Breaking News

ಹೈವೇಯಲ್ಲಿ ದರೋಡೆಗಿಳಿದಿದ್ದ ಡಕಾಯಿತರಿಗೆ ಗೂಸಾ ನೀಡಿದ ಗ್ರಾಮಸ್ಥರು

Spread the love

ಬೆಂಗಳೂರು: ಕಾಡಿನಲ್ಲಿ ಟೆಂಟ್ ಹಾಕಿ ಹೆದ್ದಾರಿಯಲ್ಲಿ ಪ್ರಯಾಣಿಸುವ ಸವಾರರ ದರೋಡೆಗಿಳಿದಿದ್ದ ಡಕಾಯಿತರಿಗೆ ಗ್ರಾಮಸ್ಥರು ಗೂಸಾ ನೀಡಿದ ಘಟನೆ ನಗರದ ಹೊರವಲಯದ ಬೆಂಗಳೂರು-ಶಿವಮೊಗ್ಗ ಹೈವೆಯಲ್ಲಿ ನಡೆದಿದೆ.

ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗಗಳಲ್ಲಿ ಹೋಗುವ ಪ್ರಯಾಣಿಕರನ್ನ ಟಾರ್ಗೆಟ್​ ಮಾಡ್ತಿದ್ದ ಗ್ಯಾಂಗ್ ವಾಹನಗಳನ್ನು ಅಡ್ಡಗಟ್ಟಿ ಕಾರಿನ ಗ್ಲಾಸ್ ಗಳನ್ನ ಒಡೆದು ದರೋಡೆ ಮಾಡುತ್ತಿದ್ದರೆಂಬ ಆರೋಪ ಕೇಳಿ ಬಂದಿದೆ. ಆರೋಪಿಗಳು ಮೊಬೈಲ್​ ಸೇರಿದಂತೆ ಹಲವು ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು ಎನ್ನಲಾಗಿದೆ.

ಕಳ್ಳರು ಗುಬ್ಬಿ ಫಾರೆಸ್ಟ್ ನಲ್ಲಿ ಟೆಂಟ್ ಹಾಕಿ ದರೋಡೆಗೆ ಸಂಚು ರೂಪಿಸಿದ್ದರು ಎನ್ನಲಾಗಿದ್ದು, ಅರಸಿಕೆರೆ, ಕಡೂರು, ಬೇಲೂರು ಮಾರ್ಗದಲ್ಲಿ ದರೋಡೆಗಿಳಿದಿದ್ದರಂತರಂತೆ. ಇದನ್ನರಿತ ಗ್ರಾಮಸ್ಥರು ಪೊಲೀಸರಿಗೆ ವಿಚಾರ ಮುಟ್ಟಿಸಿದ್ರು. ದರೋಡೆಕೋರರನ್ನ ಸೆರೆಹಿಡಿಯಲು ಪೊಲೀಸರು ಪ್ಲಾನ್​ ಮಾಡಿದ್ದು, ಗ್ರಾಮಸ್ಥರ ಸಹಾಯದಿಂದ ಆರೋಪಿಗಳನ್ನ ಬಂಧಿಸುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ. ಇನ್ನು ಈ ಮಾರ್ಗದಲ್ಲಿ 80ಕ್ಕೂ ಹೆಚ್ಚು ಡಕಾಯಿತರಿರುವರು ಎಂದು ಗ್ರಾಮಸ್ಥರು ಹೇಳಿದ್ದು, ಇನ್ನುಳಿದ ಖದೀಮರಿಗೆ ಪೊಲೀಸರು ಬಲೆ ಬೀಸಿದ್ದಾರೆ.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ