ಗೋಕಾಕ: ಸೋಯಾಬಿನ ಬೆಳೆಯನ್ನು ಬಿತ್ತನೆ ಮಾಡುವ ರೈತರು ಹದವಾದ ಮಳೆಯಾದ ಮೇಲೆ ಭೂಮಿಯ ತೇವಾಂಶ ನೋಡಿಕೋಂಡು ಬಿತ್ತನೆ ಮಾಡಬೇಕು ಎಂದು ಗೋಕಾಕ ಹಾಗೂ ಮೂಡಲಗಿ ತಾಲೂಕಿನ ರೈತರಿಗೆ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ. ನದಾಫ ರವರು ಸಲಹೆ ನೀಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುವ ಅವರು, ಸೋಯಾಬಿನ ಬಿತ್ತನೆ ಮಾಡಲು ಜೂನ ಮೊದಲನೆಯ ವಾರದಿಂದ ಜುಲೈ 2ನೇ ವಾರದವರೆಗೆ ಅವಕಾಶ ಇದ್ದು ಸಾಕಷ್ಠು ಮಳೆಯಾಗಿ ಭೂಮಿ ಹಸಿಯಾದ ನಂತರ ಸೋಯಾಬಿನ್ ಬಿತ್ತನೆ ಮಾಡಬೇಕು ಅಲ್ಲದೆ ನೀರಾವರಿ ಪ್ರದೇಶದಲ್ಲಿ ಬಿತ್ತಣೆ ಮಾಡುವವರು, ಭೂಮಿಗೆ ಮೊದಲು ನೀರು ಹಾಯಿಸಿ ನಂತರ ಬಿತ್ತನೆ ಮಾಡುವುದು ಸೂಕ್ತವಾಗಿರುತ್ತದೆ ಸದ್ಯಕ್ಕೆ ಬಿಸಿಲಿನಿಂದ ಕೂಡಿದ ವಾತಾವರಣ ಇದ್ದು ಇದು ಸೋಯಾಬಿನ ಬಿತ್ತಣೆಗೆ ಸೂಕ್ತವಾಗಿರುವುದಿಲ್ಲವೆಂದು ತಿಳಿಸಿದ್ದಾರೆ.
ಗೋಕಾಕ ತಾಲೂಕಿನ ಕುಂದರನಾಡು (ಅಂಕಲಗಿ) ಭಾಗದಲ್ಲಿ ಅಲ್ಪ ಮಳೆಯಾಗಿದ್ದು ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಸೋಯಾಬಿನ ಬಿತ್ತುವ ರೈತರಿಗೆ ಮಳೆಯ ಅವಶ್ಯಕತೆ ಇದೆ ಭೂಮಿಯಲ್ಲಿ ತೇವಾಂಶ ಕಡಿಮೆ ಇದ್ದಾಗ ಮತ್ತು ಸದ್ಯದ ವಾತಾವರಣದಲ್ಲಿ ಸೋಯಾಬಿನ ಬಿತ್ತುವುದರಿಂದ ಮೊಳಕೆ ಪ್ರಮಾಣ ಕಡಿಮೆ ಬರುತ್ತದೆ ಅಲ್ಲದೇ ರೈತರು ಸೋಯಾಬಿನ ಬೀಜವನ್ನು 2 ಇಂಚಿಗಿಂತ ಹೆಚ್ಚಿನ ಆಳದಲ್ಲಿ ಬಿತ್ತನೆ ಮಾಡಿದರೂ ಸಹ ಮೋಳಕೆ ಪ್ರಮಾಣ ಕಡಿಮೆ ಬರುತ್ತದೆ ಆದ್ದರಿಂದ ರೈತರು ಮಣ್ಣಿನ ತೇವಾಂಶ ನೋಡಿಕೊಂಡು ಬಿತ್ತಣೆ ಮಾಡುವಂತೆ ರೈತರಿಗೆ ಸಲಹೆ ನೀಡಿದ್ದಾರೆ.
Laxmi News 24×7