Breaking News

ವೃದ್ಧಾಶ್ರಮಗಳಲ್ಲಿ ಅನ್ನದಾನ ನಡೆಸಿ ಪುನೀತ್​ಗೆ ಅರ್ಥಪೂರ್ಣ ನಮನ ಸಲ್ಲಿಸಿದ ವಿಶಾಲ್

Spread the love

ಪುನೀತ್ ರಾಜ್​ಕುಮಾರ್ ಸ್ನೇಹಿತ, ತಮಿಳು ನಟ ವಿಶಾಲ್ ನೆಚ್ಚಿನ ಗೆಳೆಯನ ಜನ್ಮದಿನವನ್ನು ಆಚರಿಸಿದ್ದಾರೆ. ಈ ಸಂದರ್ಭದ ವಿಡಿಯೋಗಳನ್ನು ನಟ ಹಂಚಿಕೊಂಡಿದ್ದಾರೆ.ಮಾರ್ಚ್​​ 17ರಂದು ಪುನೀತ್ ರಾಜ್​ಕುಮಾರ್ ಜನ್ಮದಿನವನ್ನು (Puneeth Rajkumar Birth Anniversary) ಅವರಿಲ್ಲ ಎಂಬ ಕೊರಗಿನ ನಡುವೆಯೂ ಸಾರ್ಥಕವಾಗಿ ಆಚರಿಸಲಾಯಿತು.

ಕರ್ನಾಟಕದಲ್ಲಿ ಅವರ ಅಭಿಮಾನಿ ಸಂಘಟನೆಗಳು ಹಲವು ಸಾಮಾಜಿಕ ಕಾರ್ಯಗಳ ಮೂಲಕ ಮಾದರಿಯಾದರು. ರಕ್ತದಾನ ಸೇರಿದಂತೆ ಹಲವು ಶಿಬಿರಗಳನ್ನು ಆಯೋಜಿಸಲಾಗಿತ್ತು. ‘ಜೇಮ್ಸ್’ (James) ವೀಕ್ಷಿಸಿದ ನಂತರ ನೇತ್ರದಾನ ಹಾಗೂ ದೇಹದಾನಕ್ಕೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿಗಳು ತಮ್ಮ ಹೆಸರನ್ನು ನೋಂದಾಯಿಸಿದ್ದರು. ಈ ಮೂಲಕ ಎಲ್ಲೆಡೆ ಅಪ್ಪು ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗಿತ್ತು. ಪುನೀತ್ ಸ್ನೇಹಿತ ನಟ ವಿಶಾಲ್ (Actor Vishal) ಕೂಡ ನೆಚ್ಚಿನ ಗೆಳೆಯನ ಜನ್ಮದಿನವನ್ನು ಆಚರಿಸಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ನಟ ಹಂಚಿಕೊಂಡಿದ್ದಾರೆ. ಚೆನ್ನೈನ ಸುತ್ತಮುತ್ತಲಿನ ವೃದ್ಧಾಶ್ರಮಗಳಲ್ಲಿರುವ ಸುಮಾರು 200ಕ್ಕೂ ಹೆಚ್ಚು ವಯೋವೃದ್ಧರಿಗೆ ವಿಶಾಲ್ ಅನ್ನದಾನ ನಡೆಸಿದ್ದಾರೆ. ಈ ಮೂಲಕ ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಪವರ್​ಸ್ಟಾರ್​ಗೆ ಗೌರವ ಸಲ್ಲಿಸಿದ್ದಾರೆ.

ಈ ಕುರಿತು ಟ್ವಿಟರ್​ನಲ್ಲಿ ವಿಶಾಲ್ ಬರೆದುಕೊಂಡಿದ್ದು, ”ಪುನೀತ್​ಗೆ ಗೌರವ ಹಾಗೂ ನಮನ ಸಲ್ಲಿಸಲು ಇದಕ್ಕಿಂತ ಉತ್ತಮ ವಿಧಾನ ಬೇರೇನಿದೆ?. ಹಿರಿಯರು ಅಪ್ಪುಗೆ ಆಶೀರ್ವಾದ ಮಾಡುವಾಗ ಖುಷಿಯಾಗುತ್ತದೆ” ಎಂದಿದ್ದಾರೆ. ಈ ಸಂದರ್ಭದ ವಿಡಿಯೋವನ್ನು ವಿಶಾಲ್ ಹಂಚಿಕೊಂಡಿದ್ದಾರೆ. ಆಶ್ರಮದಲ್ಲಿ ಪುನೀತ್​ಗೆ ವೃದ್ಧರು ಹಾರೈಸುವ ದೃಶ್ಯಗಳೂ ಇವೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ