ಬೆಂಗಳೂರು ;ಕೋವಿಡ್ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಿರ್ವಹಣೆ ಬಲು ಕಷ್ಟವಾಗಿದೆ. ಇದರ ಜೊತೆ ಅವಮಾನಗಳು ಇನ್ನಷ್ಟು ಬರೆ ಎಳೆದಿದ್ದು, ಬದುಕಲು ಆಗದು ಎಂದು ಕುಟುಂಬವೊಂದು ಸೂಸೈಡ್ ನೋಟ್ ಬರೆದು ನಾಪತ್ತೆಯಾಗಿರುವ ಪ್ರಕರಣ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬದ ಹುಡುಕಾಟಕ್ಕೆ ಮುಂದಾಗಿದ್ದಾರೆ.
ಗಾಂಧಿ ಎಂಬ 43 ವರ್ಷದ ವ್ಯಕ್ತಿ ಟಿ ದಾಸರಹಳ್ಳಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಹೆಂಡತಿ ಶಾಲಿನಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ, ಕೋವಿಡ್ನಿಂದ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು, ಸಾಲದ ಹೊರೆ ಹೆಚ್ಚಿತ್ತು. ನಿತ್ಯ ಸಾಲಗಾರರು ಮನೆ ಮುಂದೆ ಬಂದು ಒತ್ತಡ ಹೇರಲು ಶುರು ಮಾಡಿದರು. ಏಕಾಏಕಿ ಏಳು ಲಕ್ಷ ಹಣ ತರುವುದು ದುಸ್ತರವಾಗಿತ್ತು. ಈ ಎಲ್ಲಾ ಕಾರಣದಿಂದ ಬೆಸತ್ತ ಕುಟುಂಬ ಮನೆಯಲ್ಲಿ ಸೂಸೈಡ್ ನೋಟ್ ಬರೆದುಟ್ಟು ನಾಪತ್ತೆಯಾಗಿದ್ದಾರೆ.
Laxmi News 24×7