Breaking News

ತಾಯಿಯನ್ನು ಚಿಕಿತ್ಸೆಗೆ ಕರೆತಂದ ಮಗಳು; ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿ

Spread the love

ಎಚ್.ಡಿ.ಕೋಟೆ: ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಮನೆಯಿಂದ ತನ್ನ ಶತಾಯುಷಿ ತಾಯಿಯನ್ನು ಕರೆ ತಂದ ಮಗಳೊಬ್ಬಳು; ಇಲ್ಲಿಗೆ ಸಮೀಪದ ಅಂತರಸಂತೆ ಬಳಿಯ ನಿರ್ಜನ ಪ್ರದೇಶದ ರಸ್ತೆ ಬದಿಯೇ ಬಿಟ್ಟು ಹೋದ ಅಮಾನವೀಯ ಘಟನೆ ಬುಧವಾರ ನಡೆದಿದೆ.

 

ವೃದ್ಧೆಗೆ ಮನೆಯ ವಿಳಾಸ ನೆನಪಿಲ್ಲ. ನನ್ನೂರು ಮೈಸೂರು. ಅಳಿಯ-ಮಗಳು ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದರು. ನನ್ನನ್ನು ಕರೆದೊಯ್ಯಲು ಬರುತ್ತಾರೆ ಎಂದೇ ಹೇಳುತ್ತಿದ್ದಾರೆ.

ಬುಧವಾರ ಮಧ್ಯಾಹ್ನದಿಂದಲೂ ಅಳಿಯ-ಮಗನ ಬರುವಿಕೆಯಲ್ಲೇ ಕಾದಿದ್ದ ವೃದ್ಧೆಗೆ ಸ್ಥಳೀಯರು ನೆರವಾಗಿದ್ದಾರೆ. ಅಂತರಸಂತೆಯ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದಾರೆ.

ಊಟ ಮಾಡಲಾಗದ ಸ್ಥಿತಿ ತಲುಪಿದ್ದ ವೃದ್ಧೆ, ಆಟೊ ಮೂಲಕ ಮನೆಗೆ ಕಳುಹಿಸಿಕೊಡಿ ಎಂದು ನೆರೆದಿದ್ದವರನ್ನು ಕೋರಿದ ದೃಶ್ಯ ಮನಕಲುಕಿತು. ಪೊಲೀಸರು ಎಚ್‌.ಡಿ.ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು.

‘ವಿಷಯ ತಿಳಿದೊಡನೆ ಶತಾಯುಷಿಯನ್ನು ಕೆ.ಆರ್.ನಗರದ ಮಾತೃಶ್ರೀ ವೃದ್ದಾಶ್ರಮಕ್ಕೆ ದಾಖಲಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆಶಾ ತಿಳಿಸಿದರು.


Spread the love

About Laxminews 24x7

Check Also

ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ

Spread the love ಸರ್ಕಾರಿ ಶಾಲೆಗಳನ್ನು ಉಳಿಸಿ-ಬೆಳೆಸಿ : ಜಿಲ್ಲಾಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೊಳವಿ ಗ್ರಾಮದ ನಮ್ಮೂರ ಸರಕಾರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ