಮಾಡಲಾಗುತ್ತಿದ್ದು ಎಸ್ ಕೆ ಬುಟಾಳಿ ಅವರು ಎಲ್ಲ ಧರ್ಮಕ್ಕೂ ಬದ್ದರಾಗಿ ಇಂದು ಮೂರ್ತಿ ಸ್ಥಾಪನೆ ಮಾಡಿದ್ದನ್ನು ಅಭಿನಂದಿಸುತ್ತೇನೆ ಎಂದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ