Breaking News

‘ಹಿಂದೂಸ್ತಾನಿ ಭಾವು’ ಎಂದೂ ಕರೆಯಲ್ಪಡುವ ಹಿಂದಿ ಬಿಗ್​ ಬಾಸ್​ 3 ಖ್ಯಾತಿಯ ವಿಕಾಸ್​ ಫಾಟಕ್​ ಹೊಸದೊಂದು ವಿವಾದ

Spread the love

ಮುಂಬೈ : ‘ಹಿಂದೂಸ್ತಾನಿ ಭಾವು’ ಎಂದೂ ಕರೆಯಲ್ಪಡುವ ಹಿಂದಿ ಬಿಗ್​ ಬಾಸ್​ 3 ಖ್ಯಾತಿಯ ವಿಕಾಸ್​ ಫಾಟಕ್​ ಹೊಸದೊಂದು ವಿವಾದ ಸೃಷ್ಟಿಸಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಕರ್ಫ್ಯೂ ಜಾರಿಯಲ್ಲಿರುವ ಮುಂಬೈ ನಗರದಲ್ಲಿ ಆಂಬುಲೆನ್ಸ್ ಬಳಸಿಕೊಂಡು ಶಿವಾಜಿ ಪಾರ್ಕ್​ ತಲುಪಿ, ಪ್ರತಿಭಟನೆ ಕೈಗೊಂಡ ಫಾಟಕ್​​ರನ್ನು ಪೊಲೀಸರು ಬಂಧಿಸಿದ್ದಾರೆ.

ತಮ್ಮ ವಿವಾದಾತ್ಮಕ ವಿಡಿಯೋಗಳಿಗೆ ಹೆಸರಾಗಿರುವ ಗಾಯಕ ಫಾಟಕ್​, 12ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ನಿನ್ನೆ ಪ್ರತಿಭಟನೆ ನಡೆಸುತ್ತಿದ್ದರು. ನಗರದಲ್ಲಿ ಓಡಾಟದ ಮೇಲೆ ನಿರ್ಬಂಧ ಇರುವ ಕಾರಣ, ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಆಂಬುಲೆನ್ಸ್ ಒಂದನ್ನು ಬುಕ್​ ಮಾಡಿಕೊಂಡು ಶಿವಾಜಿ ಪಾರ್ಕ್​ಗೆ ಪ್ರಯಾಣಿಸಿದ್ದರು ಎನ್ನಲಾಗಿದೆ

ಸ್ಥಳೀಯ ಪೊಲೀಸ್​ ತಂಡವೊಂದು 12.30ರ ವೇಳೆಗೆ ಫಾಟಕ್​ರನ್ನು ಬಂಧಿಸಿತು. ಅವರ ವಿರುದ್ಧ ಸರ್ಕಾರಿ ಆದೇಶಗಳನ್ನು ಉಲ್ಲಂಘಿಸಿದ ಮತ್ತು ಕೊರೋನ ರೋಗ ಹರಡುವ ಅಪಾಯವನ್ನು ಸೃಷ್ಟಿಸಿದ ಆರೋಪಗಳ ಅಡಿಯಲ್ಲಿ ಎಫ್​.ಐ.ಆರ್. ದಾಖಲಿಸಲಾಗಿದೆ.


Spread the love

About Laxminews 24x7

Check Also

ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ

Spread the love ಅಸ್ವಸ್ಥಗೊಂಡ ಮಕ್ಕಳ ಆರೋಗ್ಯ ವಿಚಾರಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ ಬೆಳಗಾವಿ: ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದಲ್ಲಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ