ನವದೆಹಲಿ : ವೈದ್ಯಕೀಯ ಸೇವಾಕರ್ತರ ಮೇಲೆ ನಡೆಯುವ ಹಿಂಸಾಚಾರದ ಬಗ್ಗೆ ದೇಶದಲ್ಲಿ ಒಂದು ಸಮಗ್ರವಾದ, ಏಕರೂಪ ಮತ್ತು ಪರಿಣಾಮಕಾರಿ ಕಾನೂನನ್ನು ಜಾರಿಗೊಳಿಸಬೇಕೆಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ಆಗ್ರಹಿಸಿದೆ. ಈ ಕುರಿತು ಐಎಂಎ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರ ಬರೆದಿದೆ.
ದೇಶದಲ್ಲಿ ವೈದ್ಯರ ವಿರುದ್ಧ ವರದಿಯಾಗುತ್ತಿರುವ ಹಲ್ಲೆಗಳ ಹಿನ್ನೆಲೆಯಲ್ಲಿ ಐಎಂಎ ಈ ಮನವಿ ಮಾಡಿದೆ. ಇತ್ತೀಚಿನ ಪ್ರಕರಣದಲ್ಲಿ ಅಸ್ಸಾಂನಲ್ಲಿ ಕಿರಿಯ ವೈದ್ಯರೊಬ್ಬರನ್ನು ಮೃತರೋಗಿಯ ಸಂಬಂಧಿಕರ ದೊಡ್ಡ ಗುಂಪು ಮನಬಂದಂತೆ ಥಳಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದೆ.
‘ವರ್ಷಗಳು ಕಳೆದಂತೆ ಆರೋಗ್ಯಸೇವಾಕರ್ತರ ಮೇಲಿನ ಹಿಂಸಾಚಾರ ಪ್ರಕರಣಗಳು ಹೆಚ್ಚಿವೆ ಮತ್ತು ವ್ಯಾಪಕವಾಗಿವೆ. ಈ ಆತಂಕಕಾರಿ ವಿಷಯವು ವೈದ್ಯರ ಕಾರ್ಯನಿರ್ವಹಣೆಗೆ ಕುತ್ತಾಗಿದೆ’ ಎಂದು ಹೇಳಿರುವ ಐಎಂಎ, ‘ಭಾರತದಲ್ಲಿ ಆರೋಗ್ಯಸೇವೆಗೆ ಸಂಬಂಧಿಸಿದ ಹಿಂಸಾಚಾರದ ವಿರುದ್ಧ ಸಮಗ್ರವಾದ ಕಾನೂನಿನ ಅಗತ್ಯವಿದೆ. ಆದ್ದರಿಂದ ಪರಿಣಾಮಕಾರಿ ಮತ್ತು ಬಲ ಹೊಂದಿದ ಕಾಯ್ದೆಯೊಂದನ್ನು ಅನುಮೋದಿಸಬೇಕೆಂದು ಮನವಿ ಮಾಡುತ್ತೇವೆ’ ಎಂದು ಪತ್ರದಲ್ಲಿ ಹೇಳಿದೆ.
Laxmi News 24×7