ಕರಾವಳಿ ಪ್ರದೇಶದ ಬಿಜೆಪಿ ನಾಯಕ ಪ್ರವೀಣ್ ನೆಟ್ಟೂರ ಕೊಲೆ ಮಾಡಿದವರನ್ನು ಎನ್‍ಕೌಂಟರ್ ಮಾಡಬೇಕೆಂದು ಬೆಳಗಾವಿಯ ಬಿಜೆಪಿಯ ಗ್ರಾಮೀಣ ಮಂಡಲಾಧ್ಯಕ್ಷರಾದ ಧನಂಜಯ್ ಜಾಧವ್ ತಮ್ಮದೇ ಆದ ಸರಕಾರಕ್ಕೆ ಆಗ್ರಹಿಸಿದ್ದಾರೆ.
ಕರಾವಳಿ ಪ್ರದೇಶದ ಬಿಜೆಪಿ ನಾಯಕ ಪ್ರವೀಣ್ ನೆಟ್ಟೂರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವೀಡಿಯೋ ಹೇಳಿಕೆಯೊಂದನ್ನು ನೀಡಿರುವ ಧನಂಜಯ್ ಜಾಧವ್‍ರವರು, ಕರಾವಳಿ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟೂರ ಕೊಲೆಯಾಗಿದೆ. ಇವರ ಕೊಲೆ ಎಲ್ಲಾ ಹಿಂದೂಗಳಿಗೆ ತುಂಬಾ ಅವಮಾನಕರ ಸಂಗತಿಯಾಗಿದೆ. ಈ ರೀತಿಯ ಘಟನೆಗಳು ಮೇಲಿಂದ ಮೇಲೆ ಆಗುತ್ತಿವೆ.
ಹಾಗಾಗಿ ನಾನು ನಮ್ಮ ಪಕ್ಷದ ಎಲ್ಲಾ ಹಿರಿಯ ನಾಯಕರಿಗೆ ನಾನು ವಿನಂತಿ ಮಾಡುತ್ತೇನೆ. ಪ್ರವೀಣ್ ಕೊಲೆ ಮಾಡಿದ ದುಷ್ಕರ್ಮಿಗಳನ್ನು ತಕ್ಷಣವೇ ಎನ್‍ಕೌಂಟರ್ ಮಾಡಬೇಕು. ಅವರಿಗೆ ಕಾನೂನಿನ ಭಾಷೆ ಗೊತ್ತಾಗುವುದಿಲ್ಲ.
ಅವರಿಗೆ ಅದೇ ಭಾಷೆ ಗೊತ್ತಾಗುತ್ತದೆ. ಇಂಥ ದುಷ್ಕರ್ಮಿಗಳಿಗೆ ಸ್ವಲ್ಪ ಅವಕಾಶ ಮಾಡಿಕೊಟ್ಟರೆ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ದೇಶದಲ್ಲಿ ಅನೇಕ ಹಿಂದೂಗಳ ಕೊಲೆ ಮಾಡಲು ಇವರು ಹಿಂಜರಿಯುವುದಿಲ್ಲ ಎಂದರು.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದ ಧನಂಜಯ್ ಜಾಧವ್‍ರವರು, ಸೋನಿಯಾ ಗಾಂಧಿ ವಿರುದ್ಧ ವಿಚಾರಣೆ ಮಾಡುವಾಗ ರಸ್ತೆ, ರೈಲು ಮೊದಲಾದವನ್ನು ಬಂದ್ ಮಾಡುತ್ತೀರಿ. ನಮ್ಮ ಕಾರ್ಯಕರ್ತರ ಕೊಲೆಯನ್ನು ಗಂಭೀರವಾಗಿ ಪರಿಗಣಿಸಬೇಡಿ, ಬಿಟ್ಟುಬಿಡಿ ಎಂದು ಹಗುರವಾಗಿ ಹೇಳುತ್ತೀರಿ.
ಈ ರೀ ಮಾತನಾಡುವುದಕ್ಕೆ ನಿಮಗೆ ನಾಚಿಕೆಯಾಗಬೇಕು. ಬಿಜೆಪಿ ಜನರಿಗಾಗಿ ಕೆಲಸ ಮಾಡುವ ಪಾರ್ಟಿ, ದೇಶಕ್ಕಾಗಿ ಕಾರ್ಯ ಮಾಡುವ ಪಾರ್ಟಿ. ನಮ್ಮ ಸರಕಾರಕ್ಕೆ ನಾವು ವಿನಂತಿಯನ್ನು ಮಡುತ್ತೇವೆ. ಕೊಲೆಪಾತಕರನ್ನು ಎನ್‍ಕೌಂಟರ್ ಮಾಡಿ ಎಂದರು.
Laxmi News 24×7