Breaking News

ಡಿಕೆಶಿ ಬುಡ ಅಲ್ಲಾಡಿಸಲು ತ್ರಿಶೂಲವ್ಯೂಹ! ‘ವಿಶ್ವನಾಥ್’ ಅಸ್ತ್ರ ಬಳಕೆಗೆ ಅಶ್ವಥ್ ನಾರಾಯಣ, ಸಿಪಿವೈ, ಜಾರಕಿಹೊಳಿ ರಣತಂತ್ರ

Spread the love

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ರ ರಾಜಕೀಯ ಬುಡ ಅಲ್ಲಾಡಿಸಲು ಬಿಜೆಪಿ ಭಾರಿ ರಣತಂತ್ರ ರೂಪಿಸಿದೆ. ಡಿಕೆಶಿಯ ಬದ್ಧವೈರಿಗಳಾದ ಅಶ್ವಥ್ ನಾರಾಯಣ, ಸಿ.ಪಿ.ಯೋಗೇಶ್ವರ್ ಮತ್ತು ರಮೇಶ್ ಜಾರಕಿಹೊಳಿ ಅವರು ಡಿಕೆಶಿ ಮಣಿಸಲು ತ್ರಿಶೂಲವ್ಯೂಹ ರಚನೆ ಮಾಡಿದ್ದಾರೆ.

 

ಸರ್ಕಾರ ಇರುವ ಸಂದರ್ಭದಲ್ಲಿ ಹಲವು ಬಿಜೆಪಿ ನಾಯಕರಿಗೆ ಖೆಡ್ಡಾ ತೋಡಲು ಸಿದ್ಧತೆ ನಡೆಸಿದ್ದ ಡಿಕೆಶಿಗೆ, ಇದೀಗ ಅವರ ಬದ್ಧವೈರಿಗಳು ‘ವಿಶ್ವನಾಥ್’ ಎಂಬ ಅಸ್ತ್ರವನ್ನ ಹೂಡುತ್ತಿದ್ದಾರೆ. ಈ ಹಿಂದೆ ಚುನಾವಣೆಯಲ್ಲಿ ಡಿಕೆಶಿ ವಿರುದ್ಧ ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಸೋಲು ಕಂಡಿದ್ದ ಅಭ್ಯರ್ಥಿ ವಿಶ್ವನಾಥ್​ ಅವರನ್ನ ಮುಂಬರುವ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿಸಲು ಸಿದ್ಧತೆ ನಡೆಯುತ್ತಿದೆ.

2004ರಲ್ಲಿ ಸಾತನೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿದ್ದ ವಿಶ್ವನಾಥ್​, 2008ರ ಚುನಾಚಣೆಯಲ್ಲಿ ಡಿಕೆಶಿಗೆ ಜೆಡಿಎಸ್​ ಅಭ್ಯರ್ಥಿಯಾಗಿ ಎದುರಾಳಿಯಾಗಿದ್ದರು. ಡಿಕೆಶಿಗೆ ಪ್ರಬಲ ಫೈಟ್ ಕೊಟ್ಟಿದ್ದ ವಿಶ್ವನಾಥ್, ಕೇವಲ 7179 ಮತಗಳಿಂದ ಸೋಲುಂಡಿದ್ದರು. 2013ರಲ್ಲಿ ಮತ್ತೆ ಸ್ಪರ್ಧೆ ಮಾಡಿದ್ದ ವಿಶ್ವನಾಥ್​, ಡಿಕೆಶಿಯನ್ನು ಎದುರಿಸಲು ಆಗದೆ ಚುನಾವಣೆಯಿಂದ ದೂರ ಉಳಿದಿದ್ದರು. ಅಲ್ಲದೆ ದಳಪತಿಗಳಿಂದ ಅಂತರ ಕಾಯ್ದುಕೊಂಡಿದ್ದರು. ಇದೀಗ ಇವರನ್ನು ಬಿಜೆಪಿಗೆ ಕರೆತಂದು ಡಿಕೆಶಿ ವಿರುದ್ಧ ಚುನಾವಣಾ ಕಣಕ್ಕಿಳಿಸಲು ಅಶ್ವಥ್ ನಾರಾಯಣ, ಸಿ.ಪಿ.ಯೋಗೇಶ್ವರ್, ರಮೇಶ್ ಜಾರಕಿಹೊಳಿ ಕಸರತ್ತು ನಡೆಸುತ್ತಿದ್ದಾರೆ.

ಇನ್ನು ಸಿಡಿ ಕೇಸ್​ನಲ್ಲಿ ಡಿಕೆಶಿ ಪಾತ್ರವಿದೆ ಎಂದು ಗರಂ ಆಗಿದ್ದ ರಮೇಶ್​ ಜಾರಕಿಹೊಳಿ, ಕನಕಪುರದಲ್ಲೇ ಡಿಕೆಶಿಯನ್ನು ಸೋಲಿಸುವೆ. ಆ ಮೂಲಕ ನಾನು ಏನೆಂದು ತೋರಿಸುವೆ ಎಂದೆ ರಮೇಶ್​ ಜಾರಕಿಹೊಳಿ ಅಂದು ತೊಡೆತಟ್ಟಿದ್ದರು.


Spread the love

About Laxminews 24x7

Check Also

ಅನಾರೋಗ್ಯದಿಂದ ತಾಯಮ್ಮ ಹುಲಿ ಸಾವು

Spread the loveಮೈಸೂರು: ಚಾಮರಾಜೇಂದ್ರ ಮೃಗಾಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣು ಹುಲಿ ತಾಯಮ್ಮ ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮುಂಜಾನೆ 3.45ರ ಸಮಯದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ