ಚಿಕ್ಕೋಡಿ : ಪಾತ್ರೆ ತೊಳೆಯಲು ನೀರು ತುಂಬಿಟ್ಟ ಬಕೆಟ್ನಲ್ಲಿ ಒಂದೂವರೆ ವರ್ಷದ ಮಗು ಬಿದ್ದು ಸಾವು ಸಂಭವಿಸಿದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಾಂವಶಿ ಗ್ರಾಮದಲ್ಲಿ ಸಂಭವಿಸಿದೆ.
ತಾಂವಶಿ ಗ್ರಾಮದ ಸನದಿ ತೋಟದಲ್ಲಿ ವಾಸವಿರುವ ನಿಂಗಪ್ಪ ಮಸರಗುಪ್ಪಿ ಇವರ ಒಂದೂವರೆ ವರ್ಷದ ವಿಜಯ ಮಸರಗುಪ್ಪಿ ಎಂಬ ಮಗು ಅಂಗಳದಲ್ಲಿ ಆಟ ಆಡುತ್ತಿರುವಾಗ ಪಾತ್ರೆ ತೊಳೆಯಲು ನೀರಿಟ್ಟ ಬಕೆಟ್ನಲ್ಲಿ ಆಟ ಆಡುತ್ತಾ ಬಕೆಟ್ಗೆ ಬಿದ್ದು ತನ್ನ ಪ್ರಾಣವನ್ನು ಕಳೆದುಕೊಂಡಿದೆ.
ಮಗುವಿನ ತಾಯಿ ಮಗುವನ್ನು ಆಟಾಡಲು ಬಿಟ್ಟು ಅಡುಗೆ ಮನೆ ಕೆಲಸದಲ್ಲಿ ತೊಡಗಿದ್ದು. ಮಗು ಕಾಣಿಸದಿದ್ದಾಗ ಹುಡುಕಾಟ ನಡೆಸಿದ್ದಾಳೆ. ಅಷ್ಟರಲ್ಲಿ ಮಗು ನೀರಿನ ಬಕೆಟ್ನಲ್ಲಿ ಕುತ್ತಿಗೆವರೆಗೆ ಮುಳುಗಿ ಕಾಲುಗಳು ಮೇಲಕ್ಕೆ ಆಗಿದ್ದನ್ನ ಗಮನಿಸಿ ಮನೆಯವರು ತಕ್ಷಣ ಹೊರಗೆ ತೆಗೆದು ನೋಡಿದಾಗ ಅಷ್ಟೊತ್ತಿಗೆ ಮಗು ತನ್ನ ಪ್ರಾಣ ಕಳೆದುಕೊಂಡಿದ್ದು ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕು
Laxmi News 24×7