Breaking News

ದೀಪ‌ ಬೆಳಗಿಸಿ ಪ್ರಧಾನಿ‌ ಮೋದಿ ಹೋರಾಟಕ್ಕೆ ಬೆಂಬಲ‌ ವ್ಯಕ್ತಪಡಿಸಿದ ರಮೇಶ ,ಬಾಲಚಂದ್ರಜಾರಕಿಹೊಳಿ

Spread the love

ಬೆಂಗಳೂರು: ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ದೀಪ‌ ಬೆಳಗಿಸಿ ಪ್ರಧಾನಿ‌ ಮೋದಿ ಅವರ ಕೊರೋನಾ ವಿರುದ್ದದ ಹೋರಾಟಕ್ಕೆ ಬೆಂಬಲ‌ ವ್ಯಕ್ತಪಡಿಸಿದರು.

ನಗರದ ಖಾಸಗಿ ಹೋಟೆಲ್ ನಲ್ಲಿ‌ ಮೇಣದ ಬತ್ತಿ ಹಚ್ಚುವ ಮೂಲಕ‌ ಕೋರೊನಾ ವಿರುದ್ದ ಹೋರಾಟಕ್ಕೆ ಬೆಂಬಲ‌‌ ಸೂಚಿಸಿ ನಾಳಿನ ಭರವಸೆಯ ಬೆಳಕಿಗಾಗಿ ಇಂದು ದೀಪ ಹಚ್ಚಬೇಕು ಎಂದು ತಿಳಿಸಿದ್ದಾರೆ

ಗೋಕಾಕ: ಮಾರಣಾಂತಿಕ‌ ರೋಗ ಕೊರೋನಾದಿಂದಾಗಿ ಸಂಕಷ್ಟದ ದಿನಗಳನ್ನು ಎದುರಿಸುತ್ತಿರುವ ದೇಶದ ಎಲ್ಲಾ ನಾಗರಿಕರಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಇಂದು ದೀಪ‌ ಬೆಳಗಿಸಿ ಪ್ರಧಾನಿ‌ ಮೋದಿ ಅವರ ಕರೆಗೆ ಜಲಸಂಪನ್ಮೂಲ‌ ಸಚಿವ ರಮೇಶ ಜಾರಕಿಹೊಳಿ ಬೆಂಬಲ ಸೂಚಿಸಿದರು.

ನಗರದ ತಮ್ಮ‌ ನಿವಾಸದಲ್ಲಿ ದೀಪ ಬೆಳಗಿಸಿದ ಅವರು “ಈ ದೀಪಗಳ ಹಣತೆಯು ನಮ್ಮೆಲ್ಲರ ಬದುಕಲ್ಲಿ‌‌ ಹೊಸ ಚೈತನ್ಯ ತರಲಿ ಮತ್ತು ಸಮಾಜವನ್ನು ಬಾಧಿಸುತ್ತಿರುವ ಈ ಸೋಂಕು ಶೀಘ್ರವಾಗಿ ನಿರ್ಮೂಲನೆಯಾಗಲಿ‌ ಎಂದು ಅವರು ಹಾರೈಸಿದ್ದಾರೆ.

ಪ್ರಧಾನಮಂತ್ರಿಗಳ ಮನವಿಗೆ ಓಗೊಟ್ಟು ದೀಪಗಳನ್ನು ಬೆಳಗಿಸಿ ನಾವೆಲ್ಲಾ ಒಗ್ಗಟ್ಟಾಗಿದ್ದೇವೆ ಎಂದು ಸಾರಿದ ಈ‌ ದಿನ ; ಮರೆಯಲಾಗದ ಕ್ಷಣ. ಈ ಸೋಂಕನ್ನು ನಿರ್ಮೂಲನೆ ಮಾಡಲು‌ ಸರ್ಕಾರ ಕಟಿಬದ್ಧವಾಗಿದ್ದು ಸಾರ್ವಜನಿಕರೂ ಸಹಾ ಲಾಕ್ ಡೌನ್ ನಿಯಮಗಳನ್ನು ಪಾಲಿಸಿ, ಸಾರ್ವಜನಿಕ ಅಂತರ ಕಾಯ್ದುಕೊಂಡಿರಬೇಕೆಂದು‌ ಮತ್ತೊಮ್ಮೆ ಮನವಿ‌ ಮಾಡುತ್ತಿದ್ದೇನೆ‌ ಎಂದು‌ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಈ‌ ಸಂದರ್ಭದಲ್ಲಿ ಸಚಿವರ ಪತ್ನಿ ಕೂಡ ದೀಪ ಬೆಳಗಿಸಿ ಸಾಥ್ ನೀಡಿದರು.


Spread the love

About Laxminews 24x7

Check Also

ಇಸ್ರೋ ಅಧ್ಯಕ್ಷ ಡಾ.ವಿ. ನಾರಾಯಣ, ಏಟ್ರಿಯಾ ವಿಶ್ವವಿದ್ಯಾಲಯ ಕುಲಾಧಿಪತಿ ಸಿ.ಎಸ್. ಸುಂದರರಾಜು, ಪದ್ಮಶ್ರೀ ಪುರಸ್ಕೃತ ಪ್ರಶಾಂತ ಪ್ರಕಾಶ

Spread the loveಬೆಳಗಾವಿ: “ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 25ನೇ ಘಟಿಕೋತ್ಸವದ ಭಾಗ-1 ಜುಲೈ 4ರಂದು ನಡೆಯಲಿದೆ. ಈ ವೇಳೆ ವಿಜ್ಞಾನ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ