Breaking News

ಮೂಡಲಗಿ ತಾಲೂಕಿನ ಸತ್ತಿಗೇರಿ ಮಡ್ಡಿಯಲ್ಲಿ ಮಸೀದಿ (Masjid) ಮೈಕ್ ಹತ್ತಿರ ಕೇಸರಿ ಧ್ವಜ

Spread the love

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸತ್ತಿಗೇರಿ ಮಡ್ಡಿಯಲ್ಲಿ ಮಸೀದಿ (Masjid) ಮೈಕ್ ಹತ್ತಿರ ಕೇಸರಿ ಧ್ವಜ ಕಟ್ಟಿದ್ದಾರೆ. ಮಂಗಳವಾರ ತಡರಾತ್ರಿ ನಡೆದ ಘಟನೆ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ರಾತ್ರಿ ಹೊತ್ತಿಗೆ ಮಸೀದಿ ಮೇಲೆ ಕೇಸರಿ ಧ್ವಜ ಕಟ್ಟಿದ್ದಾರೆ. ಹಿಂದೂ-ಮುಸ್ಲಿಂ ಮುಖಂಡರ ಸಮ್ಮುಖದಲ್ಲಿ ಗ್ರಾಮಸ್ಥರು ಧ್ವಜವನ್ನು ಇಳಿಸಿದ್ದಾರೆ. ಗ್ರಾಮದಲ್ಲಿ ಸದ್ಯ ವಾತಾವರಣ ಶಾಂತವಿದ್ದು, ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ.

ಈ ಗ್ರಾಮದಲ್ಲಿ ಎಲ್ಲ ಸಮುದಾಯವರು ಸೇರಿ ಒಟ್ಟು 645 ಜನರು ವಾಸವಿದ್ದಾರೆ. ಈ ಕೃತ್ಯ ಎಸಗಿರುವುದು ಯಾರು? ಎಂದು ಪೊಲೀಸರು ರ್ಶೋಧಕಾರ್ಯ ನಡೆಸುತ್ತಿದ್ದಾರೆ.

ಚೋಟಾ ಪಾಕಿಸ್ತಾನ್ ಎಂದ ವ್ಯಕ್ತಿ:
ಮೈಸೂರಿನಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ರಂಜಾನ್ ದಿನದಂದು ನಂಜನಗೂಡು ತಾಲೂಕಿನ ಕೌಲಂದೆ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಒಂದೆಡೆ ಸೇರಿದ್ದರು. ನಮಾಜ್ ಮುಗಿಸಿ ಒಂದು ಕಡೆ ಸೇರಿದ್ದರು. ಈ ವೇಳೆ ವ್ಯಕ್ತಿಯೊಬ್ಬ ವಿಡಿಯೋ ಮಾಡಿದ್ದಾನೆ. ದೃಶ್ಯ ಸೆರೆಹಿಡಿಯುವಾಗ ಆ ವ್ಯಕ್ತಿ ಕೌಲಂದೆ ಗ್ರಾಮ ಚೋಟಾ ಪಾಕಿಸ್ತಾನ್ ಎಂದು ಹೇಳಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಜಾನ್​ ಬ್ಯಾನ್​ಗೆ ಹಿಂದೂ ಮುಖಂಡರು ಪಟ್ಟು ಹಿಡಿದಿದ್ದಾರೆ. ಆಜಾನ್ ನಿಷೇಧಿಸದಿದ್ದರೆ ದೇವಸ್ಥಾನಗಳಲ್ಲಿ ಸುಪ್ರಭಾತ ಹಾಕಲಾಗುತ್ತದೆ ಎಂದು ಹೇಳಿದ್ದರು. ನೀಡಿದ ಗಡಿ ಮೀರಿದಾಗ ರಾಜ್ಯದಲ್ಲಿ ಸುಪ್ರಭಾತ ಮೊಳಗಿತ್ತು. ಸುಪ್ರಭಾತ ಅಭಿಯಾನ ನಡೆಸಿ ಟಿವಿ9 ಜೊತೆ ಮಾತನಾಡಿದ ಪ್ರಮೋದ್ ಮುತಾಲಿಕ್, ಸುಪ್ರಭಾತ ಅಭಿಯಾನ ಅತ್ಯಂತ ಯಶಸ್ವಿಯಾಗಿದೆ. ಮಸೀದಿ ಮೇಲಿನ ಮೈಕ್​ ತೆರವಿಗೆ ನೀಡಿದ್ದ ಗಡುವು ಮುಗಿದಿದೆ. ಗಡುವು ಮುಗಿದರೂ ರಾಜ್ಯ ಸರ್ಕಾರ ಮೈಕ್ ತೆರವುಗೊಳಿಸಿಲ್ಲ. ಆಜಾನ್ ನಿಲ್ಲಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದರು.


Spread the love

About Laxminews 24x7

Check Also

ರಾಜ್ಯದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತಿದ್ದು, ರಾಸಾಯನಿಕ ಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Spread the loveಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ