ಬೆಂಗಳೂರು : ನಮಗೆ ಬೆಂಕಿ ಬಂಡಾಯ ಏನೂ ಇಲ್ಲ ನಮ್ಮದು ಶಿಸ್ತಿನ ಪಕ್ಷ, ನಮ್ಮ ಹೈಕಮಾಂಡ್ ಇದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾತೆಯ ವಿಚಾರಕ್ಕೆ ಸಂಬಂಧಿಸಿದಂತೆ ರಾಮುಲು ಅಸಮಧಾನಗೊಂಡಿದ್ದರೆ ನಾನು ಕೆಲವು ಮಾಧ್ಯಮದಲ್ಲಿ ನೋಡಿದ್ದೇನೆ. ನನಗೆ ಯಾವ ಅಸಮಾಧಾನ ಇಲ್ಲ, ನಮ್ಮದು ಶಿಸ್ತಿನ ಪಕ್ಷ, ಹೈಕಮಾಂಡ್ ಎಲ್ಲವನ್ನು ನಿರ್ಧರಿಸುತ್ತದೆ ಎಂದಿ ಹೇಳಿದ್ದಾರೆ.
ನನಗೆ ಕೊಟ್ಟ ಸಾರಿಗೆ ಇಲಾಖೆ ನಿರ್ವಹಣೆ ಮಾಡುತ್ತೇನೆ. ಜನಪರವಾದ ಕೆಲಸ ಮಾಡಬೇಕು. ಕೊಟ್ಟ ಕೆಲಸ ಸಮರ್ಥವಾಗಿ ನಿರ್ವಹಣೆ ಮಾಡಿದ್ದೇನೆ. ಖಾತೆಯ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಅಸಮಧಾನ ಇಲ್ಲ ಎಂದಿದ್ದಾರೆ.
ಇನ್ನು, ಡಿಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಬಹಳಷ್ಟು ಮಂದಿ ಬೆಂಬಲಿಗರು ಡಿಸಿಎಂ ಆಗಬೇಕು ಎನ್ನುವುದರ ಬಗ್ಗೆ ನೀರಿಕ್ಷೆ ಇಟ್ಟುಕೊಂಡಿದ್ದರು. ಆದರೇ, ನಮ್ಮ ಹೈಕಮಾಂಡ್ ಸದ್ಯಕ್ಕೆ ಡಿಸಿಎಂ ಮಾಡಿಲ್ಲ.ಕೊಟ್ಟ ಖಾತೆಯನ್ನು ನಿರ್ವಹಣೆ ಮಾಡುತ್ತೇನೆ ಎಂದು ಹೇಳಿದ್ದಾರೆ.
Laxmi News 24×7