ಯಾದಗಿರಿ: ಬಿಎಸ್ ಯಡಿಯೂರಪ್ಪ ಅವರೇ ನಿಮಗೆ ವಯಸ್ಸಾಗಿದೆ. ಯಾರಿಗಾದರು ಸಿಎಂ ಪಟ್ಟ ಕಟ್ಟಿ ನೀವು ಹಿಂದಕ್ಕೆ ಸರಿಯಿರಿ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ. ಸೂಕ್ತವಾಗಿ ಅಧಿಕಾರ ಬಿಟ್ಟರೆ ಚೆನ್ನಾಗಿರುತ್ತದೆ. ನೀವು ರಾಜೀನಾಮೆ ನೀಡದಿದ್ದರೆ ರಾಜ್ಯದ ಜನರು ದಂಗೆ ಏಳುತ್ತಾರೆ ಅಂತ ಜೆಡಿಎಸ್ ಶಾಸಕ ನಾಗನಗೌಡ ಹೇಳಿದ್ದಾರೆ.

ಈ ಬಗ್ಗೆ ಯಾದಗಿರಿಯಲ್ಲಿನ ತಮ್ಮ ಕಚೇರಿಯಲ್ಲಿ ಮಾತನಾಡಿದ ಅವರು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಯಾರಿಗಾದರೂ ಸಲಹೆಗಾರರಾಗಿ, ಬಿಎಸ್ ವೈ ಸಿಎಂ ಸ್ಥಾನ ಉಳಿಸಿಕೊಳ್ಳಲು ಬಿಜೆಪಿ ಹೈಕಮಾಂಡ್ ಗೆ 5 ಕೋಟಿ ರೂ. ಹಣ ಕೊಟ್ಟಿದ್ದಾರೆ. ಬಿಎಸ್‍ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ರೆ ಮತ್ತೆ ಯಾರಾದರು ಬರುತ್ತಾರೆ. ಒಳ್ಳೆ ರೀತಿ ಆಡಳಿತ ಕೊಡುವರು ಬಿಜೆಪಿಯಲ್ಲಿದ್ದಾರೆ ಎಂದರು.ಸಚಿವ ಮುರುಗೇಶ್ ನಿರಾಣಿ ವಾರಣಾಸಿ ಭೇಟಿ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸ್ಥಾನಕ್ಕಾಗಿ ಯಾರ್ಯಾರು ದೇವರಿಗೆ ಹೋಗುತ್ತಾರೋ ಗೊತ್ತಿಲ್ಲ. ರಾಜ್ಯದಲ್ಲಿ ಆಡಳಿತ ಮೊರಾಬಟ್ಟೆಯಾಗಿದೆ ರಾಜ್ಯದಲ್ಲಿ ಆಡಳಿತವಿಲ್ಲ. ಬಿಎಸ್‍ವೈ ರಾಜೀನಾಮೆ ನೀಡಿದರೆ ನಮ್ಮವರು ಸಿಎಂ ಕುರ್ಚಿ ಮೇಲೆ ಕುಳಿತುಕೊಳ್ಳಲ್ಲ. ಸಿಎಂ ಬಿಎಸ್‍ವೈ ಆಪರೇಷನ್ ಕಮಲದ ಮೂಲಕ ಆಡಳಿತಕ್ಕೆ ಬಂದಿದ್ದಾರೆ. 2008 ರಲ್ಲಿ ಕೂಡ ಆಪರೇಷನ್ ಕಮಲದ ಮೂಲಕ ಆಡಳಿತಕ್ಕೆ ಬಂದಿದ್ದಾರೆ ಅಂತ ಆರೋಪ ಮಾಡಿದರು.
Laxmi News 24×7