Breaking News
Home / ರಾಜಕೀಯ / ಅನುಕಂಪದ ಉದ್ಯೋಗ’ ಹಕ್ಕಲ್ಲ – ‘ಸುಪ್ರೀಂ ಕೋರ್ಟ್’ ಮಹತ್ವದ ಅಭಿಪ್ರಾಯ

ಅನುಕಂಪದ ಉದ್ಯೋಗ’ ಹಕ್ಕಲ್ಲ – ‘ಸುಪ್ರೀಂ ಕೋರ್ಟ್’ ಮಹತ್ವದ ಅಭಿಪ್ರಾಯ

Spread the love

ನವದೆಹಲಿ: ಉದ್ಯೋಗಿ ಮರಣ ಹೊಂದಿದ ನಂತ್ರ ಅವರ ಕುಟುಂಬದ ಓರ್ವ ಸದಸ್ಯನಿಗೆ ಅನುಕಂಪದ ಆಧಾರದಲ್ಲಿ ( Compassionate employment ) ನೀಡುವ ಉದ್ಯೋಗ ಸ್ಥಾಪಿತವಾದ ಹಕ್ಕಲ್ಲ. ಈ ರೀತಿಯ ಉದ್ಯೋಗ ಪಡೆದವರಿಂದ ಕರ್ತವ್ಯ ಲೋಪಗಳಾದರೇ, ಅವರಿಗೆ ನೀಡಲಾದ ಹುದ್ದೆಯ ಅರ್ಹತೆಯನ್ನು ಹೊಂದುವಲ್ಲಿ ವಿಫಲವಾದರೇ, ಅಂತಹವರನ್ನು ಕೆಲಸದಿಂದ ತೆಗೆಯ ಬಹುದು ಎಂದು ಸುಪ್ರೀಂ ಕೋರ್ಟ್ ( Supreme Court ) ಮಹತ್ವದ ಅಭಿಪ್ರಾಯ ಪಟ್ಟಿದೆ.

 

ಈ ಸಂಬಂಧ ಪ್ರಕರಣವೊಂದರ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎ ಎಸ್ ಬೊಪಣ್ಣ ಅವರನ್ನು ಒಳಗೊಂಡಂತ ನ್ಯಾಯಪೀಠವು, ಅನುಕಂಪದ ಆಧಾರದ ಉದ್ಯೋಗವು ಸಾಮಾನ್ಯ ನೇಮಕಾತಿಯಲ್ಲಿ ಇರುವ ವಿನಾಯ್ತಿಯಷ್ಟೇ.. ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ಭದ್ರತೆ ಕಲ್ಪಿಸಲು ಇರುವ ಮಾನವೀಯ ನೆರವಾಗಿದೆ. ಈ ರೀತಿಯ ಸಹಾನುಭೂತಿಯ ಉದ್ಯೋಗ ಪಡೆದವರು, ಹುದ್ದೆ ಆಪೇಕ್ಷಿಸುವಂತಹ ಅರ್ಹತೆಗಳನ್ನು ಹೊಂದಿರಬೇಕು. ಕರ್ತವ್ಯಪರರಾಗಬೇಕು ಎಂದು ಹೇಳಿದೆ.

 

ಅಂದಹಾಗೇ ಮೊಹಮ್ಮದ್ ರೆಹಮಾನ್ ಖಾನ್ ಅವರ ತಂದೆಯ ನಿಧನದ ನಂತ್ರ, ಉತ್ತರ ಪ್ರದೇಶದ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಬೆರಳಚ್ಚುಗಾರರ ಉದ್ಯೋಗವನ್ನು 2015ರಲ್ಲಿ ನೀಡಲಾಗಿತ್ತು. ಈ ಹುದ್ದೆಗೆ ಆಪೇಕ್ಷಿತವಾಗಿದ್ದ ಪ್ರತಿ ನಿಮಿಷಕ್ಕೆ 25 ಪದಗಳ ಟೈಪಿಂಗ್ ವೇಗವನ್ನು ಸಾಧಿಸುವಂತೆ ಅವರಿಗೆ ಇಲಾಖೆ ಕಾಲಾವಕಾಶ ನೀಡಿತ್ತು.

ಆದ್ರೇ.. ಮೊಹಮ್ಮದ್ ರೆಹಮಾನ್ ಖಾನ್, ನಿಗದಿತ ಸಮಯದಲ್ಲಿ ಈ ಸಾಮರ್ಥ್ಯ ಹೊಂದಲು ವಿಫಲವಾಗಿದ್ದರು. ಹೀಗಿದ್ದರೂ ಹೆಚ್ಚುವರಿ ಕಾಲಾವಕಾಶ ನೀಡಿದ್ರು, ಅವರು ಕೌಶಲ್ಯ ಸಿದ್ಧಸಲಿಲ್ಲ. ಹೀಗಾಗಿ ಪೂರ್ವ ಷರತ್ತಿನ ಅನ್ವಯದ ಕಾರಣ, ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಗೆ ಮೊರೆ ಹೋಗಿದ್ದರು. ಅಲ್ಲಿ ನಾಲ್ಕನೇ ದರ್ಜೆಯ ಉದ್ಯೋಗ ನೀಡುವಂತೆ ಆದೇಶಿಸಲಾಗಿತ್ತು. ಇದರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತ ಪಡಿಸಿದೆ.


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ