Breaking News

ಹೆಸರಿಗೆ ಮಾತ್ರ ಹಾಲಿನ ವ್ಯಾಪಾರ, ಆದ್ರೆ ಮಾಡೋದು ಬೇರೆನೇ ಕೆಲಸ

Spread the love

ಇವರೆಲ್ಲಾ ಮಾಡುತ್ತಿದ್ದದ್ದು ಹಾಲಿನ ವ್ಯಾಪಾರ (Milk Business). ಆದ್ರೆ ಒಳಗೆ ನಡೀತಾ ಇದ್ದಿದ್ದು ಮಾತ್ರ ಬೇರೆನೇ ಕೆಲಸ. ಹೌದು, ಹುಬ್ಬಳ್ಳಿಯಲ್ಲಿ ನಕಲಿ ನೋಟು (Fake Note) ಚಲಾವಣೆ ಗ್ಯಾಂಗ್​ನ್ನು (Gang) ಪೊಲೀಸರು ಭೇದಿಸಿದ್ದಾರೆ. ಈ ಕೇಸ್​ನಲ್ಲಿ ತಗ್ಲಾಕೊಂಡ ವ್ಯಕ್ತಿಯ ಹಿನ್ನೆಲೆ ಕೇಳಿದ್ರೆ ಇನ್ನೂ ಶಾಕ್ ಆಗ್ತೀರಾ.

ಯಾಕೆಂದರೆ ಆತ ಸ್ಥಳೀಯ ಬಿಜೆಪಿ ಮುಖಂಡ (BJP Leader). ಹೊರಗೆ ಈತ ಸೇರಿ ಉಳಿದ ಆರೋಪಿಗಳು (Accused) ನಡೆಸ್ತಿದ್ದದ್ದು ಹಾಲಿನ ವ್ಯಾಪಾರ. ಆದರೆ ಒಳಗೊಳಗೆ ನಕಲಿ ನೋಟು ಚಲಾವಣೆ ಮಾಡ್ತಿದ್ದರು. ಈಗ ಸ್ಥಳೀಯ ಬಿಜೆಪಿ ಮುಖಂಡ ಸಾಗರ್ ಕಾಶಪ್ಪನವರ್ ಸೇರಿ ಮೂವರನ್ನು ಪೊಲೀಸರು (Police) ಬಂಧಿಸಿದ್ದಾರೆ. ಜೊತೆಗೆ ನಕಲಿ ನೋಟುಗಳನ್ನು ಕೂಡ ವಶಪಡಿಸಿಕೊಂಡಿದ್ದಾರೆ.

ಬಿಜೆಪಿ ಮುಖಂಡನ ನಕಲಿ ದಂಧೆ!

ನಕಲಿ ನೋಟು ಚಲಾವಣೆ ಜಾಲವನ್ನು ಭೇದಿಸುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ. ಬಿಜೆಪಿ ಮುಖಂಡ ಸಾಗರ್ ಕಾಶಪ್ಪನವರ್ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಾಗರ್ ಕಾಶಪ್ಪನವರ್ ಬಿಜೆಪಿ ಸಾಮಾಜಿಕ ಜಾಲತಾಣ ಸದಸ್ಯನೂ ಆಗಿದ್ದ. ಈಗ ಎಲ್ಲರನ್ನೂ ಕುಂದಗೋಳ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ನಕಲಿ ನೋಟುಗಳ ವಶ

ಹೊರಗೆ ನೋಡೋದಕ್ಕೆ ಹಾಲಿನ ವ್ಯಾಪಾರ ಮಾಡ್ತಿದ್ದ ಸಾಗರ್ ಕಾಶಪ್ಪನವರ್ ಒಳಗೊಳಗೆ ನಕಲಿ ನೋಟು ಚಲಾವಣೆ ಮಾಡುತ್ತಿದ್ದ. ಧಾರವಾಡ ಜಿಲ್ಲೆ ಕುಂದಗೋಳ ಪಟ್ಟಣದಲ್ಲಿ ನಕಲಿ ನೋಟು ಜಾಲ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರಿಂದ 500 ರೂಪಾಯಿ ಮುಖಬೆಲೆಯ 23,500 ರೂಪಾಯಿಯ 47 ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.
ಸ್ಥಳೀಯ ಬಿಜೆಪಿ ಸದಸ್ಯ ಸಾಗರ್


Spread the love

About Laxminews 24x7

Check Also

ನಿಧಿಯಾಸೆಗೆ ದೇವರ ಕಲ್ಲನ್ನು ಕೆಡವಿದ್ದ ಕಳ್ಳರನ್ನು ಬಂಧಿಸಿದ ಪೊಲೀಸರು: ಮೂಕಪ್ಪಸ್ವಾಮಿ ಪವಾಡ ಎಂದ ಗ್ರಾಮಸ್ಥರು

Spread the loveಹಾವೇರಿ: 4 ತಿಂಗಳ ಹಿಂದೆ ನಿಧಿ ಆಸೆಗಾಗಿ ಕೋಣಕಲ್ಲು ಭರಮಪ್ಪ ದೇವರ ಕಲ್ಲನ್ನು ಕೆಡವಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ