Breaking News

ಬೆಂಗಳೂರಲ್ಲಿ ಅನಾವರಣಗೊಂಡಿದೆ ಹೊಸ ಪಾನ್​ ಪ್ರಪಂಚ

Spread the love

ಊಟ ಆದ್ಮೇಲೆ ತಿನ್ನೋ ಪಾನ್ ಬೀಡಾ ನಿಮಗಿಷ್ಟವಾ?ಅದೆಷ್ಟು ವೆರೈಟಿ ಪಾನ್ ಗಳನ್ನ ಸವಿಯಬಹುದು ಎನ್ನುವ ಅಂದಾಜು ನಿಮಗಿದೆಯಾ? ಪಾನ್ ಅಂದ್ರೆ ಸಾದಾ ಪಾನ್, ಗುಲ್ಕನ್ ಹಾಕಿರೋ ಸ್ವೀಟ್ ಬೀಡಾ, ಜರ್ದಾ ಇಂಥಾ ಒಂದೈದಾರು ವೆರೈಟಿ ಪರಿಚಯ ಇರ್ಬಹುದು.. ಆದ್ರೆ ಇಲ್ಲೊಂದು ಕಡೆ ಬರೋಬ್ಬರಿ 150ಕ್ಕೂ ಹೆಚ್ಚು ವೆರೈಟಿ ಪಾನ್ ಗಳ ದೊಡ್ಡ ಭಂಡಾರವೇ ತೆರೆದಿದೆ… ಯಾವ್ದಪ್ಪಾ ಇದು ಅಂದ್ಕೊತಿದೀರಾ? ಇಲ್ಲಿದೆ ಫುಲ್ ಡೀಟೆಲ್ಸ್…!

ಪಿಸ್ತಾ ಪಾನ್, ಹೇಜಲ್ ನಟ್ ಪಾನ್, ಫೆರೆರೊ ರೋಶರ್ ಪಾನ್, ಆರೆಂಜ್ ಕೋಟೆಡ್ ಪಾನ್, ಮ್ಯಾಂಗೋ ಪಾನ್, ಲಿಚಿ ಪಾನ್…ಕಂಡು ಕೇಳರಿಯದ ಬಗೆಬಗೆಯ ಪಾನ್ ಗಳ ವಿಶಿಷ್ಟ ಮಳಿಗೆಯೊಂದು ಬೆಂಗಳೂರಿನ‌ ಫ್ರೇಜರ್ ಟೌನ್ ನಲ್ಲಿ ಗಮನ ಸೆಳೆಯುತ್ತಿದೆ. 150ಕ್ಕೂ ಹೆಚ್ಚು ಬಗೆಯ ಪಾನ್ ಗಳು‌ ಸಿಗೋ ಈ ಸ್ಥಳದ ಹೆಸರು ದಿ ಪಾನ್ ಸ್ಟುಡಿಯೋ.

ಅಂದ್ಹಾಗೆ ಇದೆಲ್ಲಾ ಶುರುವಾಗಿದ್ದು ಲಾಕ್ ಡೌನ್ ಸಂದರ್ಭದಲ್ಲಿ. ಮೂಲತಃ ಈವೆಂಟ್ ಆರ್ಗನೈಸರ್ ಆದ ಸಯ್ಯದ್ ಖಲೀಲ್ ಹೊಸದೇನಾದ್ರೂ ವ್ಯವಹಾರ ಆರಂಭಿಸಬಹುದಾ ಎಂದು ಯೋಚನೆ ಮಾಡ್ತಾ ಇದ್ರಂತೆ. ಆಗ ಅವ್ರಿಗೆ ಹೊಳೆದದ್ದೇ ಪಾನ್ ಸ್ಟುಡಿಯೋ. ವಿಶ್ವದ ಮೊಟ್ಟಮೊದಲ ಪಾನ್ ಸ್ಟುಡಿಯೋ ಇದು.

ಕಾಫಿ ಶಾಪ್ ಗಳಲ್ಲಿ ಆರಾಮಾಗಿ ಕುಳಿತು ಕಾಫಿ ಕುಡಿದು ಒಂದಷ್ಟು ಹೊತ್ತು ಹರಟಿ ಹೋಗೋ ರೀತಿಯಲ್ಲೇ ಇಲ್ಲಿ ಪಾನ್ ತಿನ್ನುತ್ತಾ, ಕಾಶ್ಮೀರಿ ಚಹಾ ಸವಿದು ಒಂದಷ್ಟು ಸಮಯ ಕಳೆಯೋಕೆ ಅವಕಾಶ ಇದೆ. ಜೊತೆಗೆ ಪಾನ್ ಗೆ ಸಂಬಂಧಿಸಿದ ನಾನಾ ವಸ್ತುಗಳೂ ಇಲ್ಲಿ ಮಾರಾಟಕ್ಕಿದೆ. 40 ರೂಪಾಯಿಯಿಂದ ಶುರುವಾಗೋ ಪಾನ್ ಗಳ ಬೆಲೆ 200 ರೂಪಾಯಿವರಗೆ ಇದೆ.


Spread the love

About Laxminews 24x7

Check Also

ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ

Spread the love ಚಿಕ್ಕೋಡಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕಛೇರಿ ಎದುರು ಕರವೇ ಪ್ರತಿಭಟನೆ ಗೋಕಾಕ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ