Breaking News

ಆಹಾರ ಪೊಟ್ಟಣಗಳ ಮೇಲೆ ಕೊರೊನಾ ಸೋಂಕಿತರಿಗೆ ವಿಶೇಷ ಸಂದೇಶ ಕಳುಹಿಸಿದ ಬಾಲಕ

Spread the love

ಸಂಪೂರ್ಣ ವಿಶ್ವವೇ ಸಂಕಷ್ಟದಲ್ಲಿರುವ ಈ ಕಾಲದಲ್ಲಿ ಆತ್ಮವಿಶ್ವಾಸ ತುಂಬಬಲ್ಲ ಸಣ್ಣ ಮಾತೂ ಸಹ ಭಾರೀ ಖುಷಿಯನ್ನ ಕೊಡಬಹುದು. ಇದೇ ಮಾತನ್ನ ಅತ್ಯಂತ ಚಿಕ್ಕ ವಯಸ್ಸಿಗೆ ಅರ್ಥ ಮಾಡಿಕೊಂಡ ಬಾಲಕನೊಬ್ಬ ತನ್ನ ತಾಯಿ ಕೋವಿಡ್​ ರೋಗಿಗಳಿಗೆಂದು ತಯಾರು ಮಾಡಿದ್ದ ಊಟದ ಪ್ಯಾಕೆಟ್​ಗಳ ಮೇಲೆ ‘ಖುಷಿಯಾಗಿರಿ’ ಎಂದು ಬರೆದಿದ್ದಾನೆ. ಬಾಲಕ ಈ ರೀತಿ ಆಹಾರ ಪೊಟ್ಟಣಗಳ ಮೇಲೆ ಸಂದೇಶ ಬರೆಯುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಫೋಟೋದಲ್ಲಿ ಹಸಿರು ಬಣ್ಣದ ಶರ್ಟ್ ಹಾಕಿದ್ದ ಬಾಲಕ ಆಹಾರದ ಪೊಟ್ಟಣಗಳ ಮೇಲೆ ಖುಷಿಯಾಗಿರಿ ಎಂದು ಬರೆದು ಒಂದು ಸ್ಮೈಲಿಯನ್ನ ಬಿಡಿಸಿದ್ದಾನೆ.

ಈ ಫೋಟೋವನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿರುವ @manishsarangal1 ಎಂಬವರು ‘ಈ ಬಾಲಕನ ತಾಯಿ ಕೋವಿಡ್ ಸೋಂಕಿತರಿಗೆಂದು ಆಹಾರದ ಪೊಟ್ಟಣವನ್ನ ತಯಾರಿಸಿದ್ರೆ ಈ ಪುಟ್ಟ ಫೋರ ಅವುಗಳ ಮೇಲೆ ಖುಷಿಯಾಗಿರಿ ಎಂದು ಶೀರ್ಷಿಕೆ ನೀಡಿದ್ದಾರೆ. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು ನೆಟ್ಟಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ