Breaking News

ಟ್ರಕ್ ಚಲಾಯಿಸುವಾಗ ಹೆಲ್ ಮೆಟ್ ಧರಿಸದ ಕಾರಣ 1000 ರೂ. ದಂಡ ವಿಧಿಸಿದ RTO

Spread the love

ಹೆಲ್ ಮೆಟ್ ಧರಿಸಿಲ್ಲ ಎಂಬ ಕಾರಣಕ್ಕೆ ಟ್ರಕ್ ಚಾಲಕನೋರ್ವನಿಗೆ 1,000 ರೂ. ದಂಡ ವಿಧಿಸಿದ ವಿಚಿತ್ರ ಘಟನೆ ಒಡಿಶಾದ ಗಂಜಮ್ ಜಿಲ್ಲೆಯಲ್ಲಿ ನಡೆದಿದೆ.

ದಂಡಕ್ಕೆ ಒಳಗಾದ ವ್ಯಕ್ತಿಯನ್ನು ಪ್ರಮೋದ್ ಕುಮಾರ್ ಸ್ವೈನ್ ಎನ್ನಲಾಗಿದ್ದು, ಆತ ತನ್ನ ಟ್ರಕ್ ನ ನೊಂದಣಿ ಸಂಖ್ಯೆಗೆ ಸಂಬಂಧಿಸಿದಂತೆ ಹೆಲ್ ಮೆಟ್ ಧರಿಸಿಲ್ಲದ ಕಾರಣಕ್ಕೆ ಚಲನ್ ಒಂದನ್ನು ಪಡೆದಾಗ ವಿಷಯ ಬೆಳಕಿಗೆ ಬಂದಿದ್ದು, ಈತ 1,000 ರೂ ದಂಡವನ್ನು ಕಟ್ಟಿದ ಬಳಿಕ ಟ್ರಕ್ ಚಾಲಕನೆಗೆ ಪರವಾನಿಗೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.

ಈ ಕುರಿತಾಗಿ ಮಾಹಿತಿ ಹಂಚಿಕೊಂಡಿರುವ ಟ್ರಕ್ ಚಾಲಕ ಪ್ರಮೋದ್ ಕುಮಾರ್ ಸ್ವೈನ್ ನಾನು ಕಳೆದ ಮೂರು ವರ್ಷಗಳಿಂದ ಟ್ರಕ್ ಚಾಲನೆ ಮಾಡುತ್ತಿದ್ದು, ಈ ಟ್ರಕ್ ಮೂಲಕ ನೀರು ಸರಬರಾಜು ಮಾಡುತ್ತಿದ್ದೆ. ನಾನು ನನ್ನ ಟ್ರಕ್ ನ ಪರವಾನಿಗೆಯ ರಿನಿವಲ್ ಪ್ರಕ್ರಿಯೆಗೆಂದು RTO ಕಚೇರಿಗೆ ತೆರಳಿದಾಗ ಹೆಲ್ ಮೆಟ್ ಧರಿಸದೆ ಟ್ರಕ್ ಚಾಲನೆ ಮಾಡಿರುವ ಕುರಿತಾಗಿ ದಂಡ ವಿಧಿಸಿರುವುದು ತಿಳಿದುಬಂದಿದೆ ಎಂದಿದ್ದಾರೆ.

ಅಧಿಕಾರಿಗಳು ಅನಾವಶ್ಯಕವಾಗಿ ಜನರಿಂದ ಹಣವನ್ನು ಸುಲಿಗೆ ಮಾಡುತ್ತಿದ್ದಾರೆ. ಈ ಕುರಿತಾಗಿ ಸರ್ಕಾರ ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಟ್ರಕ್ ಚಾಲಕ ಪ್ರಮೋದ್ ಕುಮಾರ್ ಸ್ವೈನ್ ಮನವಿ ಮಾಡಿದ್ದಾರೆ.


Spread the love

About Laxminews 24x7

Check Also

ತುಮಕೂರು: ಮುಂಬೈ ಮಾದರಿ ಗಣಪತಿ ವಿಗ್ರಹಗಳಿಗೆ ಹೆಚ್ಚು ಬೇಡಿಕೆ

Spread the loveತುಮಕೂರು: 2025ರ ಚೌತಿ ಬಂದೇ ಬಿಡ್ತು. ಭಕ್ತರು ವಿಭಿನ್ನ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಮುಂಬೈ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ