Breaking News

ಪ್ರವಾಹ ಭೀತಿಗೆ  ಗದಗದ ಮಲಪ್ರಭಾ ನದಿ ತೀರ ಪ್ರದೇಶದಲ್ಲಿರುವ  ಜನರು ಊರು ತೊರೆಯುತ್ತಿದ್ದಾರೆ.

Spread the love

ಗದಗ: ಪ್ರವಾಹ ಭೀತಿಗೆ  ಗದಗದ ಮಲಪ್ರಭಾ ನದಿ ತೀರ ಪ್ರದೇಶದಲ್ಲಿರುವ  ಜನರು ಊರು ತೊರೆಯುತ್ತಿದ್ದಾರೆ.

ನವಿಲು ತೀರ್ಥ(ರೇಣುಕಾ) ಜಲಾಶಯದಿಂದ ಮಲಪ್ರಭಾ ನದಿಗೆ ನೀರು ರಿಲೀಸ್ ಹಿನ್ನಲೆ ಜಿಲ್ಲೆಯ ನದಿ ಪಾತ್ರ ಗ್ರಾಮಗಳಿಗೆ ಹೈ-ಅಲರ್ಟ್ ಘೋಷಣೆ ಮಾಡಲಾಗಿದೆ. ಜನರು, ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಜಿಲ್ಲಾಡಳಿತದಿಂದ ಡಂಗೂರ ಸಾರುವ ಮೂಲಕ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯ ನರಗುಂದ ಹಾಗೂ ರೋಣ ತಾಲೂಕಿನ ನದಿ ಪಾತ್ರದ ಗ್ರಾಮಗಳಲ್ಲಿ ಮುನ್ನೆಚ್ಚರಿಕೆಯ ಡಂಗೂರ ಸಾರಲಾಯಿತು.

ಗಂಟೆ ಗಂಟೆಗೂ ಮಲಪ್ರಭಾ ಹಾಗೂ ಬೆಣ್ಣೆಹಳ್ಳ ನೀರಿನ ಹರಿವು ಹೆಚ್ಚಾಗುತ್ತಿದೆ. ಲಖಮಾಪೂರ, ವಾಸನ, ಬೆಳ್ಳೆರಿ, ಕೊಣ್ಣೂರ, ಬೂದಿಹಾಳ, ಕಲ್ಲಾಪೂರ, ಅಮರಗೋಳ, ಮೆಣಸಗಿ, ಹೊಳೆಮಣ್ಣೂರ ಹೀಗೆ ಅನೇಕ ಗ್ರಾಮಗಳಲ್ಲಿ ಹೈ-ಅಲರ್ಟ್ ಘೋಷಿಸಲಾಗಿದೆ. ನರಗುಂದ ತಹಶೀಲ್ದಾರ್ ಎ.ಡಿ ಅಮರವಡಗಿ, ಪೊಲೀಸ್ ಸಿಬ್ಬಂದಿ, ತಾ.ಪಂ ಅಧಿಕಾರಿಗಳು, ಗ್ರಾ.ಪಂ ಸಿಬ್ಬಂದಿ, ಮಲಪ್ರಭಾ ನದಿ ಪಾತ್ರದ ಗ್ರಾಮಗಳಿಗೆ ಭೇಟಿ ನೀಡಿದರು

ಪ್ರವಾಹದ ಬಗ್ಗೆ ಎಚ್ಚರಿಕೆ ನೀಡಿ, ಜನರು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಮನವೊಲಿಸಲು ಯತ್ನಿಸಿದರು. ತಹಶೀಲ್ದಾರ್ ಹಾಗೂ ಪೊಲೀಸರು ಲಖಮಾಪುರ, ವಾಸನ, ಬೂದಿಹಾಳ ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ. ಜನರು ಎತ್ತಿನಬಂಡಿ, ಟ್ಯ್ರಾಕ್ಟರ್, ಬೊಲೆರೋ ವಾಹನಗಳ ಮೂಲಕ ಜಾನುವಾರುಗಳೊಂದಿಗೆ ಊರು ತೊರೆಯಲು ಗ್ರಾಮಸ್ಥರು ಸಜ್ಜಾಗಿದ್ದಾರೆ. ಪ್ರವಾಹ ಬಂದಾಗಲೆಲ್ಲಾ ಬೆಣ್ಣೆಹಳ್ಳ ಹಾಗೂ ಮಲಪ್ರಭಾ ನದಿ ಪಾತ್ರದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಅನೇಕ ಬೆಳೆ ಹಾನಿಯಾಗುತ್ತದೆ.


Spread the love

About Laxminews 24x7

Check Also

ಜನರಲ್ಲಿ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯದಿದ್ದರೆ, ಕೇವಲ ಮೌಢ್ಯ ನಿಷೇಧ ಕಾನೂನಿನ ಮೂಲಕ ನಿರೀಕ್ಷಿತ ಬದಲಾವಣೆ ಸಾಧ್ಯವಿಲ್ಲ ಎಂದ ಸಿಎಂ

Spread the loveಬೆಂಗಳೂರು: ”ದ್ವಿಭಾಷಾ ಸೂತ್ರ ನನ್ನ ಅಭಿಪ್ರಾಯವಾಗಿದೆ. ಅದನ್ನು ಸರ್ಕಾರದ ಅಭಿಪ್ರಾಯ ಮಾಡುವ ದಿಕ್ಕಿನಲ್ಲಿ ಪ್ರಯತ್ನಿಸುತ್ತೇನೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ