Breaking News
Home / Uncategorized / ಸಂಪೂರ್ಣವಾಗಿ ಬಿಎಸ್‌ವೈ ಮುಗಿಸಲು ಬಿಜೆಪಿಯಿಂದ ‘ಟಾರ್ಗೆಟ್ BSY’ ಯೋಜನೆ: ಕಾಂಗ್ರೆಸ್

ಸಂಪೂರ್ಣವಾಗಿ ಬಿಎಸ್‌ವೈ ಮುಗಿಸಲು ಬಿಜೆಪಿಯಿಂದ ‘ಟಾರ್ಗೆಟ್ BSY’ ಯೋಜನೆ: ಕಾಂಗ್ರೆಸ್

Spread the love

ಬೆಂಗಳೂರು: ಮುಂದಿನ ಚುನಾವಣೆಯೊಳಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa)ರನ್ನು ಸಂಪೂರ್ಣವಾಗಿ ಮುಗಿಸುವ ‘ಟಾರ್ಗೆಟ್ BSY’ ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ವ್ಯಂಗ್ಯವಾಡಿದೆ. #B JPvsBSY ಹ್ಯಾಶ್ ಟ್ಯಾಗ್ ಬಳಸಿ ಭಾನುವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಪಕ್ಷ ಕಟ್ಟಿದವರನ್ನು ಮುಗಿಸುವುದು ಬಿಜೆಪಿಯ ಹೊಸ ಟ್ರೆಂಡ್!’ ಎಂದು ಟೀಕಿಸಿದೆ.

‘ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬಿಜೆಪಿ(BJP) ಸದಾ ಮಲತಾಯಿ ಮಗನಂತೆ ನಡೆಸಿಕೊಂಡಿದೆ. ಅಧಿಕಾರದಲ್ಲಿದ್ದಾಗಲೂ ಬಿಜೆಪಿ ಬಿಎಸ್​ವೈರನ್ನು ಕಾಡಿತ್ತು, ಅಧಿಕಾರ ಕಳೆದುಕೊಂಡ ಮೇಲೂ ಕಾಡುತ್ತಿದೆ. ಮುಂದಿನ ಚುನಾವಣೆಯೊಳಗೆ BSYಅವರನ್ನು ಸಂಪೂರ್ಣವಾಗಿ ಮುಗಿಸುವ ‘ಟಾರ್ಗೆಟ್ BSY’ ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿದೆ. ಪಕ್ಷ ಕಟ್ಟಿದವರನ್ನು ಮುಗಿಸುವುದು ಬಿಜೆಪಿಯ ಹೊಸ ಟ್ರೆಂಡ್! ಆಗಿದೆ’ ಎಂದು ಕಾಂಗ್ರೆಸ್ ಕುಟುಕಿದೆ.

ಇದನ್ನೂ ಓದಿ: Karnataka Rains: ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ, ಕರಾವಳಿ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

‘ನೀರಾವರಿ ಇಲಾಖೆಯ 20 ಸಾವಿರ ಕೋಟಿ ರೂ. ಹಗರಣಕ್ಕೆ ಸಂಬಂಧಿಸಿದಂತೆ ಬಿ.ವೈ.ವಿಜಯೇಂದ್ರ(BY Vijayendra) ಹಾಗೂ ಬಿ.ಎಸ್.ಯಡಿಯೂರಪ್ಪ ಆಪ್ತರನ್ನೇ ಗುರಿಯಾಗಿಸಿ ಐಟಿ ದಾಳಿಯಾಗಿದೆ. ಸರ್ಕಾರದ ಭ್ರಷ್ಟಾಚಾರವನ್ನು, ವಿಜಯೇಂದ್ರ ಹಸ್ತಕ್ಷೇಪವನ್ನು ಬಿಜೆಪಿ ಒಪ್ಪಿಕೊಳ್ಳುತ್ತದೆಯೇ ಅಥವಾ BSY ಅವರನ್ನು ಮುಗಿಸುವ ತಂತ್ರವೆನ್ನುತ್ತದೆಯೇ. ಇದಕ್ಕೆ ಬಿಜೆಪಿಯೇ ಉತ್ತರಿಸಬೇಕು’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕೆಲ ದಿನಗಳ ಹಿಂದಷ್ಟೇ ಬಿಎಸ್‌ವೈ ಮಾಜಿ ಆಪ್ತ ಸಹಾಯಕ ಉಮೇಶ್‌ ಆಯನೂರು(Umesh Ayanur) ಮನೆ ಮೇಲೆ ಐಟಿ ದಾಳಿಯಾಗಿತ್ತು. ಇದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ದಾಳೆ ವೇಳೆ ಐಟಿ ಅಧಿಕಾರಿಗಳು ಹಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಇದು ಉಮೇಶ್‌ ಆಪ್ತ ಗುತ್ತಿಗೆದಾರರಲ್ಲಿ ನಡುಕ ಹುಟ್ಟುವಂತೆ ಮಾಡಿತ್ತು. ಬಿಎಸ್‌ವೈ ಕುಟುಂಬವನ್ನು ಟಾರ್ಗೆಟ್‌ ಮಾಡಿ ಐಟಿ ದಾಳಿ ನಡೆಸಲಾಗಿದೆ ಎಂಬ ಮಾತುಗಳು ಕೇಳಿಬಂದಿದ್ದವು. ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಈ ಐಟಿ ದಾಳಿ ರಾಜಕೀಯ ಪ್ರೇರಿತ ಅಂತಾ ಹೇಳಿದ್ದರು.


Spread the love

About Laxminews 24x7

Check Also

ನಾಳೆಯಿಂದ ಪಿಯುಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ

Spread the loveನಾಳೆಯಿಂದ ಪಿಯುಸಿ ಪೂರಕ ಪರೀಕ್ಷೆ: ವಿದ್ಯಾರ್ಥಿಗಳಿಗೆ ಉಚಿತ ಬಸ್ ವ್ಯವಸ್ಥೆ ಹುಬ್ಬಳ್ಳಿ, ಏಪ್ರಿಲ್ 28: ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ