Breaking News

ಸ್ಯಾಂಡಲ್‍ವುಡ್ ನಟ ರಾಮ್‍ಕುಮಾರ್ ಪುತ್ರ ಧೀರೇನ್ ರಾಮ್ ಕುಮಾರ್ ಚಂದನವನಕ್ಕೆ

Spread the love

ಬೆಂಗಳೂರು: ವರನಟ ಡಾ.ರಾಜ್ ಕುಮಾರ್ ಮೊಮ್ಮಗ ಹಾಗೂ ಸ್ಯಾಂಡಲ್‍ವುಡ್ ನಟ ರಾಮ್‍ಕುಮಾರ್ ಪುತ್ರ ಧೀರೇನ್ ರಾಮ್ ಕುಮಾರ್ ಚಂದನವನಕ್ಕೆ ಕಾಲಿಟ್ಟಿದ್ದು, ಮೊದಲ ಚಿತ್ರ ಆರಂಭದಲ್ಲಿಯೇ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ದೊಡ್ಮನೆ ಹುಡುಗನ ಮೊದಲ ಚಿತ್ರವೇ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಧೀರೇನ್ ಹುಟ್ಟುಹಬ್ಬಕ್ಕೆ ಚಿತ್ರತಂಡ ಸರ್ಪ್ರೈಸ್ ನೀಡಿದೆ.

ಈ ಹಿಂದೆ ‘ದಾರಿ ತಪ್ಪಿದ ಮಗ’ ಸಿನಿಮಾ ಮೂಲಕ ಧೀರೇನ್ ಕಳೆದ ವರ್ಷವೇ ತಮ್ಮ ಸಿನಿ ಜರ್ನಿ ಆರಂಭಿಸಲಿದ್ದಾರೆ ಎನ್ನಲಾಗಿತ್ತು. ಇದು ಅಣ್ಣಾವ್ರ ಜನಪ್ರಿಯ ಚಿತ್ರವಾಗಿದ್ದು, ಈ ಹೆಸರನ್ನು ಇಡುವುದು ಬೇಡ ಎಂದು ನಿರ್ಧರಿಸಿ, ಬಳಿಕ ಚಿತ್ರದ ಟೈಟಲ್‍ನ್ನು ಶಿವ 143 ಎಂದು ಬದಲಿಸಲಾಗಿದೆ. ಹೆಸರು ಬದಲಾಯಿಸುತ್ತಿದ್ದಂತೆ ಚಿತ್ರೀಕರಣ ಭರದಿಂದ ಸಾಗಿದ್ದು, ಡಬ್ಬಿಂಗ್ ಹಂತ ತಲುಪಿದೆ.

ಇದೀಗ ಧೀರೇನ್ ಹುಟ್ಟುಹಬ್ಬದ ಅಂಗವಾಗಿ ಚಿತ್ರ ತಂಡ ಸರ್ಪ್ರೈಸ್ ನೀಡಿದ್ದು, ‘ಶಿವ 143’ ಚಿತ್ರದ ನ್ಯೂ ಲುಕ್ ಬಿಡುಗಡೆ ಮಾಡಿದೆ. ಈ ಪೋಸ್ಟರ್ ನಲ್ಲಿ ಧೀರೇನ್ ಮಾಸ್ ಲುಕ್ ನೀಡಿದ್ದು, ಚಿತ್ರ ಪ್ರೇಮಿಗಳನ್ನು ಸೆಳೆದಿದೆ. ಈ ಲುಕ್ ನೋಡಿದರೇನೆ ತಿಳಿಯುತ್ತದೆ ಧೀರೇನ್ ಸಿನಿಮಾಗಾಗಿ ಎಷ್ಟು ವರ್ಕೌಟ್ ಮಾಡುತ್ತಾರೆ ಎಂದು. ಸಖತ್ ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರದ ಕುರಿತ ನಿರೀಕ್ಷೆ ಹೆಚ್ಚಿಸಿದ್ದಾರೆ.

ಸ್ಯಾಂಡಲ್‍ವುಡ್ ನಟ ರಾಮ್ ಕುಮಾರ್ ಹಾಗೂ ಅಣ್ಣಾವ್ರ ಮಗಳು ಪೂರ್ಣಿಮಾ ಅವರ ಪುತ್ರ ಧೀರೇನ್ ಅವರ ಮೊದಲ ಚಿತ್ರವೇ ಕಿಕ್ಕೇರಿಸುತ್ತಿದ್ದು, ಟೈಟಲ್ ಮೂಲಕವೇ ಪ್ರೇಕ್ಷಕರ ಮನ ಗಹೆದ್ದಿತ್ತು. ಇದೀಗ ಮಾಸ್ ಲುಕ್ ನೋಡಿ ಮತ್ತಷ್ಟು ಫಿದಾ ಆಗಿದ್ದಾರೆ. ಅಷ್ಟೇ ಸೀರಿಯಸ್ಸಾಗಿ ಧೀರೇನ್ ಅವರು ಈ ಚಿತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಿರ್ದೇಶಕರು ಬಯಸಿದ್ದನ್ನು ಚಾಚೂತಪ್ಪದೆ ಮಾಡುತ್ತ ಶಿಸ್ತಿನ ನಟ ಎನಿಸಿಕೊಂಡಿದ್ದಾರಂತೆ.

ಹೆಬ್ಬೆಟ್ಟಿನ ರೇಖೆಗಳಲ್ಲಿಯೇ ಹಾರ್ಟ್ ಆಕೃತಿ ಬಿಡಿಸಿ, ಶಿವ 143 ಎಂದು ಬರೆದಾಗಲೇ ಇದು ಮಾಸ್ ಲವ್ ಸ್ಟೋರಿ ಎಂಬ ಸುಳಿವು ಸಿಕ್ಕಿತ್ತು. ಇದೀಗ ಖಡಕ್, ಖದರ್ ಲುಕ್ ನೋಡಿ ಇದೊಂದು ಪಕ್ಕಾ ಮಾಸ್ ಲವ್ ಸ್ಟೋರಿ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಧೀರೇನ್‍ಗೆ ನಾಯಕಿಯಾಗಿ ‘ಟಗರು’ ಖ್ಯಾತಿಯ ಕೆಂಡ ಸಂಪಿಗೆ ಮಾನ್ವಿತಾ ಹರೀಶ್ ನಟಿಸಿದ್ದಾರೆ. ಚಿತ್ರ ಅಂತಿಮ ಹಂತ ತಲುಪಿದ್ದು, ಲಾಕ್‍ಡೌನ್ ನಂತರ ದೊಡ್ಮನೆ ಹುಡುಗನ ಗ್ರ್ಯಾಂಡ್ ಎಂಟ್ರಿಗೆ ವೇದಿಕೆ ಸಿದ್ಧಪಡಿಸಲು ನಿರ್ಮಾಪಕ ಜಯಣ್ಣ-ಬೋಗೆಂದ್ರ ಸಿದ್ಧತೆ ನಡೆಸಿದ್ದಾರೆ.


Spread the love

About Laxminews 24x7

Check Also

ಹಾರೂಗೇರಿ :ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರಿಂದ ಬೃಹತ್ ಪ್ರತಿಭಟನೆ‌.

Spread the loveಹಾರೂಗೇರಿ :ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರಿಂದ ಬೃಹತ್ ಪ್ರತಿಭಟನೆ‌. ಹಾರೂಗೇರಿ ಕ್ರಾಸನಲ್ಲಿ ರಸ್ತೆ ತಡೆದು ಅನ್ನದಾತರಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ