ಬೆಂಗಳೂರು: ರಾಜ್ಯ ಹೈಕೋರ್ಟ್‌ನ ಬೆಂಗಳೂರು ಪ್ರಧಾನ ಪೀಠ, ಕಲಬುರಗಿ ಹಾಗೂ ಧಾರವಾಡ ಪೀಠಗಳಿಗೆ ಅಕ್ಟೋಬರ್ 11 ರಿಂದ 16ನೇ ತಾರೀಖಿನವರೆಗೂ ದಸರಾ ರಜೆ ನೀಡಲಾಗಿದೆ.
ಹೈಕೋರ್ಟ್‌ನ ಎಲ್ಲಾ ನ್ಯಾಯಾಪೀಠಗಳು ಒಂದು ವಾರ ರಜೆಯಲ್ಲಿರಲಿವೆ. ರಜೆ ದಿನಗಳಲ್ಲಿ ಸಿವಿಲ್ ಹಾಗೂ ಕ್ರಿಮಿನಲ್ ಕೇಸ್ ಅರ್ಜಿ ಸ್ವೀಕರಿಸುವುದಿಲ್ಲ. ಒಂದು ವೇಳೆ ತುರ್ತು ಇದ್ದಲ್ಲಿ ಮಧ್ಯಂತರ ಆದೇಶ, ತಡಯಾಜ್ಞೆಯ ಅರ್ಜಿಗಳು ಹಾಗೂ ತಾತ್ಕಾಲಿಕ ನಿರ್ಬಂಧಕಾಜ್ಞೆ ಅರ್ಜಿಗಳನ್ನ ಸಲ್ಲಿಸಬಹುದಾಗಿದೆ.
ತುರ್ತು ಅರ್ಜಿಗಳನ್ನ ಬೆಳಗ್ಗೆ 10.30 ರಿಂದ 12 ರ ನಡುವೆ ಅರ್ಜಿಗಳನ್ನ ಸಲ್ಲಿಸಿದರೆ ವಿಚಾರಣೆ ನಡೆಯಲಿದೆ. ಈ ಬಗ್ಗೆ ಹಂಗಾಮಿ ಮುಖ್ಯ ನ್ಯಾ. ಸತೀಶ್ ಚಂದ್ರ ಶರ್ಮಾರ ಆದೇಶದ ಮೇರೆಗೆ ರಿಜಿಸ್ಟ್ರಾರ್ ಕೆಎಸ್ ಭರತ್ ಕುಮಾರ್ ರಜೆ ಬಗ್ಗೆ ನೋಟಿಫಿಕೇಷನ್ ಹೊರಡಿಸಿದ್ದಾರೆ.
Laxmi News 24×7