Breaking News

ವೇಗವೂ ಇಲ್ಲ, ಸಮಯಪಾಲನೆಯೂ ಇಲ್ಲ…

Spread the love

ಭಾರತೀಯ ರೈಲ್ವೆಯು 15 ನಿಮಿಷಗಳ ಸಮಯ ಪಾಲನೆ ಮಾನದಂಡವನ್ನು ಹೊಂದಿದೆ. ಅಂದರೆ ರೈಲು ತನ್ನ ಗಮ್ಯ ಸ್ಥಳವನ್ನು ನಿಗದಿತ ಸಮಯಕ್ಕಿಂತ 15 ನಿಮಿಷ ವಿಳಂಬವಾಗಿ ತಲುಪಿದರೂ ಅದು ಸರಿಯಾದ ಸಮಯಕ್ಕೆ ಆಗಮಿಸಿದೆ ಎಂದು ಪರಿಗಣಿಸಲಾಗುತ್ತದೆ. ಹೀಗಿದ್ದರೂ ಕೇವಲ ಶೇ.69.23ರಷ್ಟು ರೈಲುಗಳು ಸಮಯಕ್ಕೆ ಸರಿಯಾಗಿ ತಮ್ಮ ಗಮ್ಯವನ್ನು ತಲುಪಿವೆ ಮತ್ತು ಈ ಪ್ರವೃತ್ತಿಯು ಕುಸಿಯುತ್ತಲೇ ಇದೆ.

2008-09ರಲ್ಲಿ ಸರಾಸರಿ ಸುಮಾರು ಶೇ.69ರಷ್ಟು ಎಕ್ಸ್‌ಪ್ರೆಸ್ ರೈಲುಗಳು ಸಮಯ ಪಾಲನೆಯನ್ನು ಹೊಂದಿದ್ದು,2013-14ರಲ್ಲಿ ಅದು ಶೇ.83ಕ್ಕೆ ಏರಿತ್ತು.

ಆದರೆ ಆಗಿನಿಂದ ಈ ಸಂಖ್ಯೆ ಕುಗ್ಗುತ್ತಲೇ ಇದೆ.

ನಿಖಿಲ್ ರಾಮಪಾಲ್ ಕಳೆದೊಂದು ದಶಕದಲ್ಲಿ ರೈಲ್ವೆ ಮೂಲಸೌಕರ್ಯಗಳ ಉನ್ನತೀಕರಣಕ್ಕಾಗಿ 2.5 ಲ.ಕೋ.ರೂ.ಗಳ ಬೃಹತ್ ಮೊತ್ತವನ್ನು ಹೂಡಿಕೆ ಮಾಡಲಾಗಿದೆ. ರೈಲುಗಳ ವೇಗವನ್ನು ಹೆಚ್ಚಿಸಲು 2016-17ರಲ್ಲಿ ‘ಮಿಷನ್ ರಫ್ತಾರ್’ ಜಾರಿಗೊಳಿಸಲಾಗಿದೆ. ಹೀಗಿದ್ದರೂ ಭಾರತೀಯ ರೈಲ್ವೆಯು ರೈಲುಗಳ ವೇಗವನ್ನು ಹೆಚ್ಚಿಸುವಲ್ಲಿ ಮತ್ತು ಸಮಯ ಪಾಲನೆಯನ್ನು ಉತ್ತಮಗೊಳಿಸುವಲ್ಲಿ ವಿಫಲಗೊಂಡಿದೆ ಎನ್ನುವುದನ್ನು ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೇಖಪಾಲ (ಸಿಎಜಿ)ರ ಆಡಿಟ್ ವರದಿಯು ಬಯಲಿಗೆಳೆದಿದೆ. ಈ ತಿಂಗಳು ಮುಂಗಡಪತ್ರ ಅಧಿವೇಶನದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಮಂಡಿಸಲಾದ ಸಿಎಜಿ ವರದಿಯು ರೈಲ್ವೆಯು ತನ್ನ ‘ಚಲನಶೀಲತೆ ಫಲಿತಾಂಶ’ವನ್ನು ಉತ್ತಮಗೊಳಿಸುವಲ್ಲಿ ವಿಫಲಗೊಂಡಿದೆ ಎಂದು ಬೆಟ್ಟು ಮಾಡಿದೆ. ‘ಮಿಷನ್ ರಫ್ತಾರ್’ನ ಭಾಗವಾಗಿ 2021-22ರ ಅಂತ್ಯದೊಳಗೆ ಪ್ಯಾಸೆಂಜರ್ ರೈಲುಗಳ ವೇಗವನ್ನು ಪ್ರತಿ ಗಂಟೆಗೆ 50 ಕಿ.ಮೀ.ನಿಂದ 75 ಕಿ.ಮೀ.ಗೆ ಮತ್ತು ಸರಕು ಸಾಗಣೆ ರೈಲುಗಳ ವೇಗವನ್ನು ಪ್ರತಿ ಗಂಟೆಗೆ 25 ಕಿ.ಮೀ.ಗಳಿಂದ 50 ಕಿ.ಮೀ.ಗೆ ಹೆಚ್ಚಿಸಲು ಯೋಜಿಸಲಾಗಿತ್ತು.

ಆದರೆ ಪ್ಯಾಸೆಂಜರ್ ರೈಲುಗಳು ಹೆಚ್ಚುಕಡಿಮೆ ಮೊದಲಿನ ವೇಗದಲ್ಲಿಯೇ ಚಲಿಸುತ್ತಿವೆ ಮತ್ತು ಸರಕು ಸಾಗಣೆ ರೈಲುಗಳ ವೇಗ ಹೆಚ್ಚುವ ಬದಲು ಪ್ರತಿ ಗಂಟೆಗೆ 23.6 ಕಿ.ಮೀ.ಗೆ ತಗ್ಗಿದೆ ಎಂದು ಸಿಎಜಿ ವರದಿಯು ಹೇಳಿದೆ. 2019-20ರಲ್ಲಿ ಮೇಲ್ ಮತ್ತು ಎಕ್ಸ್‌ಪ್ರೆಸ್ ರೈಲುಗಳು ಹಾಗೂ ಸರಕು ಸಾಗಣೆ ರೈಲುಗಳ ಸರಾಸರಿ ವೇಗ ಅನುಕ್ರಮವಾಗಿ ಗಂಟೆಗೆ ಕೇವಲ 50.6 ಕಿ.ಮೀ. ಮತ್ತು 23.6 ಕಿ.ಮೀ.ಆಗಿದ್ದವು ಎಂದು ವರದಿಯು ತಿಳಿಸಿದೆ. ಅಸ್ತಿತ್ವದಲ್ಲಿರುವ ಮೂಲಸೌಕರ್ಯಗಳ ಮೇಲೆ ಪ್ರಯಾಣಿಕ ರೈಲುಗಳ ಹೆಚ್ಚಿನ ಒತ್ತಡ ನಿಧಾನ ವೇಗಕ್ಕೆ ಕಾರಣವಾಗಿದೆ ಎಂದು ರೈಲ್ವೆ ಸಚಿವಾಲಯವು ಸಿಎಜಿಗೆ ನೀಡಿರುವ ಉತ್ತರದಲ್ಲಿ ಹೇಳಿಕೊಂಡಿದೆ.

ರೈಲುಗಳ ನಿಧಾನ ವೇಗವು ಕಳವಳದ ವಿಷಯವಾಗಿದೆ ಮತ್ತು ಇದನ್ನು ಬಗೆಹರಿಸದಿದ್ದರೆ ಅದು ರೈಲ್ವೆಯನ್ನು ಹಣಕಾಸು ಸಮಸ್ಯೆಗಳಿಗೆ ಸಿಲುಕಿಸಬಹುದು ಎನ್ನುತ್ತಾರೆ ತಜ್ಞರು. ತೆವಳುತ್ತಿರುವ ಎಕ್ಸ್‌ಪ್ರೆಸ್ ರೈಲುಗಳು

ಸಿಎಜಿ ವೌಲ್ಯಮಾಪನವು ಕೋವಿಡ್ ಸಾಂಕ್ರಾಮಿಕಕ್ಕೆ ಮೊದಲು 2019-20ರಲ್ಲಿ ಭಾರತೀಯ ರೈಲ್ವೆಯು ಪೂರ್ಣ ಸಾಮರ್ಥ್ಯದೊಂದಿಗೆ ಕಾರ್ಯಾಚರಿಸುತ್ತಿದ್ದಾಗ ಅದು ನಿರ್ವಹಿಸಿದ್ದ ರೈಲುಗಳನ್ನು ಆಧರಿಸಿದೆ.

ರೈಲು ತನ್ನ ಪಯಣವನ್ನು ಆರಂಭಿಸಿದ ಸ್ಥಳ ಮತ್ತು ತನ್ನ ಗಮ್ಯದ ನಡುವೆ ಕ್ರಮಿಸಿದ ಅಂತರ ಮತ್ತು ಅದಕ್ಕಾಗಿ ತೆಗೆದುಕೊಂಡ ಸಮಯವನ್ನು ಆಧರಿಸಿ ದೇಶದಲ್ಲಿ ಚಲಿಸುತ್ತಿರುವ 2,951 ಎಕ್ಸ್‌ಪ್ರೆಸ್ ರೈಲುಗಳ ಸರಾಸರಿ ವೇಗವನ್ನು ಸಿಎಜಿ ಲೆಕ್ಕಹಾಕಿದೆ.


Spread the love

About Laxminews 24x7

Check Also

ಹುಬ್ಬಳ್ಳಿಯಲ್ಲಿ ಅ.1 ರಿಂದ ಗದಗ ರಸ್ತೆ ಫ್ಲೈಓವರ್ ಕಾಮಗಾರಿ ಶುರು: ತಹಶೀಲ್ದಾರ್, ಪೊಲೀಸ್ ಠಾಣೆ ಸೇರಿ ಯಾವೆಲ್ಲ ಕಟ್ಟಡಗಳು ತೆರವು?

Spread the loveಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯ ಭಾಗದಲ್ಲಿ ‌ನಡೆಯುತ್ತಿರುವ ಫ್ಲೈ ಓವರ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಕೆಲ ತಿಂಗಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ