Breaking News

ಎಚ್ಚರ.! ಹ್ಯಾಕರ್ ಗಳು ನಿಮ್ಮ ವಯಕ್ತಿಕ ಮಾಹಿತಿಯನ್ನು ಹೀಗೂ ಸಹ ಹ್ಯಾಕ್ ಮಾಡಬಹುದು !

Spread the love

ಈ ಡಿಜಿಟಲ್ ಯುಗದಲ್ಲಿ ಎಲ್ಲವೂ ಆನ್ ಲೈನ್ ನಲ್ಲಿ ನಡೆಯುವಾಗ ಹ್ಯಾಕ್ ಗಳು ಆಗೋದು ಹೆಚ್ಚುತ್ತಿದೆ. ಒಂದಲ್ಲ ಒಂದು ರೀತಿಯಲ್ಲಿ ಹ್ಯಾಕರ್ ಗಳು ಬ್ಯಾಂಕ್, ಸೋಶಿಯಲ್ ಮೀಡಿಯಾ ಖಾತೆಯನ್ನು ಹ್ಯಾಕ್ ಮಾಡುತ್ತಾರೆ. ಹಾಗಂತ ನಿಮ್ಮ ಒಟಿಪಿ ಸೇಫ್ ಎಂದು ಕೊಂಡರೆ ಅದು ತಪ್ಪು. ಈಗ ನಿಮ್ಮ ಎಸ್ ಎಂಎಸ್, ಒಟಿಪಿ ಕೂಡ ಸೇಫ್ ಅಲ್ಲ, ಹ್ಯಾಕರ್ ಗಳು ನಿಮ್ಮ ವಾಟ್ಸ್ ಆಪ್ ಖಾತೆಯ ಮೇಲೂ ಪರಿಣಾಮ ಬೀರಬಹುದು.

ಒಂದು ವರದಿಯ ಪ್ರಕಾರ, ಹ್ಯಾಕರ್ ಗಳು ಈಗ ನಿಮ್ಮ ವೈಯಕ್ತಿಕ ಡೇಟಾವನ್ನು ಕದಿಯಲು ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಮತ್ತು ಅವರು ನಿಮ್ಮ ಸ್ಮಾರ್ಟ್ ಫೋನ್ ಗಳಿಂದ ಡೇಟಾವನ್ನು ದೋಚಲು ಎಸ್ ಎಂಎಸ್ ಅನ್ನು ಬಳಸುತ್ತಿದ್ದಾರೆ. ಅವರು ಭದ್ರತಾ ಲೋಪಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ, ಎಸ್ ಎಂಎಸ್, ಒಟಿಪಿಯನ್ನು ಒಳಗೊಂಡಂತೆ, ಅಥವಾ ವಾಟ್ಸಾಪ್ ನಂತಹ ಸೇವೆಗಳಿಗೆ ಲಾಗಿನ್ ಲಿಂಕ್ ಗಳ ಮೂಲಕ ಸುಲಭವಾಗಿ ಹ್ಯಾಕ್ ಮಾಡಲಾಗುತ್ತದೆ.

ಮದರ್ ಬೋರ್ಡ್ ವರದಿಗಾರ ಜೋಸೆಫ್ ಕಾಕ್ಸ್ ಅವರು ಈ ಹ್ಯಾಕರ್ ಗಳು ವ್ಯವಹಾರ ಉದ್ದೇಶಗಳಿಗಾಗಿ ಬಳಸಲಾಗುವ ಎಸ್ ಎಂಎಸ್ ಅನ್ನು ಹ್ಯಾಕ್ ಮಾಡಲು ಬಳಸುತ್ತಾರೆ ಎಂದು ಹೇಳಿದ್ದಾರೆ. ಈ ಇಡೀ ಪ್ರಯೋಗವನ್ನು ತಮ್ಮ ವೈಯಕ್ತಿಕ ದೂರವಾಣಿ ಸಂಖ್ಯೆ ಬಳಸಿ ಅವರು ಮಾಡಿದರು.

‘ನನ್ನ ಫೋನ್ ಅನ್ನು ಹೀಗೆ ಗಮನಿಸಿದಾಗ ಅದು ಹ್ಯಾಕ್ ಆಗಿರುವ ಯಾವುದೇ ಕುರುಹುಗಳಿರಲಿಲ್ಲ. ನಾನು ಇನ್ನೂ ಟಿ-ಮೊಬೈಲ್ ನೆಟ್ ವರ್ಕ್ ಗೆ ಸಂಪರ್ಕಿತನಿದ್ದೇನೆ ಎಂದು ಫೋನ್ ಹೇಳಿದೆ. ಅಲ್ಲಿ ಯಾವುದೂ ಅಲ್ಲಿ ಎಲ್ಲವೂ ಸಹಜವಾಗಿತ್ತು. ಆದರೆ ಹ್ಯಾಕರ್ ವೇಗವಾಗಿ, ಹ್ಯಾಕ್ ಮಾಡಿ ಬಹುಮಟ್ಟಿಗೆ ನನ್ನ ಟೆಕ್ಸ್ಟ್ ಮೆಸೇಜ್ ಗಳನ್ನು ಸ್ವತಃ ತಾನೇ ಮರುನಿರ್ದೇಶಿಸಿದ. ಎಲ್ಲವೂ ಕೇವಲ 16 ಡಾಲರ್ ಗೆ ಮಾತ್ರ’ ಎಂದು ವಿ.ಎಸ್. ವರದಿ ತಿಳಿಸಿದೆ. .

ಈ ದಾಳಿ, ಆ ಫೋನ್ ನಂಬರ್ ಗೆ ಸಂಬಂಧಿಸಿದ ಸಾಮಾಜಿಕ ಮಾಧ್ಯಮ ಖಾತೆಗಳ ಲಾಗ್ ಇನ್ ನಂತಹ ಮಾಹಿತಿಪಡೆಯಲು ಗುರಿಹೊಂದಿದೆ.SMS ಮಾರ್ಕೆಟಿಂಗ್ ವ್ಯವಹಾರಗಳಲ್ಲಿ ಮೂಲತಃ ವ್ಯವಹರಿಸುವ ಸಕಾರಿ ಎಂಬ ಕಂಪನಿಯ ಸಹಾಯದಿಂದ ಹ್ಯಾಕರ್ ಈ ದಾಳಿಯನ್ನು ನಡೆಸಿದನು.


Spread the love

About Laxminews 24x7

Check Also

ಡಿಸೆಂಬರ 31 ಒಳಗಾಗಿ ಬೆಳಗಾವಿ ಜಿಲ್ಲೆ ವಿಭಜಿಸಿ,.

Spread the love ಡಿಸೆಂಬರ 31 ಒಳಗಾಗಿ ಬೆಳಗಾವಿ ಜಿಲ್ಲೆ ವಿಭಜಿಸಿ,. ಚಿಕ್ಕೋಡಿ: ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಡಿಸೆಂಬ‌ರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ