Breaking News

ಉತ್ತರಕನ್ನಡದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ : ಅನಂತಕುಮಾರ್ ಹೆಗ್ಡೆ ಭವಿಷ್ಯ

Spread the love

ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಇನ್ನು 50 ವರ್ಷ ಕಳೆದ್ರೆ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ. ದೇಶದಲ್ಲಿ ಅಪಾಯದ ಪರಿಸ್ಥಿತಿ ಇದೆ.‌ ಸಂಸ್ಕೃತಿಯ ಮೂಲ ಕಳಚುತ್ತಿರುವಾಗ ನಮ್ಮ ಹೆಸರಿಟ್ಟುಕೊಂಡು ಹೋದ್ರೆ ಏನು ಪ್ರಯೋಜನ?. ಜಿಲ್ಲೆಯ ಅಭಿವೃದ್ಧಿ ನಮ್ಮವರಿಂದ ನಮ್ಮವರಿಗೆ ಆಗಬೇಕು ಎಂದು ಸಂಸದ ಅನಂತಕುಮಾರ್ ಹೆಗ್ಡೆ ಹೇಳಿದ್ದಾರೆ.

ಹೊನ್ನಾವರದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, 3-4 ವರ್ಷಗಳಲ್ಲಿ ಕರಾವಳಿಯಲ್ಲಿ 4- 5 ಲಕ್ಷ ಫ್ಲೋಟಿಂಗ್ ಪಾಪ್ಯುಲೇಶನ್ ಹೆಚ್ಚಾಗುತ್ತದೆ. ನಮ್ಮವರು ಇದನ್ನು ಬಳಸಿಕೊಳ್ಳದಿದ್ದರೆ ಚುನಾವಣೆಯಲ್ಲಿ ಈ ಜಾತಿ ಲೆಕ್ಕಾಚಾರಗಳು ತಲೆಕೆಳಗಾಗುತ್ತವೆ.

ಬೇರೆ ರಾಜ್ಯಗಳಿಂದ ಬಂದವರು ಇಲ್ಲಿನ ಶಾಸಕರು, ಸಂಸದರಾಗುತ್ತಾರೆ. ಸೀಬರ್ಡ್​ಗೆ ಒಂದು ಮುಕ್ಕಾಲು ಲಕ್ಷ ಜನ ಹೊರಗಡೆಯಿಂದ ಬರುತ್ತಾರೆ. ಅವರು ನಾಳೆಗೆ ಮತ ಹಾಕಿದರೆ ನಮ್ಮಲ್ಲಿ ಇಬ್ಬರು ಶಾಸಕರು ಗೆಲ್ಲುತ್ತಾರೆ ಎಂದಿದ್ದಾರೆ.ಇಷ್ಟು ವರ್ಷ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿರಲಿಲ್ಲ. ಚುನಾವಣೆ, ಪಾರ್ಟಿಗೆ ಡ್ಯಾಮೇಜ್ ಆದರೆ ಎಂದು ಸುಮ್ಮನಿರುತ್ತಿದ್ದೆವು. ಆದರೆ, ಈ ಬಾರಿ ಯಾರೇ ಏನೇ ಮಾಡಿದರೂ ಮಾಡೋ ಕೆಲಸ ಮಾಡಿಯೇ ಹೋಗುವುದು ಎಂದು ತೀರ್ಮಾನ ಮಾಡಿಯಾಗಿದೆ. ಇನ್ನುಮುಂದೆ ಚರ್ಚೆಗೆ ಅವಕಾಶವೇ ಇಲ್ಲ.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ