ಬೆಂಗಳೂರು : ನಾನು ಸಿದ್ದರಾಮೋತ್ಸವಕ್ಕೆ ಹೋಗುವುದಿಲ್ಲ, ಸಿದ್ದರಾಮಯ್ಯ ಎರಡನೇ ಮದುವೆ ಆದರೆ ಹೋಗುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಇಬ್ರಾಹಿಂ ಅವರು ಸೋಮವಾರ ಮಗಳ ಮದುವೆಗೆ ಆಹ್ವಾನ ನೀಡುವ ಸಲುವಾಗಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಮಾತನಾಡಿ,
ಬೇರೆ ಯಾವ ವಿಚಾರವನ್ನೂ ಮಾತನಾಡಲಿಲ್ಲ, ಆಮಂತ್ರಣ ನೀಡಲು ಬಂದಿದ್ದೆ ಎಂದರು.
ಸಿದ್ದರಾಮೋತ್ಸವಕ್ಕೆ ಹೋಗುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನಮ್ಮದು ಈಗ ಬೇರೆ ಕಂಪನಿ.ಹೀಗಾಗಿ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಹೋಗುವುದಿಲ್ಲ.ಕಾರ್ಯಕ್ರಮಕ್ಕೆ ಆಹ್ವಾನ ನೀಡಿದರೂ ಹೋಗುವುದಿಲ್ಲ. ಸಿದ್ದರಾಮಯ್ಯ ಎರಡನೆ ಮದುವೆಯಾದರೆ ಹೋಗುತ್ತೇನೆ.ಅದೇನು ಮದುವೆ ಕಾರ್ಯಕ್ರಮ ಅಲ್ಲವಲ್ಲ ಎಂದರು.
ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿಗೆ ಬೆಂಬಲ ವಿಚಾರಕ್ಕೆ ಸಂಬಂಧಪಟ್ಟಂತೆ ಜುಲೈ 18 ರಂದು ಪಕ್ಷದ ನಾಯಕರ ಸಭೆ ಕರೆಯುತ್ತೇವೆ.ಬಳಿಕ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
Laxmi News 24×7