ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್ ಪಾಟೀಲ್ ಅವರ ನಿವೃತ್ತಿಯಿಂದ ತೆರವಾದ ಪರಿಷತ್ ವಿಪಕ್ಷ ನಾಯಕ ಸ್ಥಾನಕ್ಕೆ, ಬಿ.ಕೆ ಹರಿಪ್ರಸಾದ್ ನೇಮಕವಾಗಿದೆ.
ಇದರ ಜತೆಗೆ, ಎಂ ನಾರಾಯಣಸ್ವಾಮಿ ಅವರ ನಿವೃತ್ತಿಯಿಂದ ತೆರವಾದ ವಿಧಾನ ಪರಿಷತ್‌ನ ಮುಖ್ಯ ಸಚೇತಕ ಸ್ಥಾನಕ್ಕೆ ಪ್ರಕಾಶ್ ಸಿಂಗ್ ರಾಠೋಡ್ ಅವರನ್ನು ಆಯ್ಕೆ ಮಾಡಲಾಗಿದೆ. ಕೆ. ಗೋವಿಂದ ರಾಜ್ ಅವರನ್ನು ವಿಧಾನ ಪರಿಷತ್‌ನ ಉಪ ನಾಯಕನಾಗಿ ಆಯ್ಕೆ ಮಾಡಿ ಸೋನಿಯಾ ಗಾಂಧಿ ಆದೇಶ ಹೊರಡಿಸಿದ್ದಾರೆ.
ಅಚ್ಚರಿ ಎಂದ್ರೆ, ವಿಧಾನಸಭೆ ಮತ್ತು ಪರಿಷತ್ಗೆ ಇಬ್ಬರು ಹಿಂದುಳಿದ ವರ್ಗದ ನಾಯಕರಿಗೆ ವಿಪಕ್ಷ ಸ್ಥಾನ ಕಲ್ಪಿಸಲಾಗಿದೆ. ಇನ್ನು, ಇದೇ ಸ್ಥಾನದ ಆಕಾಂಕ್ಷಿಯಾಗಿದ್ದ ಸಿ.ಎಂ.ಇಬ್ರಾಹಿಂ ನಿರೀಕ್ಷೆ ನೀರುಪಾಲಾಗಿದೆ.
Laxmi News 24×7