Breaking News

ಬುಧವಾರ ಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಜಿಲ್ಲೆಯ ರೈತರೊಬ್ಬರ ಶವ ಪತ್ತೆ

Spread the love

ವಿಜಯಪುರ : ಬುಧವಾರ ಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಜಿಲ್ಲೆಯ ರೈತರೊಬ್ಬರ ಶವ ಪತ್ತೆಯಾಗಿದೆ.

ಆಲಮೇಲ ತಾಲೂಕಿನ ಕುರಬತಹಳ್ಳಿ ಗ್ರಾಮದ ಬಸಣ್ಣ ಅಂಬಾಗೋಳ (55) ಕರಬತಹಳ್ಳಿ ಹಳ್ಳದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕರಬತಹಳ್ಳಿ ಹಳ್ಳ ತುಂಬಿಬಂದಿತ್ತು. ಹಳ್ಳದ ಪ್ರವಾಹ ಲೆಕ್ಕಿಸದೇ ಮನೆಗೆ ಮರಳಲು ಹಳ್ಳಕ್ಕೆ ಇಳಿದಾಗ ನೀರಿನ ಸೆಳವಿಗೆ ಸಿಕ್ಕು ರೈತ ಕೊಚ್ಚಿಕೊಂಡು ಹೋಗಿದ್ದರು.

ವಿಷಯ ತಿಳಿಯುತ್ತಲೇ ಬುಧವಾರ ದಿಂದಲೇ ಕೊಚ್ಚಿಕೊಂಡು ಹೋಗಿದ್ದ ರೈತನಿಗಾಗಿ ತಾಲೂಕ ಆಡಳಿತದ ನೇತೃತ್ವದಲ್ಲಿ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬಸಣ್ಣನಿಗಾಗಿ ನಿರಂತರ ಶೋಧ ಕಾರ್ಯಾಚರಣೆಚ ನಡೆಸಿದ್ದರು.

ಅಂತಿಮವಾಗಿ ಭಾನುವಾರ ಮಧ್ಯಾಹ್ನ ರೈತನ ಶವ ಗ್ರಾಮದ ಹಳ್ಳದ ಮುಳ್ಳು ಬೇಲಿಯಲ್ಲಿ ಪತ್ತೆಯಾಗಿದೆ.

 

ಮೃತರ ಕುಟುಂಬಕ್ಕೆ ತಹಶೀಲ್ದಾರ ಸಂಜೀವಕುಮಾರ ದಾಸರ ಸಾಂತ್ವನ ಹೇಳಿ, ಅಲ್ಲದೇ ಮೃತ ರೈತನ‌ ಕುಟುಂಬಕ್ಕೆ ಸರ್ಕಾರದಿಂದ ಬರುವ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.


Spread the love

About Laxminews 24x7

Check Also

ಅಗಷ್ಟ 29 ಮತ್ತು 30 ರಂದು ಹುಕ್ಕೇರಿ ಅವುಜಿಕರ ಮಠದ ಜಾತ್ರಾಮಹೋತ್ಸವ ಜರಗುವದು – ಮಂಜುನಾಥ ಮಹಾರಾಜ.

Spread the loveಹುಕ್ಕೇರಿ : ಅಗಷ್ಟ 29 ಮತ್ತು 30 ರಂದು ಹುಕ್ಕೇರಿ ಅವುಜಿಕರ ಮಠದ ಜಾತ್ರಾಮಹೋತ್ಸವ ಜರಗುವದು – …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ