Breaking News

ಸಿ.ಎಂ. ರಕ್ಷಣೆಗೆ ಮಠಾಧೀಶರ ಮೇಲೆ ಪುತ್ರನ ಒತ್ತಡ : ಯತ್ನಾಳ

Spread the love

ವಿಜಯಪುರ : ಭ್ರಷ್ಟಾಚಾರದಲ್ಲಿ ತೊಡಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕುರ್ಚಿ ಉಳಿಸಲು ಅವರ ಮಗ ವಿಜಯೇಂದ್ರ ವೀರಶೈವ ಮಠಾಧೀಶರ ಮೇಲೆ ಒತ್ತಡ ಹೇರುತ್ತಿದ್ದಾರೆ. ಆದರೆ ರಾಜ್ಯದಲ್ಲಿ ಯಾವುದೇ ಒಬ್ಬ ಮಠಾಧೀಶರೂ ಸಮಾಜ ಕಳಂಕಿತರ ಪರವಾಗಿ, ವಿಶ್ವಗುರು ಬಸವಣ್ಣನವರ ತತ್ವಕ್ಕೆ ವಿರುದ್ಧವಾದ ನಿಲುವು ತಳೆಯುವದಿಲ್ಲ ಎಂದು ವಿಜಯಪುರ ನಗರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತೆ ಮುಖ್ಯಮಂತ್ರಿ ವಿರುದ್ಧದ ತಮ್ಮ ಬಂಡಾಯ ಮುಂದುವರೆಸಿದ್ದಾರೆ.

ಭಾನುವಾರ ಸಂಜೆ ತಮ್ಮ ಫೇಸ್‍ಬುಕ್‍ನಲ್ಲಿ ಈ ಕುರಿತು ಬರಹ ಹಾಕಿರುವ ಯತ್ನಾಳ, ತಮ್ಮ ತಂದೆಯ ಸ್ಥಾನದ ಪತನದ ಮುನ್ಸೂಚನೆ ಸಿಕ್ಕ ಹಿನ್ನೆಲೆಯಲ್ಲಿ ಅವರ ಮಗ ವಿಜಯೇಂದ್ರ ವೀರಶೈವ-ಲಿಂಗಾಯತ ಮಠಾಧೀಶರ ಮೂಲಕ ಒತ್ತಡ ಹೇರುವ ಕೆಲಸ ಆರಂಭಿಸಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಇಂಥ ಭ್ರಷ್ಟರ ಪರವಾಗಿ ಯಾರಾದರೂ ಹೇಳಿಕೆ ನೀಡಿದರೆ ಅದು ನಮ್ಮ ವೀರಶೈವ-ಲಿಂಗಾಯತರ ಅಧ:ಪತನವಾದಂತೆ. ಎಂದಿಗೂ ಸಮಾಜ ಸಮಾಜಮುಖಿ ಆಗಿರಬೇಕೇ ಹೊರತು ಹಣದ ಆಮೀಷಕ್ಕೆ ಒಳಗಾಗಬಾರದು. ಇದು ನಮ್ಮ ಪಂಚಪೀಠ, ಬಸವಾದಿ ಪ್ರಮಥರ ತತ್ತ್ವಕ್ಕೆ ವಿರೊಧ ಆಗಿದೆ ಎಂದು ಮಠಾಧೀಶರಿಗೂ ಪರೋಕ್ಷವಾಗಿ ಕುಟುಕಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದರೆ ಇಡೀ ವೀರಶೈವ ಲಿಂಗಾಯತ ಸಮಾಜಕ್ಕೆ ಅವಮಾನ ಆಗುತ್ತದೆ. ವೀರಶೈವರನ್ನು ಕಡೆಗಣಿಸಿದಂತಾಗುತ್ತದೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಇದರಿಂದ ಪಕ್ಷಕ್ಕೆ ಭಾರಿ ಹಿನ್ನಡೆಯಾಗುತ್ತದೆ. ಪಕ್ಷವೇ ಕರ್ನಾಟಕದಲ್ಲಿ ನಾಶವಾಗುತ್ತದೆ ಬೆದರಿಕೆ ಹಾಕಿಸುತ್ತಿದ್ದಾರೆ. ಮಠಾಧೀಶರ ಮೂಲಕ ಹೇಳಿಕೆ ನೀಡಲು ಒತ್ತಡ ಪ್ರಾರಂಭಿಸಿದ್ದಾರೆ. ಇದಕ್ಕಾಗಿ ಎಷ್ಟು ಹಣ ಖರ್ಚಾದರೂ ಸರಿ ಎಂಬಂತೆ ಎಲ್ಲರ ಸಂಪರ್ಕ ಮಾಡತೊಗಿದ್ದಾರೆ ಎಂದು ದೂರಿದ್ದಾರೆ.

ಭ್ರಷ್ಟಾಚಾರದಿಂದ ಇಡಿ ಕುಟುಂಬ ರಾಜ್ಯವನ್ನು ಹಗಲು ದರೋಡೆ ಮಾಡುತ್ತಿದೆ ಇಂತಹ ಕುಟುಂಬದಿಂದ ನಮ್ಮ ರಾಜ್ಯವನ್ನು ಮುಕ್ತಗೊಳಿಸಲು ಯಾರೂ ಆಮೀಷಕ್ಕೆ ಒಳಗಾಗದೇ ಇವರ ಪರ ಹೇಳಿಕೆಯಾಗಲೀ, ಅಥವಾ ಇವರ ಪರ ಲಾಭಿ ಮಾಡಬಾರದೆಂದು ಕಳಕಳಿಯ ವಿನಂತಿ. ಭ್ರಷ್ಟಾಚಾರದಿಂದ ಗಳಿಸಿದ ಹಣದಿಂದ ಏನು ಬೇಕಾದರೂ ಖರೀಧಿಸಬಹುದು, ಎಂಬ ಸೊಕ್ಕಿನಿಂದ ಇಂದು ಎಲ್ಲರನ್ನೂ ಅಂದರೆ ಪೂಜ್ಯ ಮಠಾಧೀಶರನ್ನು. ಮಾಧ್ಯಮಗಳನ್ನು ವೀರೋಧ ಪಕ್ಷಗಳನ್ನು ಖರೀದಿ ಮಾಡುವ ಅಹಂಕಾರ ಮತ್ತು ಹಣದ ಪಿತ್ತ ನೆತ್ತಿಗೆ ಏರಿದೆ.

ತಮ್ಮಪರ ನಿಲುವು ತಳೆಯಲು ಒತ್ತಾಯಿಸುವುದು ಹಾಗು ಪ್ರಧಾನಿ ಶ್ರೀ ನರೇಂದ್ರ ಮೋದಿಜೀ ಹಾಗೂ ಪಕ್ಷದ ಕೇಂದ್ರದ ನಾಯಕರುಗಳನು ಕೆಟ್ಟ ಶಬ್ದಗಳಲ್ಲಿ ಟೀಕೀಸಲು ತಮ್ಮದೇ ಆದ ಖಾಸಗಿ ಜಾಲತಾಣ ಮೂಲಕ ಪ್ರೇರೇಪಿಸುತ್ತಿರುವುದು, ನಮ್ಮ ವೀರಶೈವ ಲಿಂಗಾಯತ ಸಮಾಜ ಎಂದಿಗೂ ಸಹಿಸಲ್ಲ. ಈ ರೀತಿ ಇವರ ಪರ ಹೋದರೆ ಸಮಾಜ ತಲೆತಗ್ಗಿಸಿ, ಭ್ರಷ್ಟ ಸಮಾಜವನಿಸುತ್ತದೆ ಎಂದೂ ಎಚ್ಚರಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ!!

Spread the love ಬೆಳಗಾವಿಯಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ!! ದೇಶದಲ್ಲಿನ ಎಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ