Breaking News

ಆಹಾರ ಧಾನ್ಯಕ್ಕೆ GST ಇಲ್ಲ: ದೇಶಾದ್ಯಂತ ಭಾರಿ ವಿರೋಧದ ಬೆನ್ನಲ್ಲೇ ಕೇಂದ್ರದ ಸ್ಪಷ್ಟನೆ

Spread the love

ನವದೆಹಲಿ: ಹಾಲಿನ ಉತ್ಪನ್ನಗಳಾದ ಮೊಸರು, ಮಜ್ಜಿಗೆ, ಸಿಹಿ ಲಸ್ಸಿ ಧಾನ್ಯಗಳು, ಅಕ್ಕಿ, ಅವಲಕ್ಕಿ, ಮಂಡಕ್ಕಿ ಮೇಲೆ ಶೇಕಡ 5 ರಷ್ಟು ಜಿಎಸ್‌ಟಿ ವಿಧಿಸಿರುವುದಕ್ಕೆ ಸಾರ್ವಜನಿಕರಿಂದ ಭಾರಿ ವಿರೋಧ ವ್ಯಕ್ತವಾಗಿದೆ.

ದೇಶಾದ್ಯಂತ ಜನಾಕ್ರೋಶ ವ್ಯಕ್ತವಾಗುತ್ತಲೇ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

25 ಕೆಜಿಗಿಂತ ಕೆಳಗಿನ ಪ್ಯಾಕ್ ಗಳಿಗೆ ಮಾತ್ರ ಜಿಎಸ್‌ಟಿ ವಿಧಿಸಲಾಗುತ್ತದೆ. 25 ಕೆಜಿ ಮೇಲ್ಪಟ್ಟ ಧಾನ್ಯ ವಸ್ತುಗಳಿಗೆ ಜಿಎಸ್‌ಟಿ ವಿಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ.

ಪ್ಯಾಕ್ ಮಾಡಿದ ಆಹಾರ ಧಾನ್ಯಗಳು, 25 ಕೆಜಿಗಿಂತ ಹೆಚ್ಚಿನ ತೂಕದ ಹಿಟ್ಟು, ಬ್ರಾಂಡೆಡ್ ಅಲ್ಲದ ಪ್ಯಾಕ್ ಮಾಡಿದ ಆಹಾರಗಳಿಗೆ ಶೇಕಡ 5 ಜಿಎಸ್‌ಟಿಯಿಂದ ವಿನಾಯಿತಿ ಇದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಪ್ಯಾಕ್ ಮಾಡಿರುವ ಬ್ರಾಂಡೆಡ್ ಅಲ್ಲದ ಮತ್ತು ಲೇಬಲ್ ಅಂಟಿಸಿದ ಆಹಾರ ಪದಾರ್ಥಗಳಿಗೆ ಶೇಕಡ 5ರಷ್ಟು ಜಿಎಸ್‌ಟಿ ಅನ್ವಯವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಬ್ರಾಂಡೆಡ್ ಅಲ್ಲದ ಸರಕುಗಳಿಗೆ ತೆರಿಗೆ ಇಲ್ಲವೆಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸೀಮಾ ಸುಂಕ ಮಂಡಳಿ ಸ್ಪಷ್ಟಪಡಿಸಿದೆ.

25 ಕೆಜಿವರೆಗಿನ ಹಿಟ್ಟಿಗೆ ಶೇಕಡ 5 ರಷ್ಟು ಜಿಎಸ್‌ಟಿ ಅನ್ವಯವಾಗಲಿದ್ದು, 25 ಕೆಜಿ ಮೇಲ್ಪಟ್ಟ ಚೀಲಗಳಿಗೆ ವಿನಾಯಿತಿ ನೀಡಲಾಗುವುದು. 10 ಕೆಜಿ, 15 ಕೆಜಿ, 20 ಕೆಜಿ ತೂಕದ ಹಿಟ್ಟಿನ ಚೀಲಗಳಿಗೆ ಜಿಎಸ್ಟಿ ಅನ್ವಯವಾಗುತ್ತದೆ. ಬ್ರಾಂಡೆಡ್ ಅಲ್ಲದ ಸರಕುಗಳಿಗೆ ತೆರಿಗೆ ಇಲ್ಲವೆಂದು ಸ್ಪಷ್ಟನೆ ನೀಡಲಾಗಿದೆ. 50 ಕೆಜಿವರೆಗೆ ಒಂದೇ ಚೀಲದಲ್ಲಿ ಅಕ್ಕಿ ಇದ್ದರೂ ಅದನ್ನು ಪ್ರಿಪ್ಯಾಕ್ ಮತ್ತು ಲೇಬಲ್ಡ್ ಎಂದು ಪರಿಣಿಸಲ್ಲ ಎನ್ನಲಾಗಿದೆ.


Spread the love

About Laxminews 24x7

Check Also

ಗುಜರಾತ್​ ಕ್ಯಾಪ್ಟನ್ಸಿ ಬಿಟ್ಟು ಮತ್ತೆ ಮುಂಬೈ ಪಾಲಾಗ್ತಾರಾ ಹಾರ್ದಿಕ್ ಪಾಂಡ್ಯ​?

Spread the love ಮುಂಬೈ, ಮಹಾರಾಷ್ಟ್ರ: ಟೀಂ ಇಂಡಿಯಾ ಟಿ 20 ನಾಯಕ ಹಾರ್ದಿಕ್ ಪಾಂಡ್ಯ ಮತ್ತೆ ಮುಂಬೈ ತಂಡಕ್ಕೆ ಮರಳುತ್ತಾರಾ?, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ