ಮೈಸೂರು: ದೀಪ ಹಚ್ಚಿದ್ರೆ ವೈರಸ್ ದೀಪದ ಬಳಿ ಬರುತ್ತೆ. ಈ ವೇಳೆ ದೀಪದ ಶಾಖಕ್ಕೆ ವೈರಸ್ ಸಾಯುತ್ತೆ ಎಂದು ಬಿಜೆಪಿ ಶಾಸಕ ಎಸ್.ಎ ರಾಮದಾಸ್ ಹೇಳಿದ್ದಾರೆ.
ಮೈಸೂರಿನಲ್ಲಿ ದೀಪದ ಕುರಿತು ವಿಶೇಷ ವ್ಯಾಖ್ಯಾನ ನೀಡಿದ ಅವರು, ಮೋದಿಯವರ ದೀಪ ಬೆಳಗುವ ಕರೆಯ ಹಿಂದೆ ವೈಜ್ಞಾನಿಕ ಕಾರಣ ಇದೆ. ಅದಕ್ಕಾಗಿಯೇ ದೀಪ ಹಚ್ಚಲು ದೇಶಾದ್ಯಾಂತ ಕರೆ ನೀಡಿದ್ದಾರೆ ಎಂದರು.
ಕತ್ತಲಿನಲ್ಲಿ ದೀಪ ಹಚ್ಚಿದರೆ ಎಲ್ಲೆ ಇದ್ದರೂ ವೈರಸ್ ದೀಪದ ಬಳಿ ಬರುತ್ತೆ. ಆಗ ದೀಪದ ಶಾಖಕ್ಕೆ ವೈರಸ್ ತನ್ನ ಸಾವನ್ನ ಕಾಣುತ್ತೆ. ನಮ್ಮ ಮನೆಯ ಒಳಗೆ ವೈರಸ್ ಇರಬಾರದು ಎಂದು ಈ ಚಿಂತನೆ ಮಾಡಿದ್ದಾರೆ. ಹಾಗಾಗಿ ನಾಳೆ ರಾತ್ರಿ ಎಲ್ಲರೂ ದೀಪ ಹಚ್ಚಿ ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿ ಎಂದು ಮನವಿ ಮಾಡಿಕೊಂಡರು
ಮೈಸೂರಿನ ಎಂಜಿ ಮಾರುಕಟ್ಟೆಯಲ್ಲಿ ಶಾಸಕರು ಕ್ಯಾಂಡಲ್, ಮಾಸ್ಕ್ ಹಾಗೂ ದೀಪ ವಿತರಣೆ ಮಾಡಿದರು. ಈ ವೇಳೆ ಜನ ಮಾಸ್ಕ್ ಪಡೆಯಲು ಮುಗಿಬಿದ್ದಿದ್ದು, ತಕ್ಷಣ ಪೊಲೀಸರು ದೌಡಾಯಿಸಿ ಜನರು ಗುಂಪು ಚದುರಿಸಿದರು.
ಶುಕ್ರವಾರ ಬೆಳಗ್ಗೆ 9 ಗಂಟೆಗೆ ಲೈವ್ ಬಂದ ಪ್ರಧಾನಿ ನರೇಂದ್ರ ಮೋದಿ, ಭಾನುವಾರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯ ಲೈಟ್ ಆಫ್ ಮಾಡಿ ಮನೆಯ ಬಾಲ್ಕನಿಯಲ್ಲಿ ದೀಪ ಬೆಳಗಿಎ ಎಂದು ದೇಶದ ಜನತೆಗೆ ಕರೆ ನೀಡಿದರು.