ಬೆಂಗಳೂರು : ಸದ್ಯಕ್ಕೆ 2 ಡೋಸ್ ಕೊರೋನಾ ಲಸಿಕೆ ಪಡೆದಂತ ಸಿಬ್ಬಂದಿಗಳನ್ನು ಬಳಸಿಕೊಂಡು, ಸಾರಿಗೆ ಸಂಚಾರ ಆರಂಭಿಸಲಾಗಿದೆ. ಈಗ 2 ಡೋಸ್ ಲಸಿಕೆ ಪಡೆದಂತ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿ, ಸಂಚಾರ ಆರಂಭಿಸಿದ್ದಾರೆ. ಪ್ರಯಾಣಿಕರಿಗೆ ತೊಂದರೆಯಾಗದಂತೆಯಥಾಸ್ಥಿತಿ ಸಂಚಾರ ಆರಂಭ ಎಂಬುದಾಗಿ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ವಿಧಾನ ಸೌಧ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿಯವರು, BMTC ಸ್ಪಲ್ಪ ಗೊಂದಲ ಇತ್ತು, ಮಧ್ಯಾಹ್ನ ದ ನಂತರ ಸರಿ ಆಗಿದೆ. 2 ಡೋಸ್ ಆಗಿರುವ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿದೆ. ಶೇ 90ರಷ್ಟು ಸಿಬ್ಬಂದಿಗೆ ವ್ಯಾಕ್ಸಿನ್ ನೀಡಲಾಗಿದೆ. BMTCಬಸ್ ಸಂಚಾರ ಸ್ವಲ್ಪಗೊಂದಲ ಆಗಿದೆ. 100 ಕ್ಕೆ 60ರಷ್ಟು ಚಾಲಕರು, ನಿರ್ವಾಹಕ ರು ಉತ್ತರ ಕರ್ನಾಟಕದಿಂದ ಬರೋದು ವಿಳಂಬ ಆಗಿದೆ. ನಾಳೆ ಇಂದ BMTC, ಕೆ ಎಸ್ ಆರ್ ಟಿ ಸಿ ಬಸ್ ಸಂಚಾರ ಎಲ್ಲಾ ಸರಿ ಆಗಲಿದೆ ಎಂಬುದಾಗಿ ತಿಳಿಸಿದರು.