Breaking News

ಮಗು ಕಣ್ಣಿರು ಸುರಿಸುವುದನ್ನು ನೋಡಿದೆರ ನಿಮ್ಮ ಕರುಳೂ ಕಿತ್ತು ಬರುವುದರಲ್ಲಿ ಸಂದೇಹವಿಲ್ಲ.

Spread the love

ಬೆಳಗಾವಿ – ಕೊರೋನಾ ವಿಶ್ವವನ್ನೇ ಎಂತಹ ಸಂಕಷ್ಟಕ್ಕೆ ದೂಡಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸಾವಿರ ಸಾವಿರ ಜನ ಪ್ರಣಾ ಕಳೆದುಕೊೆಡಿದ್ದರೆ, ಲಕ್ಷಾಂತರ ಜನರು ಸೋಂಕಿಗೆ ಒಳಗಾಗಿ ಒದ್ದಾಡುತ್ತಿದ್ದಾರೆ.

ಇದೆಲ್ಲ ಒಂದು ಮುಖವಾದರೆ ಇಲ್ಲಿ ಅದರ ಇನ್ನೊಂದು ಮುಖವಿದೆ. ಈ ವೀಡಿಯೋ ನೋಡಿ ಇಲ್ಲಿರುವ ಕಂದಮ್ಮ ಅಮ್ಮಾ ಎಂದು ಅಳುವುದನ್ನು ನೋಡಿದರೆ, ಆ ಅಮ್ಮಾ ಅಲ್ಲೇ ಇದ್ದರೂ ಮಗುವನ್ನು ಮುದ್ದಿಸಲಾಗದೆ ಕಣ್ಣಿರು ಸುರಿಸುವುದನ್ನು ನೋಡಿದೆರ ನಿಮ್ಮ ಕರುಳೂ ಕಿತ್ತು ಬರುವುದರಲ್ಲಿ ಸಂದೇಹವಿಲ್ಲ.

ಬೆಳಗಾವಿ ಸಮೀಪದ ಹಲಗಾದ ಈ ಮಹಿಳೆ ಜಿಲ್ಲಾಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. 7 ದಿನಗಳ ಕಾಲ ಇವರು ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಸಧ್ಯ ಅವರನ್ನು ಮಿಲನ್ ಹೊಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿಡಲಾಗಿದೆ. ಇನ್ನು 14 ದಿನ ಮನೆಗೆ ಹೋಗುವಂತಿಲ್ಲ. ಅವರಿಗೆ ಪುಟ್ಟ ಮಗುವಿದೆ. ಆ ಮಗು ತಾಯಿಯನ್ನು ಕಾಣದೆ ದಿನವೂ ಕಣ್ಣೀರು ಹಾಕುತ್ತಿದ್ದಳು.

ಮಗುವಿನ ನೋವನ್ನು ನೋಡಲಾಗದೆ ಆಕೆಯ ಅಪ್ಪ ಬೈಕ್ ಮೇಲೆ ಕೂಡ್ರಿಸಿಕೊಂಡು ಬೆಳಗಾವಿಗೆ ಕರೆದುಕೊಂಡು ಬಂದಿದ್ದಾರೆ. ಮಿಲನ್ ಹೊಟೆಲ್ ಬಳಿ ಬಂದು ಅಮ್ಮನನ್ನು ಮಗುವಿಗೆ ತೋರಿಸಿ ಹೋಗೋಣ ಎಂದು ಕರೆ ತಂದಿದ್ದಾರೆ. ಆದರೆ ಅಮ್ಮನನ್ನು ನೋಡಿದ ಮಗು ಜೋರಾಗಿ ಅಮ್ಮಾ ಬಾ ಎಂದು ಕೂಗತೊಡಗಿದೆ. ಮಗುವನ್ನು ಕಂಡ ಅಮ್ಮನ ಕಣ್ಣೀರು ಮಾಸ್ಕ್ ಹಿಂದೆ ಕರಗಿ ಕರಗಿ ಹೋಗುತ್ತಿದೆ. ಅಲ್ಲಿನ ದೃಷ್ಯ ಎಂತವರನ್ನೂ ಹೃದಯವನ್ನೂ ಕರಗಿಸುವಂತಿತ್ತು.

https://youtu.be/AJqURxXmS_s

ಮಗುವನ್ನು ಮುಟ್ಟಿದರೆ ಎಂತಹ ಅಪಾಯ ಬಂದೀತು ಎನ್ನುವ ಕಲ್ಪನೆಯಿದ್ದ ತಾಯಿ ಮಗುವನ್ನು ನೋಡಿ ದುಃಖ ತಡೆದುಕೊಳ್ಳಲಾಗದೆ ವಾಪಸ್ ಕರೆದುಕೊಂಡು ಹೋಗುವಂತೆ ಗಂಡನಿಗೆ ಕೈ ಸನ್ನೆ ಮಾಡುತ್ತಾಳೆ. ಮಗು ಮಾತ್ರ ಅಮ್ಮಾ ಬಾ ಎಂದು ಅಳುತ್ತಲೇ ಇದ್ದಳು.

ಕೊನೆಗೂ ಅಳುವ ಮಗುವನ್ನು ಅಪ್ಪ ವಾಪಸ್ ಕರೆದುಕೊಂಡು ಹೋದರು. ಅಮ್ಮ, ಮಗುವಿನ ಅಗಲುವಿಕೆಯ ದೃಷ್ಯ ಅಲ್ಲಿದ್ದವರಲ್ಲೆಲ್ಲ ಕಣ್ಣೀರು ಕೋಡಿ ಹರಿಸಿತು.


Spread the love

About Laxminews 24x7

Check Also

ಸುವರ್ಣಸೌಧದಲ್ಲಿ ಬಾಪೂಜಿ ಜೀವನ ಚರಿತ್ರೆಯ ಅಪರೂಪದ ಫೋಟೋಗಳ ಪ್ರದರ್ಶನ

Spread the loveಬೆಳಗಾವಿ: ಕುಂದಾನಗರಿ ಈಗ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಸಜ್ಜಾಗುತ್ತಿದೆ. ಇದರ ನಡುವೆ ಚಳಿಗಾಲದ ಅಧಿವೇಶನ ನಡೆಯುತ್ತಿರುವ ಸುವರ್ಣ ವಿಧಾನಸೌಧದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ